ಮೇರಿಹಿಲ್: ಗೃಹ ರಕ್ಷಕರ ಸೇವೆಗೆ ಸೂಕ್ತ ಮನ್ನಣೆ ದೊರೆಯಬೇಕು ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೊನಾವಣೆ ಹೇಳಿದ್ದಾರೆ. ಮಂಗಳವಾರ ಮೇರಿಹಿಲ್‌ನಲ್ಲಿರುವ ದ.ಕ ಜಿಲ್ಲಾ ಗೃಹರಕ್ಷಕದಳ ಕಚೇರಿ ಯಲ್ಲಿ ಜರಗಿದ ಅಖೀಲ ಭಾರತ ಗೃಹ ರಕ್ಷಕದಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗೃಹರಕ್ಷಕರು ಪೊಲೀಸರೊಂದಿಗೆ ಕೈ ಜೋಡಿಸಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಸೇವೆ ಶ್ರೇಷ್ಠವಾದುದು ಎಂದು ಸೊನಾವಣೆ ಹೇಳಿದರು.ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ| ಮುರಲೀ ಮೋಹನ್ ಚೂಂತಾರು ಅವರು ಅಧ್ಯಕ್ಷತೆ ವಹಿಸಿದ್ದರು.
ದ.ಕ ಜಿಲ್ಲಾಗೃಹ ರಕ್ಷಕದಳದ ಉಪ ಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಕಡಬ ಘಟಕಾಧಿಕಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಂಗಳೂರು ಘಟಕದ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.
ಪಣಂಬೂರು ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ ವಂದಿಸಿದರು. ಜಿಲ್ಲಾ ಕಚೇರಿಯ ಸಿಬಂದಿಗಳಾದ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ಮೀನಾಕ್ಷಿ, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರಾ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ ಎಂ., ಮೂಡುಬಿದಿರೆ ಪ್ರಭಾರ ಘಟಕಾಧಿಕಾರಿ ಪಂಡಿರಾಜ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಮತ್ತು ಗೃಹರಕ್ಷಕ ಸಿಬಂದಿ ಉಪಸ್ಥಿತರಿದ್ದರು.
ಸಮ್ಮಾನ ಸುಬ್ರಹ್ಮಣ್ಯದ ಪ್ರಭಾರ ಘಟಕಾಧಿಕಾರಿ ಹರಿಶ್ಚಂದ್ರ, ಬಂಟ್ವಾಳ ಘಟಕಾಧಿಕಾರಿ ಐತಪ್ಪ, ಮೂಲ್ಕಿ ಘಟಕಾಧಿಕಾರಿ ಲೋಕೇಶ್, ಪುತ್ತೂರು ಘಟಕದ ಸೆಕ್ಷನ್ ಲೀಡರ್ ಜಗನ್ನಾಥ್, ಮಂಗಳೂರು ಘಟಕದ ಸರ್ಜೆಂಟ್ ಸುನೀಲ್ ಕುಮಾರ್, ಪಣಂಬೂರು ಘಟಕದ ಸೆಕ್ಷನ್ ಲೀಡರ್ ಜಗದೀಶ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯವರು ಸಮ್ಮಾನಿಸಿದರು.