Advertisement

ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಲಿ: ಕಾಗೇರಿ

09:19 PM Sep 21, 2021 | Team Udayavani |

ವಿಧಾನಸಭೆ: ಮಾಧ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಬೇಕು. ಪ್ರಶ್ನಾರ್ಥಕ ಚಿಹ್ನೆ, ಉನ್ನತ ಮೂಲಗಳ ಮಾಹಿತಿ ಎಂದು ಯಾರದೇ ವ್ಯಕ್ತಿಯ ತೇಜೋವಧೆ ಮಾಡಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.

Advertisement

ವಿಧಾನವೇಳೆಯಲ್ಲಿ ಶೂನ್ಯವೇಳೆ ಸಂದರ್ಭದಲ್ಲಿ ಗೂಳಿಹಟ್ಟಿ ಶೇಖರ್‌ ಅವರು ವಿಷಯ ಮಂಡಿಸಿ, ಪತ್ರಿಕೆ ಮತ್ತು ಟಿವಿಯಲ್ಲಿ ತಾವು “ಆಪರೇಷನ್‌ ಹಸ್ತ’ದಡಿ ಪಕ್ಷ ತೊರೆಯುವುದಾಗಿ ಸುದ್ದಿಯಾಗಿದೆ.

ಟಿ.ವಿ.ಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ವೇಳೆ ತಾವು ಸದನದಲ್ಲಿದ್ದೆ. ಸಂಜೆ ಹೊತ್ತಿಗೆ ಕ್ಷೇತ್ರದ ಮತದಾರರು ನನ್ನನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ನನ್ನ ಹಕ್ಕುಚ್ಯುತಿ ಆಗಿದೆ. ಒಂದಲ್ಲ ಒಂದು ರೀತಿಯಲ್ಲಿ ಮುಜುಗರವಾಗುತ್ತದೆ. ನಾನು ಪಕ್ಷ ಬಿಡುವ ಮಾತು ಆಡಿಲ್ಲ, ಆದರೂ ತೇಜೋವಧೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಗ್ಯಾಂಬ್ಲಿಂಗ್‌: ಪೊಲೀಸ್‌ ಕಾಯ್ದೆಗೆ ತಿದ್ದುಪಡಿಗೆ ಕ್ರಮ: ಗೃಹ ಸಚಿವ

ಆಗ, ಕಾನೂನು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಗೂಳಿಹಟ್ಟಿ ಶೇಖರ್‌ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಹಾಗಾಗಿ ಸಮಸ್ಯೆ ಮುಗಿದಿದೆ. ಆದರೆ, ಶಾಸಕರು ಮತ್ತು ಜನಪ್ರತಿನಿಧಿಗಳ ತೇಜೋವಧೆ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next