Advertisement

6 -8 ವಾರ ಲಾಕ್‌ ಜಾರಿಯಾಗಲಿ

07:48 AM May 13, 2021 | Team Udayavani |

ನವದೆಹಲಿ: ದೇಶ ದಲ್ಲಿ ಸೋಂಕು ನಿಯಂತ್ರ ಣಕ್ಕೆ ಬರ ಬೇ ಕೆಂದರೆ, ಅತಿ ಹೆಚ್ಚು ಪ್ರಕ ರಣ ದಾಖಲಾಗುತ್ತಿ ರುವ ಜಿಲ್ಲೆಗಳಲ್ಲಿ ಇನ್ನೂ 6ರಿಂದ 8 ವಾರಗಳ ಕಾಲ ಲಾಕ್‌ ಡೌನ್‌ ಜಾರಿ ಮಾಡ ಬೇಕು ಎಂದು ಭಾರತೀಯ ವೈದ್ಯ ಕೀಯ ಸಂಶೋಧನಾ ಸಂಸ್ಥೆ(ಐಸಿ ಎಂಆ ರ್‌) ಮುಖ್ಯಸ್ಥ ಡಾ.ಬಲರಾಂ ಭಾರ್ಗವ ಹೇಳಿದ್ದಾರೆ.

Advertisement

ಈ ಮೂಲಕ ಇದೇ ಮೊದಲ ಬಾರಿಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಲಾಕ್‌ ಡೌನ್‌ ಅವಧಿ ಎಷ್ಟಿರಬೇಕು ಎಂದು ಹೇಳಿ ದಂತಾಗಿದೆ. ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಿ ದ್ದ ರೂ ಕೇಂದ್ರ ಸರ್ಕಾರವು ದೇಶ ವ್ಯಾಪಿ ಲಾಕ್‌ ಡೌನ್‌ ಘೋಷಣೆಯಿಂದ ಹಿಂದೆ ಸರಿದು, ರಾಜ್ಯಗಳಿಗೆ ಆ ಅಧಿಕಾರ ನೀಡಿತ್ತು.

ಇದನ್ನೂ ಓದಿ:ಸಿರಿಂಜ್‌ ಮೂಲಕ ದೇಹಕ್ಕೆ ಮೈಕ್ರೋಚಿಪ್‌ ಅಳವಡಿಕೆ

ಬುಧವಾರ ಸಂದರ್ಶನ ವೊಂದರಲ್ಲಿ ಮಾತನಾಡಿದ ಡಾ. ಭಾರ್ಗವ, “ಯಾವ ಜಿಲ್ಲೆಗ ಳಲ್ಲಿ ಪರೀಕ್ಷೆಗೊಳಪಟ್ಟವರ ಪೈಕಿ ಶೇ.10ಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ದೃಢ ಪಟ್ಟಿದೆಯೋ, ಅಂಥ ಜಿಲ್ಲೆಗಳಲ್ಲಿ ನಿರ್ಬಂಧ ಜಾರಿ ಮಾಡಬೇಕು. ಪ್ರಸ್ತುತ ದೇಶದ 734 ಜಿಲ್ಲೆ ಗಳ ಪೈಕಿ ನಾಲ್ಕನೇ ಮೂರ ರಷ್ಟು(533) ಜಿಲ್ಲೆ ಗ ಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿದೆ. ಈ ಜಿಲ್ಲೆಗಳಲ್ಲಿ ಬೆಂಗಳೂರು, ಮೈಸೂ ರು, ನವದೆಹಲಿ, ಮುಂಬೈ ಕೂಡ ಸೇರಿವೆ. ಪಾಸಿಟಿವಿಟಿ ದರವು ಶೇ.10ರಿಂದ ಶೇ.5ಕ್ಕಿಳಿಯುವವರೆಗೂ ಲಾಕ್‌ ಡೌನ್‌ ಜಾರಿಯಲ್ಲಿರಬೇಕು. ಆದರೆ, ಅದು ಸಾಧ್ಯವಾಗಲು 6-8 ವಾರ ಬೇಕೇ ಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next