Advertisement

ಆರೋಗ್ಯ ಸುಧಾರಣೆಗೆ ಸರ್ಕಾರ ಜಾಗೃತರಾಗಲಿ

05:14 PM Jun 11, 2021 | Team Udayavani |

ಮಾಗಡಿ: ರಾಜ್ಯ ಸರ್ಕಾರ ಆರೋಗ್ಯ ಸುಧಾರಣೆಗೆ ಜಾಗೃತರಾಗಬೇಕಿದೆ ಎಂದು ಮಾಜಿಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು.

Advertisement

ತಾಲೂಕಿನ ಆಗಲಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ,ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರಿಗೆ ದಿನಸಿ ಕಿಟ್‌ ವಿತರಿಸಿ ಅಭಿನಂದಿಸಿ ಮಾತನಾಡಿ, ಆರೋಗ್ಯತಜ್ಞರು ಮಾಹಿತಿ ನೀಡಿದ್ದರೂ ಕೊರೊನಾಎರಡನೇ ಅಲೆ ತಡೆಗೆ ವಿಫ‌ಲವಾದ ರಾಜ್ಯಸರ್ಕಾರ, ಮೂರನೇ ಅಲೆ ಬಗ್ಗೆ ಮುನ್ನೆಚ್ಚರಿಕೆವಹಿಸಬೇಕು. ಬ್ಲ್ಯಾಕ್‌ ಫ‌ಂಗಸ್‌ಗೆ ಚಿಕಿತ್ಸೆಸಿಗದೆ ಬಡಜನರು ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚುಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಚಿಕಿತ್ಸೆಪಡೆಯುವ ಮಕ್ಕಳ ಜೊತೆ ಪೋಷಕರುಕೋವಿಡ್‌ ಕೇರ್‌ ಕೇಂದ್ರದಲ್ಲಿಇರಬೇಕಾಗುತ್ತದೆ. ಆದ್ದರಿಂದ 8ನೇತರಗತಿವರೆಗಿನ ಮಕ್ಕಳ ಪೋಷಕರಿಗೆ ಲಸಿಕೆನೀಡಬೇಕು. ಇಂತಹ ಸಮಯದಲ್ಲಿಬಡಜನರಿಗೆ ನೆರವು ನೀಡಬೇಕು ಎಂದುಸಲಹೆ ನೀಡಿದರು.

ಜುಟ್ಟನಹಳ್ಳಿ ವಿಎಸ್‌ಎಸ್‌ಎನ್‌ ಅಧ್ಯಕ್ಷಜೆ.ಪಿ ಚಂದ್ರೇಗೌಡ ಮಾತನಾಡಿದರು.ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ,ಜಿಪಂ ಮಾಜಿ ಸದಸ್ಯರಾದ ಎಂ.ಕೆಧನಂಜಯ್ಯ, ವಿಜಯ್‌ಕುಮಾರ್‌, ಡಾ.ರಾಮಚಂದ್ರಯ್ಯ, ತಾಪಂ ಸದಸ್ಯೆ ಸುಮಾರಮೇಶ್‌, ಕೋರಮಂಗಲ ಶ್ರೀನಿವಾಸ್‌,ತೋಟದಮನೆ ಗಿರೀಶ್‌, ತಾಪಂ ಮಾಜಿಅಧ್ಯಕ್ಷ ಕಾಂತರಾಜು, ಸೀಗೇಕುಪ್ಪೆಶಿವಲಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷಕೆ.ಎನ್‌ ಗಂಗರಾಜು, ಸಿ.ಎಂ ಮಾರೇಗೌಡ,ಹರೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next