Advertisement

ಸಾಲ ಸೌಲಭ್ಯ ಸದುಪಯೋಗವಾಗಲಿ

11:08 AM Jan 30, 2019 | |

ಆಲಮೇಲ: ರೈತರಿಗೆ ಸಾಲದ ಬಗ್ಗೆ ಏನಾದರೂ ಅನುಮಾನ, ಸಮಸ್ಯೆ ಇದ್ದರೆ ನೇರವಾಗಿ ನಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆರ್ಥಿಕ ಸೇರ್ಪಡೆ ವ್ಯವಸ್ಥಾಪಕ ಎಂ.ಎನ್‌. ಮುಲ್ಲಾ ಹೇಳಿದರು.

Advertisement

ಕಡಣಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕಡಣಿ ಶಾಖೆ ಹಾಗೂ ಸಿಂದಗಿಯ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಸಹಯೋಗದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಮತ್ತು ಗ್ರಾಮ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಯಾಂಕಿನ ಅಧಿಕಾರಿಗಳಿಗೆ ಬಂದು ನೇರವಾಗಿ ಭೇಟಿ ಮಾಡಿದರೆ ಗ್ರಾಹಕರಿಗೆ ಯಾವುದೇ ತೊಂದರೆ ಇದ್ದರೆ ಬಗೆಹರಿಸಲಾಗುವುದು. ಗ್ರಾಹಕರ ಹಾಗೂ ರೈತರ ಸೇವೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸದಾ ಸಿದ್ಧವಾಗಿದೆ. ಗ್ರಾಹಕರು ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು.

ಬ್ಯಾಂಕ್‌ನಿಂದ ಹೆಚ್ಚಿನ ಹಣ ತೆಗೆದುಕೊಂಡು ಹೋಗುವುದಕ್ಕಿಂತ ಖಾತೆಯಿಂದ ಖಾತೆಗೆ ವರ್ಗಾವಣೆ ಮಾಡುವುದು ಸೂಕ್ತ. ಈಗ ಅಂತರ್ಜಾಲ ಅಭಿವೃದ್ಧಿಯಾಗಿದ್ದು ಮೊಬೈಲ್‌ ಬ್ಯಾಂಕ್‌, ಆನ್‌ಲೈನ್‌ ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಬಗೆಯ ಆ್ಯಪ್‌ಗ್ಳು ಬಂದಿದ್ದು ಗ್ರಾಹಕರು ಬಳಸಿಕೊಳ್ಳಬೇಕು. ಇದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಕ್ಯಾಶ್‌ಲೆಸ್‌ ವ್ಯವಹಾರ ಮಾಡುವುದು ಉತ್ತಮ ಎಂದು ಹೇಳಿದರು.

ಬ್ಯಾಂಕ್‌ ವ್ಯವಸ್ಥಾಪಕ ಕೆ.ಮಲ್ಲಿಕಾರ್ಜುನ ಮಾತನಾಡಿ, ಬ್ಯಾಂಕ್‌ ಇರುವುದೇ ಗ್ರಾಹಕರ ಮತ್ತು ರೈತರ ಸೇವೆಗಾಗಿ. ನೀವು ಸಾಲ ಪಡೆಯುವುದು ಮತ್ತು ಜಮಾ ಮಾಡುವುದು ಸರಿಯಾದ ಸಮಯದಲ್ಲಿ ಸರಿಯಾಗಿ ಮಾಡಿದರೆ ಬ್ಯಾಂಕ್‌ ಸದಾ ನಿಮ್ಮ ಕೆಲಸಕ್ಕೆ ಬೆನ್ನೆಲುಬಾಗಿ ಇರುತ್ತದೆ.

Advertisement

ಸಾಲ ಪಡೆಯುವ ಉದ್ದೇಶ ಬೇರೆ ತೋರಿಸಿ ಹಣ ಬೇರೆ ಕಡೆ ವ್ಯವಹಾರ ಮಾಡಿದರೆ ಹಣ ಜಮಾ ಮಾಡಲು ಸ್ವಲ್ಪ ತೊಂದರೆ ಆಗುತ್ತದೆ. ಸರಕಾರ ಮತ್ತು ಬ್ಯಾಂಕ್‌ಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವ ದೃಷ್ಟಿಯಲ್ಲಿ ಹಲವಾರು ಸಾಲ ಯೋಜನೆಗಳು ಜಾರಿಗೆ ತಂದಿವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಬೋಗಣ್ಣ ಲಾಳಸಂಗಿ, ಬಸವರಾಜ ತಾವರಗೇರಿ, ಸಾವಿತ್ರಿ ಕಿಣಗಿ, ಶಿವನಗೌಡ ಪಾಟೀಲ, ನಿಂಗಣ್ಣ ಪಾಟೀಲ, ಸಿದ್ದಣ ಕತ್ತಿ, ಜೆಟೆಪ್ಪ ವಾಲೀಕಾರ, ಹನುಮಂತ ಕಳಸಗೊಂಡ ಸೇರಿದಂತೆ ವಿವಿಧ ಮುಖಂಡರು ಮತ್ತು ಬ್ಯಾಂಕ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next