ಇಂಡಿ: ಬಿತ್ತನೆ ಬೀಜಗಳು ಗುಣಮಟ್ಟದಿಂದ ಕೂಡಿದ್ದರೆ ಅಧಿಕ ಇಳುವರಿ ಪಡೆಯಬಹುದು ಎಂದು ವಿಜಯಪುರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಹೇಳಿದರು.
ಅವರು ಮಂಗಳವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಪ್ರಗತಿಪರ ರೈತ ಗುರಣ್ಣ ಪವಾಡಿ ಇವರ ತೋಟದಲ್ಲಿ ಸ್ಯಾಂಗ್ರೇಟಾ ಮತ್ತು ಇಸಾಪ ಸಂಸ್ಥೆಯಿಂದ ಆಯೋಜಿಸಿದ ತೊಗರಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡುತ್ತಿದ್ದರು.
ಡಾ| ಸಿ.ಆರ್.ಕೊಂಡಾ ಮಾತನಾಡಿ, ರೈತರು ಮುಂಬರುವ ಸಾಲಿನಲ್ಲಿ ಟಿಎಸ್ 3 ಆರ್ ತೊಗರಿ ತಳಿಯ ಬದಲಾಗಿ ಜಿಆರ್ ಜಿ 811 ತಳಿಯನ್ನು ಉಪಯೋಗಿಸಿದರೆ ಗುಣಮಟ್ಟದ ಬಿತ್ತನೆ ಬೀಜದಿಂದ ರೈತರು ಅರ್ಥಿಕವಾಗಿ ಸದೃಡರಾಗಿರುವ ಸಾಕಷ್ಟು ಉದಾಹರಣೆಗಳಿವೆ ಎಂದರು.
ಪ್ರಗತಿಪರ ರೈತ ಸಂಗನಗೌಡ ಪಾಟೀಲ ಮಾತನಾಡಿ ತೊಗರಿ ಬೆಳೆಯ ಸುತ್ತಲೂ ಜೇನುಹುಳ ಸಾಗಾಣಿಕೆ ಮಾಡಲು ಮತ್ತು ಹೊಲದ ಸುತ್ತಲೂ ಗುರೆಳ್ಳು, ಎಳ್ಳು ಬೆಳೆಯಲು ಸಲಹೆ ನೀಡಿದರು.
ರವಿ ದೇಶಮುಖ, ರಾಜಶೇಖರ ಕಟಗಿ, ಆರ್.ಸಿ.ಗುಂಡಪ್ಪಗೋಳ, ರೈತ ಗುರಣ್ಣ ಪವಾಡಿ ಮಾತನಾಡಿದರು. ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಗಿರಿಮಲ್ಲ ಬಿರಾದಾರ, ಮಳಸಿದ್ದ ಗುಡ್ಡೊಡಗಿ, ಶ್ರೀಶೈಲ ಕುಂಬಾರ, ಮಲ್ಲಾಡ್, ಅಶೋಕ ಬಿರಾದಾರ, ಪ್ರವೀಣ, ಶರಣಪ್ಪ, ಹಣಮಂತ, ಇಸ್ಮಾಯಿಲ್ ಇದ್ದರು