Advertisement
ನಗರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಕಾಡೆಮಿ ಮುನ್ನೋಟದಲ್ಲಿ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಾಹಿತಿಗಳು ಎಂಬ ಕಾರ್ಯಕ್ರಮದ ಮಕ್ಕಳು-ಸಾಹಿತಿಗಳ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಮಾತನಾಡಿ, ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಮಕ್ಕಳಿಗಾಗಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ನಾವೆಲ್ಲರೂ ಈ ಮಹಾಮಾರಿಯಿಂದ ಹೊರ ಬಂದಿದ್ದು, 18 ವರ್ಷದ ಒಳಗಿನ ಮಕ್ಕಳಿಗಾಗಿ ಕಲೆ, ಸಂಗೀತ, ನೃತ್ಯ, ವಿಜ್ಞಾನ, ಸಂಶೋಧನೆ, ನಾಟಕ ಹಾಗೂ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಿದ್ದು, ಸಲಹೆಗಳನ್ನು ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಸೇರಿದಂತೆ ಬೆಂಗಳೂರು, ಮೈಸೂರು, ಬೀದರ್, ಮಡಿಕೇರಿ, ಹಾಸನ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಹಾವೇರಿ, ಧಾರವಾಡ ಮುಂತಾದ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಮಕ್ಕಳ ಸಾಹಿತಿಗಳು ಆಗಮಿಸಿ ತಮ್ಮ ಸಲಹೆ-ಸೂಚನೆ ನೀಡಿದರು.
ಬಸವರಾಜ ಗಾರ್ಗಿ, ರಾಮು ಮೂಲಗಿ, ಕೆ.ಎಚ್. ನಾಯಕ, ವೈ.ಜಿ. ಭಗವತಿ, ಡಾ| ಲಿಂಗರಾಜ ರಾಮಾಪುರ, ಡಾ| ಎ.ಎಲ್. ದೇಸಾಯಿ, ನಾಗರಾಜ ಹುಡೇದ, ಜೆ.ಎಂ. ಮಠದ ಇನ್ನಿತರರಿದ್ದರು. ಅಕಾಡೆಮಿ ಯೋಜನಾ ಧಿಕಾರಿ ಡಾ| ಎಚ್.ಎಚ್ ಕೂಕನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಂಕರ ಹಲಗತ್ತಿ ನಿರೂಪಿಸಿದರು. ಅಕಾಡೆಮಿ ಅಧೀಕ್ಷಕ ಮುತ್ತಣ್ಣ ಸಿ.ಎ ವಂದಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ರಾಜಕೀಯ ವಿಷಯಗಳನ್ನು ಅಳವಡಿಸಬಾರದು. ಅವರ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕ್ರೀಡೆ, ಮನರಂಜನೆ ವಿಷಯಗಳು ರೂಪುಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜರುಗಬಹುದಾದ ಬದಲಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಮಕ್ಕಳನ್ನು ಈಗಿನಿಂದಲೇ ಸದೃಢರನ್ನಾಗಿ ಮಾಡಬೇಕು. -ಡಾ| ಸಿದ್ಧನಗೌಡ್ರ ಪಾಟೀಲ
ಮಕ್ಕಳಿಗೆ ಶಿಕ್ಷಕರೇ ಆದರ್ಶರಾಗಿರುತ್ತಾರೆ. ಶಿಕ್ಷಕರ ಮಾತುಗಳು ಮಕ್ಕಳ ಮಸ್ತಕಕ್ಕೆ ತಟ್ಟುತ್ತದೆ. ಹೀಗಾಗಿ ಮಕ್ಕಳಲ್ಲಿ ಜಾತಿ, ಮತ, ಪಂಥ ಹಾಗೂ ಧರ್ಮದ ಬೀಜಗಳನ್ನು ಬಿತ್ತಬಾರದು. ಇದರಿಂದ ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಅಕಾಡೆಮಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. -ಜಿ.ಬಿ ಹೊಂಬಳ