Advertisement
ಪೀಠೊಪಕರಣಗಳಿರಲಿಲೀವಿಂಗ್ ರೂಮ್‌ನಲ್ಲಿ ಪೀಠೊಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ರೂಮ್‌ನಲ್ಲಿ ಮರದ ಕುರ್ಚಿ, ಟೇಬಲ್‌ಗಳನ್ನು ಬಳಸುವುದು ಉತ್ತಮ. ಅವುಗಳಿಗೆ ಹೊದಿಕೆಯಿರಲಿ, ಅವುಗಳ ಮೇಲೆ ಒಂದು ಹೂ-ಕುಂಡ ಇದ್ದರೆ ಒಳ್ಳೆಯದು. ಆಗ ಮನೆಯೂ ಸುಂದರವಾಗಿ ಕಾಣುತ್ತದೆ.
ಲೀವಿಂಗ್ ರೂಮ್ ಯಾವಾಗಲೂ ಝಗಮಗಿಸುವ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರಬೇಕು. ರೂಮ್‌ನಲ್ಲಿ ವರ್ಣಮಯವಾದ ದೀಪಾಲಂಕಾರಗಳನ್ನು ನೇತು ಹಾಕಿದ್ದರೆ ಮನೆಯೂ ಅಂದವಾಗಿ ಕಾಣುತ್ತದೆ. ಇನ್ನು ಕೃತಕ ದೀಪಾಲಂಕಾರ ಬಳಕೆಯ ಜತಗೆ ಮನೆಯ ಹಣತೆಗಳನ್ನು ಬಳಸುವುದು ಉತ್ತಮ. ಹಣತೆ ದೀಪಗಳಿಂದ ಜೈವಿಕವಾಗಿ ನಮ್ಮಲ್ಲಿ ಸಕಾರಾತ್ಮಕ ಮನಸ್ಥಿತಿ ಉಂಟಾಗಲು ಕಾರಣವಾಗುತ್ತದೆ. ಹೂ- ಸಸಿಗಳನ್ನು ಬಳಸಿ
ಹೆಚ್ಚಿನ ಸಮಯವನ್ನು ನಾವು ಲಿವಿಂಗ್ ರೂಮ್‌ನಲ್ಲಿ ಕಳೆಯುವುದರಿಂದ ನಾವು ಆರೋಗ್ಯಕ್ಕೆ ಪೂರಕವಾಗುವಂತೆ ಗಿಡ-ಸಸಿಗಳನ್ನು ಮತ್ತು ಹೂ-ಕುಂಡಗಳನ್ನು ಬಳಸುವುದು ಕೂಡ ಒಳಿತು. ಇದರಿಂದಾಗಿ ಶುದ್ಧ ಗಾಳಿಯನ್ನು ಪಡೆಯಬಹುದು. ಹೂ-ಕುಂಡಗಳಿಂದ ನಮ್ಮಲ್ಲಿ ಶಾಂತ ಸ್ವಭಾವ ಮೂಡಲು ಕಾರಣವಾಗಬಹುದು. ಹೀಗಾಗಿ ಸ್ಮರಣೀಯ ಕ್ಷಣಗಳಿಗೆ ಕಾರಣವಾಗುವಂತೆ ನಮ್ಮ ರೂಮ್‌ನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲಿವಿಂಗ್ ರೂಮ್‌ನಲ್ಲಿ ಕನ್ನಡಿಗಳ ಬಳಕೆ ಇರಲಿ. ಇದು ಮನೆಯ ಚಂದವನ್ನು ಹೆಚ್ಚಿಸುತ್ತದೆ.
Related Articles
ಮನೆಯ ಲಿವಿಂಗ್ ರೂಮ್‌ನ ಗೋಡೆಗಳಿಗೆ ಚಿತ್ರ-ಚಿತ್ತಾರವಾದ ಬಣ್ಣ ಮತ್ತು ಕಲಾಕೃತಿಗಳನ್ನು ಅಂಟಿಸುವುದರಿಂದ ಮನೆಯೂ ಅಂದವಾಗಿ ಕಾಣುತ್ತದೆ. ನಮ್ಮ ಕೆಲವೊಂದು ಸ್ಮರಣೀಯ ಕ್ಷಣಗಳಿಗೆ ಇದು ಕಾರಣವಾಗುತ್ತದೆ. ಅಲ್ಲದೇ ಲಿವಿಂಗ್ ರೂಮ್‌ನಲ್ಲಿ ನಮ್ಮದು ಸಣ್ಣದಾದ ಗ್ರಂಥಾಲಯ ಇದ್ದರೆ ಒಳ್ಳೆಯದು. ಅಲ್ಲಿ ಪುಸ್ತಕ ಮತ್ತು ಗಿಫ್ಟ್ಗಳನ್ನು ಅಂದವಾಗಿ ಜೋಡಿಸಿಟ್ಟಾಗ ರೂಮ್‌ನ ಅಂದ ಇನ್ನಷ್ಟು ಹೆಚ್ಚುತ್ತದೆ.
Advertisement
ಮುಖ್ಯ ಪ್ರಾಂಗಣವಾಗಲಿಲಿವಿಂಗ್ ಕೇವಲ ಮನೆಯ ಭಾಗವಾಗದೇ ಎಲ್ಲ ಕಾರ್ಯ ಚಟುವಟಿಕೆ ಮುಖ್ಯ ಪ್ರಾಂಗಣವಾಗಲಿ. ಮನೆಯ ಎಲ್ಲ ಸದಸ್ಯರು ಕುಳಿತು ಟಿವಿ ನೋಡುವುದಕ್ಕೆ, ಮನೆಯ ವ್ಯವಹಾರಗಳನ್ನು ಚರ್ಚಿಸುವುದಕ್ಕಾಗಿ ಲಿವಿಂಗ್ ರೂಮ್‌ನಲ್ಲಿ ಮಾಡಿ. – ಸ್ವರೂಪಿಣಿ