Advertisement

ಕನ್ನಡಪರ ಚಟುವಟಿಕೆ ನಿರಂತರ ನಡೆಯಲಿ: ಶ್ರೀ

03:01 PM Feb 10, 2022 | Team Udayavani |

ಭಾಲ್ಕಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಗಭೂಷಣ ಮಾಮಡಿ ಅವರು ಡಾ| ಬಸವಲಿಂಗ ಪಟ್ಟದ್ದೇವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿದ ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ನೇತೃತ್ವದ ಟೀಮ್‌ ಶ್ರೀಗಳನ್ನು ಶಾಲು ಹೊದಿಸಿ ಸನ್ಮಾನಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿರೇಮಠ ಸಂಸ್ಥಾನ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ವಿಶೇಷವಾಗಿ ಕನ್ನಡದ ಮಠವೆಂದು ಗುರುತಿಸಿ ಕೊಂಡಿದೆ. ಗಡಿಯಲ್ಲಿ ಕನ್ನಡ ಕಟ್ಟುವಲ್ಲಿ ಡಾ| ಚನ್ನಬಸವ ಪಟ್ಟದ್ದೇವರು, ಡಾ| ಬಸವಲಿಂಗ ಪಟ್ಟದ್ದೇವರ ಕೊಡುಗೆ ದೊಡ್ಡದಿದೆ. ಕನ್ನಡದ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ಮುಂದೆಯೂ ಸಹಕಾರ ನೀಡುವಂತೆ ಕೋರಿದರು.

ಸನ್ಮಾನ ಸ್ವೀಕರಿಸಿದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಗಡಿಯಲ್ಲಿ ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಆಗಬೇಕಿದೆ. ಕನ್ನಡಪರ ಚಟುವಟಿಕೆಗಳು ನಿರಂತರ ನಡೆಯಬೇಕು. ಈ ನಿಟ್ಟಿನಲ್ಲಿ ಕಸಾಪ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್‌, ಪ್ರಮುಖರಾದ ರಮೇಶ ಚಿದ್ರಿ, ಗಣೇಶ್‌ ಪಾಟೀಲ್‌, ಸಂತೋಷ ಬಿಜಿ ಪಾಟೀಲ್‌, ಅಶೋಕ ಕುಂಬಾರ್‌, ಶರಣಪ್ಪ ಬಿರಾದಾರ್‌, ಹಣಮಂತ ಕಾರಾಮುಂಗೆ, ಕಾಶಿನಾಥ ಲದ್ದೆ, ಕುಪೇಂದ್ರ ಜಗಶೆಟ್ಟಿ, ರಾಜಕುಮಾರ, ದೀಪಕ ಠಮಕೆ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next