Advertisement

ಬದುಕಿನ ಬೇರುಗಳು ಗಟ್ಟಿಯಾಗಿರಲಿ

10:18 AM Jun 06, 2022 | Team Udayavani |

ನವಲಗುಂದ: ಅಂದು ಶಿಕ್ಷಣ ಸೇವೆಯಾಗಿತ್ತು, ಇಂದು ವ್ಯಾಪಾರೀಕರಣವಾಗಿದೆ. ಸರಳತೆ, ಗೌರವ ನೀಡುವ ಮನೋಭಾವನೆ ಇವತ್ತಿನ ಮಕ್ಕಳಲ್ಲಿ ಇಲ್ಲವಾಗಿದೆ ಎಂದು ಸಾಹಿತಿ ಮತ್ತು ಜೀವನ ಶೈಲಿ ಸಲಹೆಗಾರ ಸಿದ್ದು ಯಾಪಲಪರವಿ ಹೇಳಿದರು.

Advertisement

ರವಿವಾರ ಪಟ್ಟಣದ ಮಾಡೆಲ್‌ ಹೈಸ್ಕೂಲ್‌ ಸಭಾಭವನದಲ್ಲಿ ನಡೆದ 1994ನೇ ಬ್ಯಾಚ್‌ ನಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದು ಮಾನವೀಯ ಸಂಬಂಧ ನಶಿಸಿ ಹೋಗುತ್ತಿದೆ. ಜೀವನ ಯಾವ ರೀತಿ ಇದೆಯೋ ಅದೇ ರೀತಿ ತೆಗೆದುಕೊಂಡು ಎದುರಿಸಬೇಕು. ಶ್ರೀಮಂತಿಕೆ, ಬಡತನ ಎರಡನ್ನೂ ಅಷ್ಟೇ ಸಮನಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಎಂಜಿನಿಯರ್‌, ಡಾಕ್ಟರ್‌ ಆಗಬೇಕೆಂಬ ವ್ಯಾಮೋಹ ಇದೇ ಹೊರತು ನಮ್ಮ ಮಕ್ಕಳು ರೈತನಾಗಲಿ, ಒಳ್ಳೆಯ ವ್ಯಾಪಾರಿಯಾಗಬೇಕೆಂಬ ಗುರಿ ಇಲ್ಲದಂತಾಗಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಸಂಸ್ಕೃತಿ ಮರೆತಿದ್ದಾರೆ. ಹಣ- ಅಹಂಕಾರ ನಮ್ಮ ಜೊತೆ ಬರುವುದಿಲ್ಲ, ಬದುಕಿನ ಬೇರುಗಳು ಗಟ್ಟಿಯಾಗಿರಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿಗಳು ಮಾತನಾಡಿ, ಹಿಂದಿನ ಕಾಲದ ಶಿಕ್ಷಕನಲ್ಲಿ ಶಿಸ್ತು, ಮೌಲ್ಯಗಳು ಇದ್ದವು. ಇಂದು ಅವೆಲ್ಲ ಕಡಿಮೆಯಾಗಿವೆ. ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಸಣ್ಣತನ ತೋರಿಸಬಾರದು. ಗುರುವನ್ನು ಮೀರಿ ಶಿಷ್ಯ ಬೆಳೆದರೆ ಗುರುವಿಗೆ ಅದೇ ಸಂತೋಷ ಎಂದರು.

ಮಾಡೆಲ್‌ ಹೈಸ್ಕೂಲ್‌ ಮುಖ್ಯಾಧ್ಯಾಪಕರಾದ ಎಸ್‌.ಕೆ. ಮಾಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿದರು. ನಿವೃತ್ತ ಹಿರಿಯ ಮುಖ್ಯಾಧ್ಯಾಪಕರಾದ ಎಸ್‌. ಎಂ.ಪಟ್ಟಣಶೆಟ್ಟಿ, ಕೆ.ಜಿ.ಸದರಜೋಶಿ, 94ನೇ ಸಾಲಿನ ವಿದ್ಯಾರ್ಥಿಗಳಾದ ಪಂಕಜ ಬಿಡಿ, ವೈ.ಜಿ. ಗದ್ದಿಗೌಡರ, ಶೌಕತ್ತಲಿ ಲಂಬೂನವರ ಹಾಗೂ ಶ್ರೀದೇವಿ ಅನಿಸಿಕೆ ವ್ಯಕ್ತಪಡಿಸಿದರು. ಅನಿಲ್‌ ಮೇತ್ರಿ ಸಂಗಡಿಗರು ಸಂಗೀತ ಸೇವೆ ನೀಡಿದರು. ಶಿವರಂಜನಿ ನಾಟ್ಯ ಸಂಘದ ವತಿಯಿಂದ ರಂಜನಾ ಕಾಮತ್‌ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು.

Advertisement

94ನೇ ಇಸ್ವಿಯ ವಿದ್ಯಾರ್ಥಿಗಳು ಶಿಕ್ಷಕರಾದ ಎಸ್‌.ಎಂ. ಪಟ್ಟಣಶೆಟ್ಟಿ, ಎನ್‌.ಎಚ್‌. ಪುರಾಣಿಕ, ಆರ್‌.ಬಿ. ಕಮತರ, ವಿ.ಎನ್‌. ಪತಕಿ ಎಂ.ಬಿ. ಮುಲ್ಲಾನವರ, ಕೆ.ಜಿ. ಸದರಜೋಶಿ, ಎಸ್‌.ಬಿ. ತೋಟಿ, ಎಸ್‌.ಎ. ಬಾರಕೇರ, ಎಸ್‌.ಡಿ. ಪಾಟೀಲ, ಸುನಿತಾ ಅಂಗಡಿ, ಕುಮುದಾ ರೊಟ್ಟಿ, ಎಸ್‌.ಆರ್‌. ಕುಲಕರ್ಣಿ, ಎಂ.ಎಸ್‌. ಕಡಕೋಳ, ದೇವರಮನಿ ಸರ್‌, ಪತ್ತಾರ ಸರ್‌, ಅಡಿವಿ ಸರ್‌, ಆರ್‌.ಜಿ. ಬಿಡೆ, ಶಿವಪ್ಪ ಚುಳಕಿ, ವೆಂಕಣ್ಣ ದೊಡಮನಿ, ಎಸ್‌.ಟಿ. ರೋಣದ, ಪಿ.ಎನ್‌. ಗುಳೇದ, ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು.

ದಿ| ಅನಂತ ಸುಂಕದ, ದಿ| ಎಸ್‌.ವಿ. ಮಧ್ವರಾಯನವರ, ದಿ| ಜೆ.ಡಿ.ದೊಡಮನಿ, ದಿ| ಎಸ್‌.ಎಂ.ಕದಂ, ದಿ| ಬಿ.ಬಿ.ಜಕ್ಕನಗೌಡರ, ದಿ| ವಾಸುದೇವ ಗುಡಿ, ದಿ| ಎಚ್‌.ಎ.ಗ್ರಾಮಪುರೋಹಿತ, ದಿ| ವಿ.ಎಸ್‌. ಕುಲಕರ್ಣಿ, ದಿ| ಪಿ.ಎಸ್‌. ದೇವಳೆ, ದಿ| ಟಿ.ಎ.ಹಳ್ಳಿಕೇರಿ, ದಿ| ಕೌಜಗೇರಿ ಹಾಗೂ ಅಗಲಿದ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿದ್ಯಾರ್ಥಿಗಳಾದ ಮಹೇಶ ಕೊಟ್ಟರಶೆಟ್ಟರ, ಶಿವಾನಂದ ಕಮ್ಮಾರ, ವಿಜಯ ನಾಗಾವಿ, ಮಹಾಂತೇಶ ಜಿನಗಾ, ರಮೇಶ ಕುಲಕರ್ಣಿ, ಅರುಣ ಸುಂಕಾಪುರ, ರಾಜು ಗದಗ, ಯಲ್ಲಪ್ಪ ಕಲಾಲ, ಅಪ್ಪಣ್ಣ ಕುಬಸದ, ಮುತ್ತು ಕಿರೇಸೂರ, ಅನೀಲ ಜಾಬೋಂಟಿ, ಶೌಕತ್ತ ಎಂಜಿನಿಯರ್‌, ವಿಶ್ವನಾಥ ದ್ಯಾವನಗೌಡರ, ಸಂತೋಷ ಪಾಟೀಲ, ಸಲೀಮ ಮುಲ್ಲಾ, ಲಕ್ಷ್ಮಣ ಬಂಡಿವಾಡ, ಜಮೀರ ಹುನಗುಂದ, ಗಂಗಾಧರ ಕಮ್ಮಾರ, ಜಯಪ್ರಕಾಶ ಮಾರನಬಸರಿ, ಮಂಜುನಾಥ ದ್ಯಾವನಗೌಡರ, ಸುನೀಲ ಸನ್ನಾಯಕ, ವಿಜಯಲಕ್ಷ್ಮೀ ಶಿದ್ರಾಮಶೆಟ್ಟರ, ಜ್ಯೋತಿ ಮಹೇಂದ್ರಕರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next