Advertisement

ಜನಪ್ರತಿನಿಧಿಗಳು ಬಡವರ ಚಿಕಿತ್ಸೆ ವೆಚ್ಚ ಭರಿಸಲಿ

01:42 PM Apr 30, 2021 | Team Udayavani |

ಕೊಪ್ಪಳ: ಹಿರೇಕೆರೂರು ಕ್ಷೇತ್ರದಲ್ಲಿ ಕೋವಿಡ್‌ನಿಂದ ಬಳಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವೆಚ್ಚ ಭರಿಸಲಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚಿಕಿತ್ಸಾವೆಚ್ಚ ಭರಿಸಿದ್ದೇನೆ. ನನ್ನಂತೆಯೇ ಇತರೆ ಜನಪ್ರತಿನಿಧಿಗಳು ತಮ್ಮ ಕೈಲಾದಷ್ಟು ಬಡವರಿಗೆ ಕೋವಿಡ್‌ ಸಂದರ್ಭದಲ್ಲಿ ಸಹಾಯಸ್ತ ಚಾಚಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಆಹಾರ ಸಚಿವ ಉಮೇಶ ಕತ್ತಿ ಅವರು ರೈತರಿಗೆ ಅಕ್ಕಿ ವಿತರಣೆಮಾಡುವ ವಿಚಾರದಲ್ಲಿ ಸಾಯಲಿ ಎನ್ನುವ ಹೇಳಿಕೆ ನೀಡಿರುವುದು ದುರ್ದೈವ. ಅವರು ಹಾಗೆ ಹೇಳಬಾರದಿತ್ತು ಎಂದರು.ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತಲಸಿಕೆ ನೀಡಲು 2600 ಕೋಟಿ ರೂ. ಮೀಸಲಿಟ್ಟಿದೆ.

ಏನೇಕೊರತೆ ಬಂದರೂ ಅದನ್ನು ನೀಗಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರವೇನೂ ವಿಫಲವಾಗಿಲ್ಲ. ನಾವು ಸೋಂಕು ಉಲ್ಬಣವನ್ನು ನಿರೀಕ್ಷೆ ಮಾಡಿರಲಿಲ್ಲ.ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈಬಾರಿ ಅದರ ನಾಲ್ಕು ಪಟ್ಟು ಜಾಸ್ತಿಯಾಗಿದೆ.

ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣಹೆಚ್ಚಾಗಿದೆ. ಇನ್ನು ಬೆಂಗಳೂರಿನಿಂದ ಹಳ್ಳಿಗಳಿಗೆ ಜನರು ತೆರಳುತ್ತಿದ್ದಾರೆ. ಈಗ ಹಳ್ಳಿಯಲ್ಲೂ ಸೋಂಕಿನ ಪ್ರಮಾಣಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಯತ್ನಿಸುತ್ತಿದೆ.ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರಿಗೆ ಬೆಡ್‌, ಆಕ್ಸಿಜನ್‌ ಕೊರತೆಕಂಡು ಬಂದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next