ಬೀದರ: ಆಂಧ್ರ ಪ್ರದೇಶದಲ್ಲಿ ಒಂದು ಲಕ್ಷಕ್ಕೂಅಧಿ ಕ ಕೊರೊನಾ ಸೋಂಕಿತರ ವೈದ್ಯಕೀಯ ವೆಚ್ಚವನ್ನುಆರೋಗ್ಯಶ್ರೀ ಯೋಜನೆಯಡಿ ಅಲ್ಲಿನಸರ್ಕಾರವೇ ಭರಿಸಿದೆ. ಅದೇ ಮಾದರಿಯಲ್ಲಿರಾಜ್ಯದಲ್ಲೂ ಕೊರೊನಾ ಸೋಂಕಿತರುಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರಭರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು,ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಗಂಭೀರವಾಗಿರುವಸಾವಿರಾರು ರೋಗಿಗಳಿಗೆ ಆಸ್ಪತ್ರೆ ಸಿಗುತ್ತಿಲ್ಲ. ಸಿಕ್ಕರೂಆಕ್ಸಿಜನ್, ಹಾಸಿಗೆ ಸಿಗುತ್ತಿಲ್ಲ, ವೆಂಟಿಲೇಟರ್‌ದೊರಕುತ್ತಿಲ್ಲ, ಐಸಿಯು ಲಭ್ಯವೇ ಇಲ್ಲ ಈ ಪರಿಸ್ಥಿತಿಸುಧಾರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಲೂಟಿನಡೆಯುತ್ತಿದೆ. ಎಚ್‌ಆರ್‌ಸಿಟಿ ಸ್ಕ್ಯಾನ್‌ಗೆ 5-6 ಸಾವಿರರೂಪಾಯಿ, ರೆಮ್‌ಡೆಸಿವಿಯರ್ ಚುಚ್ಚುಮದ್ದಿಗೆ 15-20ಸಾವಿರ ರೂಪಾಯಿ, ಆಕ್ಸಿಜನ್ ಬೆಡ್, ವೆಂಟಿಲೇಟರ್‌ಗೆ 20 -25 ಸಾವಿರಾರು ರೂಪಾಯಿ ಮತ್ತು ಇನ್ನುಐಸಿಯುಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದ್ದು,5-6 ದಿನಗಳ ಚಿಕಿತ್ಸೆಗೆ 8-10 ಲಕ್ಷ ರೂ.ಬಿಲ್ ಮಾಡುತ್ತಿದ್ದಾರೆ. ಇದರಿಂದ ಬಡಮತ್ತು ಮಧ್ಯಮ ವರ್ಗದವರು ನಲುಗಿಹೋಗುತ್ತಿದ್ದಾರೆ.
ನೆರೆಯ ಆಂದ್ರದಲ್ಲಿ ಸರ್ಕಾರ ಈವರೆಗೆ1.33 ಲಕ್ಷ ಕೋವಿಡ್ ರೋಗಿಗಳಿಗೆ ಆರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿಆರೋಗ್ಯಶ್ರೀ ಯೋಜನೆಯಡಿ ಉಚಿತವಾಗಿ ಚಿಕಿತ್ಸೆಕೊಡಿಸಿದೆ. ಇದಕ್ಕಾಗಿ 309 ಕೋಟಿ ರೂಪಾಯಿಗಳನ್ನುಅಲ್ಲಿನ ಸರ್ಕಾರವೇ ಭರಿಸಿದೆ. ಸಂಕಷ್ಟದ ಸಮಯದಲ್ಲಿಜನಪರ ಕಾರ್ಯ ಮಾಡಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.
ರಾಜ್ಯ ಸರ್ಕಾರವೂ ಈ ಮಾದರಿಅನುಸರಿಸಬೇಕು. ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಯ ಆದೇಶಹೊರಡಿಸಬೇಕು, ಇಲ್ಲವಾದರೆ ಎಲ್ಲ ಸೋಂಕಿತರ ಸಾವಿನಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದುಹೇಳಿದ್ದಾರೆ.