Advertisement

ಅನಿರೀಕ್ಷಿತ ಫ‌ಲಿತಾಂಶ ಯಶಸ್ಸಿನ ಮೆಟ್ಟಿಲಾಗಲಿ

11:11 PM Aug 01, 2021 | Team Udayavani |

ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನ್ನು ಹಿರಿಯರು ವರ್ಷಾನುವರ್ಷಗಳಿಂದ ಮಕ್ಕಳಿಗೆ ಹೇಳುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳ ಪಾಲಿಗಂತೂ ಈ ಮಾತು ಬಹಳಷ್ಟು ಉತ್ತೇಜನ ನೀಡುವಂಥದ್ದಾಗಿದೆ. ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲೆಲ್ಲ ಕಲಿಕೆಯಲ್ಲಿ ತೊಡಗಿದ ವಿದ್ಯಾರ್ಥಿಗಳು ನಿರಂತರ ಶ್ರಮ ವಹಿಸಿ, ಪರೀಕ್ಷೆ ಎಂಬ ಮೌಲ್ಯಮಾಪನದ ಘಟ್ಟವನ್ನು ಸುಲಲಿತವಾಗಿ ಎದುರಿಸಿ, ನಿರೀಕ್ಷಿತ ಅಂಕ ಗಳಿಸಿದಾಗ ವಿದ್ಯಾರ್ಥಿಯಲ್ಲೂ ಮತ್ತು ಆ ವಿದ್ಯಾರ್ಥಿಯ ಹೆತ್ತವರರಲ್ಲಿಯೂ ಸಾರ್ಥಕ ಭಾವ ಕಾಣುತ್ತಿದ್ದುದು ಸಹಜವಾಗಿತ್ತು. ಆದರೆ ಕಾಲ ಬದಲಾಗಿದೆ. ಬದ ಲಾದ ಈ ಸನ್ನಿವೇಶಕ್ಕೆ ಒಗ್ಗಿಕೊಳ್ಳಲೇಬೇಕಿದೆ. ಈ ಬಾರಿ ದ್ವಿತೀಯ ಪಿಯುಸಿಯ ಪಬ್ಲಿಕ್‌ ಪರೀಕ್ಷೆ ಮತ್ತು ಫ‌ಲಿತಾಂಶ ವಿದ್ಯಾರ್ಥಿಗಳ ಪಾಲಿಗೆ ಕೈ ಕೆಸರಾಗದೆ ಕಡಿಮೆ ಶ್ರಮದಲ್ಲಿ ಬಾಯಿ ಮೊಸರು ಮಾಡಿಕೊಂಡಂತಾಗಿದೆ.

Advertisement

ಕೊರೊನಾ ಸಂದಿಗ್ಧತೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಪಣಕ್ಕಿಟ್ಟು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಪಿಯು ಬೋರ್ಡ್‌ ತನ್ನ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಹಿಂದಿನ ತರಗತಿಯ ಅಂಕಗಳು ಮತ್ತು ಗ್ರೇಸ್‌ ಅಂಕಗಳನ್ನು ನೀಡುವುದರ ಆಧಾರದಲ್ಲಿ ಫ‌ಲಿತಾಂಶವನ್ನು ಪ್ರಕಟಿಸಿದೆ. ಈ ರೀತಿಯ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುವುದು ಅನಿವಾರ್ಯತೆಗೆ ಕಂಡುಕೊಂಡ ದಾರಿಯೇ ಹೊರತು ವಿದ್ಯಾರ್ಥಿಗಳ ಕೌಶಲದ ಒರೆಗಲ್ಲಿನ ಮೌಲ್ಯಮಾಪನ ವಲ್ಲ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಲೇಬೇಕಾದ ವಿಚಾರ.

2020-21 ನೇ ಸಾಲಿನ ಇಡೀ ಶೈಕ್ಷಣಿಕ ವರ್ಷವು ಆನ್‌ಲೈನ್‌ ಮತ್ತು ಆಫ್ಲೈನ್‌ ಎಂಬ ಗೊಂದಲದ ಗೂಡಿನಲ್ಲಿಯೇ ಕಳೆದರೂ ಒಂದಿನಿತು ತಯಾರಿ ಮಾಡಿಕೊಂಡಿದ್ದರೂ ಪರೀಕ್ಷೆ ಇಲ್ಲದೆ ಬಂದ ಫ‌ಲಿತಾಂಶವು ಎಲ್ಲರ ಮೊಗದಲ್ಲೂ ಸಂತಸ ಅರಳುವಂತೆ ಮಾಡಿದೆ.

ಪ್ರತೀ ವರ್ಷ ಪೂರ್ಣಾಂಕ ಪಡೆದವರ ಸಂಖ್ಯೆ ವಿರಳವಾಗಿರುತ್ತಿತ್ತು. ಪೂರ್ಣಾಂಕ ಪಡೆದವರು ಬೆರಳೆಣಿಕೆಯಷ್ಟು  ಮಾತ್ರ ಇರುತ್ತಿದ್ದರು. 2019-20 ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿ ಯರು 596 ಅಂಕ, ವಾಣಿಜ್ಯ ವಿಭಾಗದಲ್ಲಿ ಓರ್ವ ವಿದ್ಯಾರ್ಥಿಯು 598 ಅಂಕ, ಕಲಾ ವಿಭಾಗದಲ್ಲಿ ಓರ್ವ ವಿದ್ಯಾರ್ಥಿಯು 594 ಅಂಕಗಳನ್ನು ಪಡೆದು ರಾಜ್ಯದ ಟಾಪರ್‌ಗಳೆನಿಸಿದ್ದರು. ಆದರೆ ಪೂರ್ಣಾಂಕ ಪಡೆಯುವುದು ನಿಜವಾಗಲೂ ಒಂದು ಸಾಹಸವೇ ಎಂಬಂತಿದ್ದ ಮಾತು ಬದಲಾಗಿ ಈ ವರ್ಷ ಪೂರ್ಣಾಂಕ

ಪಡೆದವರ ಸಂಖ್ಯೆ ಅಧಿಕವಾಗಿದೆ. ವಿಜ್ಞಾನ ವಿಭಾಗ ದಲ್ಲಿ 1,929 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ ದಲ್ಲಿ 292 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 18 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದು ಯಶಸ್ವಿಯಾಗಿ ¨ªಾರೆ. ಶ್ರೇಣಿವಾರು ಸಾಧನೆ ಕೂಡ ಕಳೆದ ಸಾಲಿಗಿಂತ ಹೆಚ್ಚಳವಾಗಿದೆ. ಇದು ವಿದ್ಯಾರ್ಥಿಗಳ ಮತ್ತು ಹೆತ್ತವರಿಗೆ ಸಂತಸ ನೀಡುವುದರ ಜತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂಬುದು ದಿಟವಾದರೂ ಒಂದಿನಿತು ಆತ್ಮಾವ ಲೋಕನ ಮಾಡುವಂತೆಯೂ ಮಾಡಿದೆ.

Advertisement

ಪರೀಕ್ಷಾ ಅಂಕಗಳು ಕೌಶಲವನ್ನು ನಿರ್ಧರಿಸಿರುವು ದಿಲ್ಲ. ಕೇವಲ ಓದಿದ ಜ್ಞಾನವನ್ನು ಒರೆಹಚ್ಚಲಾಗಿರುತ್ತದೆ. ಪ್ರಾಯೋಗಿಕ ಪರೀಕ್ಷೆಯ ಅಂಕಗಳಿದ್ದರೂ ಅದು ವಿಜ್ಞಾನ ವಿಭಾಗದಲ್ಲಿ ಮಾತ್ರ. ಪ್ರತೀ ವಿಷಯದಲ್ಲಿ ಪ್ರಾಯೋಗಿಕ ಅಂಕ ಕೇವಲ 30ಕ್ಕೆ ಸೀಮಿತ. ಅದಲ್ಲದೇ ಈ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುಗಳಲ್ಲಿ ಆಫ್ಲೈನ್‌ ತರಗತಿ ನಡೆಸಿ ಪ್ರಾಯೋಗಿಕ ಕಲಿಕೆಯ ಪಕ್ವತೆ ನೀಡಲು ಸಿಕ್ಕಿದ ಸಮಯಾವಕಾಶ ಕೂಡ ಬಹಳ ಕಡಿಮೆಯಾಗಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಅಥವಾ ಔದ್ಯೋಗಿಕ ರಂಗದಲ್ಲಿ ಕೌಶಲಾ ಧಾರಿತವಾಗಿ ಯಶಸ್ಸು ಪಡೆಯಬೇಕಾದ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಅಂಕಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಧಿಕ ಸಂಖ್ಯೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳು, ಪಡೆದ ಅಂಕಗಳ ಪರಿಪೂರ್ಣತೆಯನ್ನು ಮುಂದಿನ ಶೈಕ್ಷಣಿಕ ಹಂತದಲ್ಲೂ ಯಶಸ್ವಿಯಾಗಿ ಮುನ್ನಡೆಸುವ ಮೆಟ್ಟಿಲುಗಳನ್ನಾಗ

ಬೇಕಿಸಿಕೊಳ್ಳಬೇಕಿದೆ. ಪರೀಕ್ಷೆ ಎಂಬ ತಡೆಗೋಡೆಯನ್ನು ವಿಶೇಷ ಮೌಲ್ಯಮಾಪನ ಪದ್ಧತಿಯ ಮೂಲಕ ಸುಲಭವಾಗಿ ದಾಟಿ ಪಾಸ್‌ ಆದ ವಿದ್ಯಾರ್ಥಿಗಳು ಪದವಿ ಪಡೆಯಲು, ಉತ್ತಮ ಉದ್ಯೋಗಾವಕಾಶ ಪಡೆಯಲು ಸಿಕ್ಕ ಅಪರೂಪದ ಉಡುಗೊರೆಯಾಗಿ ಈ ಫ‌ಲಿತಾಂಶವನ್ನು ಸ್ವೀಕರಿಸಬೇಕಿದೆ. ಅನಿರೀಕ್ಷಿತ ಫ‌ಲಿತಾಂಶದ ಯಶವನ್ನು ಅನಂತವಾಗಿಸಬೇಕಿದೆ.

ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಆದರೆ ಈ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯ ಯಶಸ್ಸು ಸುಲಭವಾಗಿ ದಕ್ಕಿದೆ. ಈ ಕೊರೊನಾ ಸಂಕಟದಲ್ಲಿ ಈ ವ್ಯವಸ್ಥೆ ಕೂಡಾ ಅನಿ ವಾರ್ಯವಾಗಿತ್ತು ಎಂಬುದನ್ನು ಅರಿತು ದೊರೆತ ಯಶಸ್ಸನ್ನು ಶ್ರಮವಾಗಿ ಪರಿವರ್ತಿಸಿಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಇಡಬೇಕಾಗಿದೆ.

ಇದರೊಂದಿಗೆ ಅನೇಕರು ಹತ್ತನೇ ತರಗತಿ ಪಬ್ಲಿಕ್‌ ಪರೀಕ್ಷೆ ರ¨ªಾಗುತ್ತದೆಂಬ ನಿರೀಕ್ಷೆಯಲ್ಲಿದ್ದರೂ ಬದಲಾದ ಮಾದರಿಯಲ್ಲಿ ವಿದ್ಯಾರ್ಥಿಗಳು ಸಮರವೀರರಂತೆ ಪರೀಕ್ಷೆ ಎದುರಿಸಿ¨ªಾರೆ. ಕೊರೊನಾದ ಕರಿನೆರಳಿನಲ್ಲೂ ಆತ್ಮವಿಶ್ವಾಸವನ್ನು ಎತ್ತಿ ಹಿಡಿದು ಪರೀಕ್ಷೆ ಎಂಬ ಸಾಗರದಲ್ಲಿ ಈಜಿ¨ªಾರೆ. ಹಾಗಾಗಿ ಹತ್ತನೇ ತರಗತಿಯ ಫ‌ಲಿತಾಂಶ ಒಂದಿಷ್ಟು ಕುತೂಹಲ ಮೂಡಿಸಿದೆ.

ಕಡಿತಗೊಂಡ ಪಠ್ಯಕ್ರಮದನ್ವಯ ಕೆಲವು ಪಾಠಾಂಶಗಳನ್ನು ಅಭ್ಯಾಸ ಮಾಡದೆಯೇ ಪ್ರಥಮ ಪಿ.ಯು.ಸಿ. ಗೆ ದಾಖಲಾಗುವ ಈ ವಿದ್ಯಾರ್ಥಿಗಳು ಆಗಿರುವ ಕಲಿಕಾ ನಷ್ಟವನ್ನು ಪದವಿಪೂರ್ವ ಶಿಕ್ಷಣದಲ್ಲಿ ಸರಿದೂಗಿಸಿಕೊಳ್ಳಬೇಕಿದೆ. ಶೈಕ್ಷಣಿಕ ರಂಗದ ಕೊನೆಯ ಮೆಟ್ಟಿಲು ತಲುಪುವ ಹಂತದಲ್ಲಿ ನಡುವಿನ ಎಲ್ಲ ಮೆಟ್ಟಿಲುಗಳಲ್ಲೂ ಹೆಜ್ಜೆ ಗುರುತುಗಳನ್ನು ಅಚ್ಚಳಿಯದೇ ಉಳಿಸಬೇಕಾದ ಆವಶ್ಯಕತೆಯನ್ನು ವಿದ್ಯಾರ್ಥಿಗಳು ಮನಗಾಣಬೇಕಿದೆ.

ಕೊರೊನಾ ಸಂಕಟದಲ್ಲಿ ಹಲವು ಅಡೆತಡೆಗಳ ನಡುವೆಯೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಎಂಬ ಪ್ರಮುಖ ಹಂತಗಳನ್ನು ಎದುರಿಸಿ ಮುಂದಡಿ ಇಡುತ್ತಿರುವ ವಿದ್ಯಾರ್ಥಿಗಳು ಕಲಿಕಾ ಲೋಪದೋಷಗಳನ್ನು ಮತ್ತೂಮ್ಮೆ ಪರಾಮರ್ಶೆ ಮಾಡಿ ಮುನ್ನಡೆಯುವಂತಾಗಲಿ.

 

ಭಾರತಿ ಎ., ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next