Advertisement

ಆಸ್ತಿ ಬಗ್ಗೆ ಐಟಿ, ಇ.ಡಿ. ತನಿಖೆ ನಡೆಸಲಿ: ಬಿ.ಕೆ. ಹರಿಪ್ರಸಾದ್‌

08:56 PM Dec 26, 2022 | Team Udayavani |

ಬೆಳಗಾವಿ: ನನ್ನ ಹಾಗೂ ಸಿ.ಟಿ.ರವಿ ಅವರ ಸಂಪಾದನೆ ಮತ್ತು ಆಸ್ತಿ ಬಗ್ಗೆ ತನಿಖೆ ಆಗಲಿ. ಎರಡೂ ಕಡೆ ಐಟಿ, ಇ.ಡಿ. ದಾಳಿ ನಡೆಯಲಿ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಸವಾಲು ಹಾಕಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿ.ಟಿ.ರವಿ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬರಬೇಕಾದರೆ ಯಾರಾದರೂ ಲಿಫ್ಟ್ ಕೊಡಬೇಕಿತ್ತು. ಅಂಥವರು ಈಗ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಅವರೀಗ ಮೂರು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಅಂತ ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ಆರೋಪ ಮಾಡಿದ್ದಾರೆ.

ನನ್ನ ಹಿನ್ನೆಲೆ ಇಡೀ ದೇಶಕ್ಕೆ ಗೊತ್ತಿದೆ. ಇವರು (ರವಿ) ಸಣ್ಣ ಹುಡುಗರಿದ್ದಾಗಲೇ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿಯವರ ಚುನಾವಣೆಯನ್ನು ನೋಡಿದ್ದೇನೆ. ದೇಶದಲ್ಲಿ ಈಗ ಅವರದ್ದೇ ಸರಕಾರ ಇದೆ. ಸಾಧ್ಯವಾದರೆ ನನ್ನ ವಿರುದ್ಧ ಒಂದು ಎಫ್ಐಆರ್‌ ಆದರೂ ದಾಖಲಿಸಿ ತೋರಿಸಲಿ. ಹಾಗೆ ಮಾಡಿದರೆ ನಾನು ರಾಜಕೀಯದಿಂದ ದೂರವಿರುತ್ತೇನೆ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next