Advertisement
ತಾಲೂಕಿನ ಭವಾನಿ ಶಂಕರ್ ಹೋಟಲ್‌ನಲ್ಲಿ ಆಯೋಜಿಸಲಾಗಿದ್ದ ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜನುಮ ದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನ ಮನ ಸಲ್ಲಿಸಿ ಮಾತನಾಡಿದರು. ಮಹಾತ್ಮರ ಹುಟ್ಟಿದ ದಿನ ಸಹಿ ತಿಂದು ಸಂಭ್ರ ಮಿಸುವ ಜತೆ ಆದರ್ಶ ರೂಢಿಸಿಕೊಳ್ಳಬೇಕು. ಮಹಾತ್ಮರ ಜೀವನ ಶೈಲಿ ಹಾಗೂ ಶಾಂತಿಯುತ ಹೋರಾಟ, ಶಾಸ್ತ್ರಿಯವರ ಆದರ್ಶ ಜೀವನ ನಮ್ಮ ರಾಜ್ಯದ ಜನಪ್ರತಿನಿಧಿಗಳಿಗೆ ಸಂಪೂರ್ಣ ವಾಗಿ ತಿಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
Related Articles
Advertisement
ಪೌರಕಾರ್ಮಿಕರು ಶ್ರಮ ಶ್ಲಾಘನೀಯ :
ನೆಲಮಂಗಲ: ನಗರದ ಸ್ವಚ್ಛತೆ ಕಾಪಾಡುವಲ್ಲಿಪೌರಕಾರ್ಮಿಕರಪರಿಶ್ರಮ ಅಪಾರ ಎಂದು ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಎನ್.ಪಿ.ಹೇಮಂತ್ ಕುಮಾರ್ ಅಭಿಪ್ರಾಯ ಪಟ್ಟರು.ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಪೌರಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಪೌರಕಾರ್ಮಿಕರ ಸಮಸ್ಯೆ, ಆರೋಗ್ಯ ಕುರಿತಾಗಿ ಲಯನ್ಸ್ ಸಂಸ್ಥೆ ಸದಾ ಕಾಳಜಿ ವಹಿಸುತ್ತದೆ. ಪೌರಕಾರ್ಮಿಕರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಮಾಡುವ ಭರದಲ್ಲಿ ತಮ್ಮ ಕುಟುಂಬ ಸದಸ್ಯರ ಆರೋಗ್ಯ ಕಡೆಗಣಿಸಬಾರದು ಎಂದರು.
ಪೌರಾಯುಕ್ತ ಎಲ್. ಮಂಜುನಾಥಸ್ವಾಮಿ ಮಾತನಾಡಿ, ನಗರಸಭೆ ಪೌರಕಾರ್ಮಿಕರ ಆರೋಗ್ಯದ ಕಾಳಜಿವಹಿಸುವಸಲುವಾಗಿಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿರುವುದು ಲಯನ್ಸ್ ಸಂಸ್ಥೆ ಆರೋಗ್ಯದ ಕುರಿತಾದ ಕಾಳಜಿ ಶ್ಲಾಘನೀಯ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಜಯಪ್ರಸಾದ್, ಪೌರಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಅಂಕಯ್ಯ, ತಾಲೂಕು ಅಧ್ಯಕ್ಷ ಚಂದ್ರು, ಮಂಜುನಾಥ್, ರಾಜು, ಮಂಜುನಾಥ್ ಇದ್ದರು.