ಬೆಂಗಳೂರು: ರಾಜ್ಯವ್ಯಾಪಿ ಸುಮಾರು 4.5 ಲಕ್ಷ ಗಾರ್ಮೆಂಟ್ ಉದ್ಯೋಗಿ ಗಳಿದ್ದಾರೆ. ಇದರಲ್ಲಿ 3.5 ಲಕ್ಷದಷ್ಟು ಮಹಿಳೆಯರೇ ಆಗಿದ್ದಾರೆ.
Advertisement
ಸರಕಾರದ ಬೊಕ್ಕಸಕ್ಕೂ ಆದಾಯ ತಂದುಕೊಡುವ ಗಾರ್ಮೆಂಟ್ ಕ್ಷೇತ್ರ ಇದೀಗ ಹಲವು ರೀತಿಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ರಾತ್ರಿ ಪಾಳಿ ಪದ್ಧತಿಯಂತೂ ಮಹಿಳಾ ಉದ್ಯೋಗಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿರಾಮವಿಲ್ಲದೆ ದುಡಿಸಿ ಕೊಳ್ಳುವ ಪರಿಸ್ಥಿತಿ ಬೇರೂ ರಿಕೊಂಡಿದೆ. ಇಂತಹ ಹಲವು ನೀತಿಗಳಿಗೆ ಸರಕಾರ ತಿಲಾಂಜಲಿ ಹಾಕಬೇಕಾಗಿದೆ.
Related Articles
Advertisement
ಈಗಾಗಲೇ ಕನಿಷ್ಠ ವೇತನ ಜಾರಿಯಲ್ಲಿದೆ. ಆದರೆ ಗಾರ್ಮೆಂಟ್ ಕ್ಷೇತ್ರಕ್ಕೆ ಬಂದಾಗ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನವನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಈ ವೇತನ ತಾರತಮ್ಯ ತೊಲಗಬೇಕು.
ಗಾರ್ಮೆಂಟ್ ಕ್ಷೇತ್ರದಲ್ಲಿ ದುಡಿಮೆ ಅವಧಿ ಯನ್ನು 12 ಗಂಟೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದನ್ನು ಈ ಹಿಂದೆ ಇದ್ದಂತಹ 8 ಗಂಟೆ ಅವಧಿಗೆ ಇಳಿಸಬೇಕು.
ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕೆಲಸ ಮಾಡುವ ವೇಳೆ ಸರಿಯಾದ ವಿರಾಮ ಕೂಡ ದೊರೆಯುತ್ತಿಲ್ಲ. ರಜೆಗಳನ್ನು ಕೂಡ ಕಾಲ ಕಾಲಕ್ಕೆ ಸರಿಯಾಗಿ ನೀಡುತ್ತಿಲ್ಲ. ಊಟದ ವೇಳೆಗೂ ಕತ್ತರಿ ಹಾಕುವ ವ್ಯವಸ್ಥೆ ಇದೆ.
ಐಟಿ-ಬಿಟಿ ಬಿಟ್ಟರೆ ಸರಕಾರಕ್ಕೆ ಅಧಿಕವಾಗಿ ವಿದೇಶಿ ಬಂಡವಾಳ ಹೂಡಿಕೆಯನ್ನು ತಂದು ಕೊಡುವುದು ಗಾರ್ಮೆಂಟ್ ಕ್ಷೇತ್ರವಾಗಿದೆ. ಆ ಹಿನ್ನೆಲೆಯಲ್ಲಿ ಸರಕಾರ ಬೇರೆ ಬೇರೆ ರಾಜ್ಯಗಳಲ್ಲಿ ಗಾರ್ಮೆಂಟ್ ನೌಕರರಿಗೆ ನೀಡುವ ಸವಲತ್ತುಗಳನ್ನು ನಮ್ಮಲ್ಲಿರುವ ಗಾರ್ಮೆಂಟ್ ನೌಕರರಿಗೂ ಕಲ್ಪಿಸಬೇಕು.
ಸೂರಿಲ್ಲದೆ ಹಲವು ಮಂದಿ ಗಾರ್ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಅಂತವರಿಗೆ ಸೂರುಕಲ್ಪಿಸುವ ನಿಟ್ಟಿನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. 5 ಸಾವಿರ ಕಾರ್ಮಿಕರನ್ನು ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು.