Advertisement
ಶ್ರೀ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ರಾಜ್ಯ ರೈತ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈತಪರ ಯೋಜನೆಗಳನ್ನು ವಿಳಂಬವಿಲ್ಲದೆ ಅವರಿಗೆ ತಲುಪಿಸುವಲ್ಲಿ ಎಲ್ಲ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ. ನೀವು ನಮ್ಮೊಂದಿಗಿರಿ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರೈತ ಸಮುದಾಯ ಕಾಳಜಿ ವಹಿಸಬೇಕು. ರೈತರ ಎಲ್ಲ ಅಹವಾಲುಗಳಿಗೆ ಸರ್ಕಾರಿ ಕಚೇರಿಗಳು ಯಾವಾಗಲೂ ತೆರೆದಿರುತ್ತವೆ ಎಂದರು.
Related Articles
Advertisement
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳೇರ ಮುಖ್ಯ ಅತಿಥಿಯಾಗಿ ಮಾತನಾಡಿ, ಬೆಳೆವಿಮೆ ನ್ಯಾಯಯುತವಾಗ ಸರ್ಕಾರ ನೀಡುವಲ್ಲಿ ವಿಫಲವಾಗಿರುವಾಗ ಅದನ್ನು ಹೋರಾಟದ ಮೂಲಕ ಪಡೆದು ಇದನ್ನು ರೈತ ಸಮುದಾಯದ ಮುಂದೆ ಇಡಲಾಗಿದೆ. ಜನಪ್ರತಿನಿಧಿಗಳು ರೈತರ ಪರವಾಗಿ ನಿಲ್ಲದೆ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸವಣೂರು ಉಪವಿಭಾಗಾಧಿಕಾರಿ ಬೋಯಾರ ಹರ್ಷಲ್ನಾರಾಯಣರಾವ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು. ಮಾಲತೇಶ ಪರಪ್ಪನವರ, ಸೋಮಶೇಖರ ಕೋತಂಬರಿ, ಮಂಜುಳಾ ಅಕ್ಕಿ, ತಹಶೀಲ್ದಾರ್ ಎಂ.ಗಂಗಪ್ಪ, ಸಂಗಮೇಶ ಹಕ್ಲಪ್ಪ ನವರ, ರೈತ ಮುಖಂಡರಾದ ಮಹಾ ಲಿಂಗಪ್ಪ ಅಕ್ಕಿವಳ್ಳಿ, ರುದ್ರಗೌಡ ಕಾಡನ ಗೌಡ್ರ, ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗಂಬಿ, ಕರಬಸಪ್ಪ ಅಗಸಿಬಾಗಿಲ, ದಿಳ್ಳೆಪ್ಪ ಮಣ್ಣೂರ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಶಿವಬಸಪ್ಪ ಗೋವಿ, ಮಹಮ್ಮದ್‌ಗೌಸ ಪಾಟೀಲ ಪಾಲ್ಗೊಂಡಿದ್ದರು.
ಸನ್ಮಾನ: ರೈತ ಹೋರಾಟಕ್ಕೆ ಸಹಕಾರಿಸಿದ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಮುಖಂಡರು ಹಾಗೂ ರೈತ ಮುಖಂಡರನ್ನು ಗೌರವಿಸಲಾಯಿತು.