Advertisement

ಕೋವಿಡ್‌ ಲಸಿಕೆ ಕೊರತೆಯಾಗದಂತೆ ಸರ್ಕಾರ ಎಚ್ಚರವಹಿಸಲಿ

02:33 PM Aug 09, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಮತ್ತೆ ಕೋವಿಡ್‌ ಲಸಿಕೆಯ ಕೊರತೆ ಎದುರಾಗಿದ್ದು, ಕೊರತೆ ನೀಗಿಸುವಂತೆ ಜಿಲ್ಲೆಯ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಜನ ಲಸಿಕೆ ಪಡೆಯಲು ಧಾವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಲಸಿಕೆ ಕೊರತೆ ಎದುರಾಗಿರು
ವುದರಿಂದ ಬೆಂಗಳೂರು ನಾಗರಿಕರು ಮತ್ತೆ ರಾಮನಗರ ಜಿಲ್ಲೆಯ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲಾರಂಭಿಸಿದ್ದಾರೆ. ಕೆಲವು ಲಸಿಕಾ ಕೇಂದ್ರಗಳಲ್ಲಿ ಟೋಕನ್‌ ಪಡೆದ ಮರುದಿನ ಲಸಿಕೆ ಪಡೆಯುವ ಪರಿಸ್ಥಿತಿ ಎದುರಾಗಿದೆ.

Advertisement

ಬೇಡಿಕೆಗೆ ತಕ್ಕಂತೆ ಲಸಿಕೆಯ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ. ಹೀಗಾಗಿ ಕೊರತೆ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.ಕೆಲವು ಲಸಿಕಾ ಕೇಂದ್ರಗಳಲ್ಲಿ ಇದ್ದಕ್ಕಿದ್ದ ಹಾಗೆ ಎರಡನೇ ಡೋಸ್‌ ಮಾತ್ರ ಕೊಡಲಾಗುವುದು ಎಂದು ಮೊದಲನೇ ಡೋಸ್‌ಗೆ ಬಂದವರನ್ನು ಸಾಗಿ ಹಾಕುತ್ತಿದ್ದಾರೆ. ಇನೊಂದು ದಿನ ಮೊದಲನೇ ಡೋಸ್‌ ಮಾತ್ರ ಎಂದು ಹೇಳುತ್ತಿರುವುದು, ನಾಗರೀಕರು ಪುನಃ, ಪುನಃ ಲಸಿಕಾಕೇಂದ್ರಗಳಿಗೆ ಹೋಗಿ ಬರುವಂತಾಗಿದೆ ಎಂಬ ದೂರುಗಳು ಸಮಾಜದಲ್ಲಿ ಕೇಳಿ ಬರುತ್ತಿದೆ.

ಶೇ.80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ: ಜಿಲ್ಲಾಸ್ಪತ್ರೆಯಲ್ಲಿ ತೀರಾ ಇತ್ತೀಚೆಗೆ ಮೊದಲನೇ ಡೋಸ್‌ಗೆ ಜನ ಕಾದು ಕುಳಿತಿದ್ದಾಗ, ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ಅವಕಾಶ ಎಂದು ಘೋಷಿಸಿದ್ದರಿಂದ ಜನ ರೊಚ್ಚಿಗೆದ್ದಿದ್ದಾರೆ, ಜನರನ್ನು ಸಮಾಧಾನ ಪಡಿಸುವಲ್ಲಿ ಪೊಲೀಸರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಸಾಕುಸಾಕಾಗಿದೆ. ಪದವಿ ಕಾಲೇಜು ತರಗತಿಗಳು ಆರಂಭವಾಗಿದ್ದು, ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳಿಗೆಹಾಜರಾಗಬೇಕಾಗಿದೆ.ಜಿಲ್ಲೆಯಲ್ಲಿಶೇ.80ಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಲಸಿಕೆಕೊಡಲಾಗಿದೆ. ಬಾಕಿ ಉಳಿದ ವಿದ್ಯಾರ್ಥಿಗಳು ಲಸಿಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಒಲಿಂಪಿಕ್ಸ್ನಲ್ಲಿ 7 ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್

2ನೇ ಡೋಸ್‌ಗೆ ಆದ್ಯತೆ: ಕೆಲವು ಲಸಿಕಾ ಕೇಂದ್ರಗಳಲ್ಲಿ ದಿನನಿತ್ಯ 30ರಿಂದ 50 ಜನಕ್ಕೆ ಮಾತ್ರ ಲಸಿಕೆ ದೊರೆಯುತ್ತಿದೆ. ಪೂರೈಕೆ ಯಾಗುತ್ತಿರುವಷ್ಟು ಲಸಿಕೆಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಈ ವಿಚಾರದಲ್ಲಿ ತಾವು ನಿಸ್ಸಹಾಯಕರು ಎಂದು ಆರೋಗ್ಯ ಇಲಾಖೆ
ಅಧಿಕಾರಿ, ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. ಲಸಿಕೆ ಪೂರೈಕೆ ಕಡಿಮೆ ಇರುವುದರಿಂದ 2ನೇ ಡೋಸ್‌ ಲಸಿಕೆಗೆ ಆದ್ಯತೆ ನೀಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿಯನ್ನು ಮಾಡಿದೆ.

Advertisement

350 ಮಂದಿಗೆ ಮೊದಲನೇ ಡೋಸ್‌: ಲಸಿಕೆ ಕೊರತೆ ಎಂಬ ಆರೋಪಗಳ ನಡುವೆ ಶನಿವಾರ ಜಿಲ್ಲಾಸ್ಪತ್ರೆಯಲ್ಲಿ 350 ಮಂದಿಗೆ ಮೊದಲನೇ
ಡೋಸ್‌ ಲಸಿಕೆ ಕೊಡಲಾಗಿದೆ. ನಾಲ್ಕು ಮಂದಿ ಸಿಬ್ಬಂದಿ ದಿನ ಪೂರ್ತಿ ಲಸಿಕೆ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಎರಡನೇ ಡೋಸ್‌ ಪಡೆಯಬೇಕಾದ ನಾಗರಿಕರು, ಎಸ್‌ಎಂಎಸ್‌ ಬಂದಿದ್ದರೆ ರಾಯರದೊಡ್ಡಿಯ ನಗರ ಆರೋಗ್ಯ ಘಟಕದಲ್ಲಿ ಪಡೆಯಬಹುದು. ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಲಸಿಕೆ ನೀಡಲಾಗುವುದು.ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಎರಡೂ ಲಸಿಕೆಗಳು. ಇಲ್ಲಿ ಎರಡನೇ ಡೋಸ್‌ಗೆ ಆದ್ಯತೆ ನೀಡಲಾಗುತ್ತಿದೆ.
– ಡಾ.ರಾಜು ರಾಥೋಡ್‌, ವೈದ್ಯಾಧಿಕಾರಿ,
ನಗರ ಆರೋಗ್ಯ ಘಟಕ,ರಾಯರದೊಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next