Advertisement

ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಪ್ರಧಾನಿ ಶೀಘ್ರ ಶ್ವೇತ ಪತ್ರ ಹೊರಡಿಸಲಿ

11:40 AM Sep 10, 2019 | sudhir |

ಗದಗ: ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಶ್ವೇತ ಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ದೇಶದ ಜಿಡಿಪಿ ಇಳಿಮುಖವಾಗಿದೆ. ಸದ್ಯ ಶೇ.6.5 ಕ್ಕಿಂತ ಕೆಳಗಿರುವ ಜಿಡಿಪಿ, ಮುಂದೆ ಶೇ.5 ಕ್ಕಿಂತ ಕಡಿಮೆಯಾಗಿ, ಪಾತಾಳ ಕಂಡರೂ ಅಚ್ಚರಿ ಇಲ್ಲ. ಜಿಡಿಪಿ ಹೆಚ್ಚಿಸುವ ನಿಟ್ಟಿನಲ್ಲಿ ಲಗಾಮು ಹಾಕಲು ಕೇಂದ್ರ ಸರಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆರ್ಥಿಕ ದುಸ್ಥಿತಿಯಿಂದ ಜನಸಾಮಾನ್ಯರ ಗಮನ ಬೇರೆಡೆ ಸೆಳೆಯಲು ಯುದ್ಧೋನ್ಮಾದದ ಮಾತುಗಳು, ಭಾವನಾತ್ಮಕ ವಿಚಾರಗಳನ್ನು ಹರಿಬಿಡುತ್ತಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಹಲವಾರು ಕಂಪನಿಗಳು ತನ್ನ ಕಾರ್ಮಿಕರನ್ನು ಹೊರಹಾಕುತ್ತಿದೆ. ಈ ಹಿಂದೆ ಮೋದಿ ಸರಕಾರ, ದೊಡ್ಡ ಉದ್ಯಮಿಗಳಿಗೆ ದೊಡ್ಡ ಮಟ್ಟದಲ್ಲಿ ಸಬ್ಸಿಡಿ ನೀಡಿಕೆ, ಸಾಲಮನ್ನ ಮಾಡಿದ್ದಾರೆ. ಮೋದಿ ಆಡಳಿತದ ಆರ್ಥಿಕ ಅಶಿಸ್ತಿನ ಬಗ್ಗೆ ಈ ಹಿಂದೆಯೇ ಮಾಜಿ ಪ್ರಧಾನಿ ಮನಮೋಹನಸಿಂಗ್ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅದರಂತೆ ಹಿರಿಯ ಆರ್ಥಿಕ ತಜ್ಞರ ಅಭಿಪ್ರಾಯಕ್ಕೂ ಮೋದಿ ಸರಕಾರ ಮನ್ನಣೆ ನೀಡದಿದ್ದರಿಂದ ದೇಶಕ್ಕೆ ಈ ದುಸ್ಥಿತಿ ಎದುರಾಗಿದೆ. ಅದರಂತೆ ರಾಜ್ಯದಲ್ಲಿ ಎದುರಾಗಿರುವ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next