Advertisement

ಭೂಮಾಪಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

01:14 PM Aug 20, 2019 | Suhan S |

ಶಿರಹಟ್ಟಿ: ಸರ್ಕಾರ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿ ಭೂಮಾಪಕರ ಸಂಘದ ವತಿಯಿಂದ ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಭೂಮಾಪಕ ಸಂಘದ ಜಿಲ್ಲಾಧ್ಯಕ್ಷ ಎಸ್‌.ಬಿ. ಕೊಡತಗೇರಿ ಮಾತನಾಡಿ, ಸರ್ಕಾರ ಭೂಮಾಪಕರ ಸಮಸ್ಯೆ ಇತ್ಯಾರ್ಥಪಡಿಸದೇ ಮತ್ತಷ್ಟು ಕಡತಗಳ ಗುರಿ ನೀಡುವುದರ ಮೂಲಕ ಭೂಮಾಪಕರನ್ನು ಶೋಷಣೆ ಮಾಡುತ್ತಿದೆ. ಸರ್ಕಾರ ನೌಕರರ ವೈಯಕ್ತಿಕ ರಜೆ ಹಾಗೂ ಸರ್ಕಾರಿ ರಜೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಪ್ರತಿ ತಿಂಗಳು 30 ಕಡತಗಳ ಗುರಿ ನೀಡಲಾಗಿದೆ. ಇಂತಹ ಅವೈಜ್ಞಾನಿಕ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೇ ನೌಕರರು ಮೋಜಿಣಿ ಸರ್ವರ್‌ ಸಮಸ್ಯೆಯಿಂದ ನಿತ್ಯ ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಸರ್ವರ್‌ನ್ನು ನೋಂದಣಿ ಕಚೇರಿಯಲ್ಲಿರುವಂತೆ ಕ್ರಮ ಕೈಗೊಳ್ಳಬೇಕು. ಭೂಮಾಪಕರ ಮೇಲೆ ಶಿಸ್ತು ಕ್ರಮಕ್ಕೊಳಪಡಿಸುವ ವ್ಯವಸ್ಥೆ ಕೈಬಿಡಬೇಕು. ಖಾಲಿ ಇರುವ ಹುದ್ದೆಯನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು. ತಾಂತ್ರಿಕ ವೇತನ ಶ್ರೇಣಿಯಲ್ಲಿ ಸಮನಾದ ಹುದ್ದೆಗೆ ಸಮನಾದ ವೇತನ ಕಲ್ಪಿಸಬೇಕು. ಕಚೇರಿ ನಿರ್ವಾಹಕ ನೌಕರರಿಗೆ ನೀಡುತ್ತಿರುವ ಮಾಸಿಕ ನಿಗದಿತ ಭತ್ಯೆ 600 ರೂ. ಬದಲಾಗಿ ಪ್ರತಿ ಮಾಹೆ 2000 ಹೆಚ್ಚಿಸಬೇಕು ಹಾಗೂ ಪ್ರತಿ ಮಾಹೆ 300 ಸಾದಿಲ್ವಾರ ವೆಚ್ಚವನ್ನು ನೀಡಬೇಕು. ಇಲ್ಲದಿದ್ದರೆ ನೌಕರರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ನೌಕರರನ್ನು ಕರೆದು ಸಭೆ ಹಾಗೂ ಚರ್ಚೆ ನಡೆಸಿ ನೌಕರರ ಸಮಸ್ಯೆ ಸೌಹಾರ್ದಯುತವಾಗಿ ಪರಿಹಾರ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಸೆ. 9ರಂದು ಬೆಂಗಳೂರು ಚಲೋ ರ್ಯಾಲಿ ಹಮ್ಮಿಕೊಳ್ಳುವುದರ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿ.ಐ. ಪೂಜಾರ, ಪಿ.ಎಎಸ್‌. ಬಾಣದ, ಮಂಜುನಾಥ ಪಾಟೀಲ, ಸುರೇಶ ಪರಸಣ್ಣವರ, ಲಕ್ಷಿ ್ಮೕ ಶಿದ್ದನ್‌, ಫಾತೀಮಾ ಸಿ.ಎಂ., ಮಹ್ಮದ್‌ ಇರ್ಫಾನ್‌, ನೀಲವ್ವ ಹೊಸಗೌಡ್ರ, ಪ್ರಕಾಶ ನಡವಿನಮನಿ, ನಂದೀಶ ಇಳಿಗೇರ, ಮಂಜುನಾಥ ಮಲ್ಲಾಡದ, ಈಶ್ವರ ಸೇರಿದಂತೆ ಭೂಮಾಕರ ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next