ಕನಕಪುರ: ಮಾಹಾಮಾರಿ ಕೋವಿಡ್ 19 ಸೋಂಕಿಗೆ ನಗರ ಮತ್ತು ಗ್ರಾಮೀಣರು ಬಡವ-ಶ್ರೀಮಂತರು ಎಂಬ ಭೇದವಿಲ್ಲದೆ ಹರಡುತ್ತಿದೆ. ಹೀಗಾಗಿ ಕಾಡಂಚಿನ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾಡಂಚಿನ ಗ್ರಾಮಗಳ ಕುಟುಂಬಗಳಿಗೆ ಅರಣ್ಯ ಇಲಾಖೆ ಕಾವೇರಿ ವನ್ಯಜೀವಿ ವಿಭಾಗದ ಸಂಗಮ ವನ್ಯಜೀವಿ ವಲಯದ ಪರಿಸರ ಅಭಿವೃದ್ಧಿ ಸಮಿತಿಯಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಗ್ರಾಮ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಹೋರಗಿನಿಂದ ಗ್ರಾಮಕ್ಕೆ ಬರುವವರ ಜತೆ ಎಚ್ಚರಿಕೆಯಿಂದ ಇರಬೇಕು. ನೀವು ನಗರ ಪ್ರದೇಶಗಳಿಗೆ ಭೇಟಿ ನೀಡಿದಾಗ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಮುಂಜಾಗ್ರತೆ ಕೈಗೊಂಡರೆ ಮಾತ್ರ ಸೋಂಕಿನಿಂದ ದೂರವಿರಬಹುದು ಎಂದರು. ಅರಣ್ಯ ಇಲಾಖೆ ಡಿಸಿಎಫ್ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮದ ಬಹುತೇಕರು ಪ್ರವಾಸಿತಾಣ ಸಂಗಮದಲ್ಲಿ ಅಂಗಡಿ ಮಳಿಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಸಂಗಮಕ್ಕೆ ಬರುವ ಪ್ರವಾಸಿಗರನ್ನು ಕರೆದೊಯ್ಯವ ಖಾಸಗಿ ವಾಹನಗಳ ಹಾರಾಜು, ವಾಹನ ನಿಲುಗಡೆ ಶುಲ್ಕ ಮತ್ತು ಪ್ರವಾಸಿಗರಿಗೆ ನದಿ ದಾಟಿಸುವ ಹರಾಜು ಪ್ರಕ್ರಿಯೆಯಿಂದ ಈವರೆಗೆ ಸಮಿತಿಗೆ ಸುಮಾರು 16ರಿಂದ 20 ಲಕ್ಷ ರೂ.ಗಳ ಆದಾಯ ಬಂದಿದೆ. ಅದರಿಂದ 5 ಜನ ಸದಸ್ಯರಿಗೆ ಸಂಗಮದಲ್ಲಿ ಉದ್ಯೋಗ ಕಲ್ಪಿಸಲಾಗಿದೆ. 10 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ಶುದಟಛಿ ಕುಡಿಯುವ ನೀರು ಘಟಕ ಸ್ಥಾಪನೆ ಕಾರ್ಯಗಳಿಗೆ ಹಣ ಸದ್ಬಳಕೆಯಾಗಿದೆ.
ಈಗ ಮೂರು ಗ್ರಾಮಗಳ 150 ಕುಟುಂಬಗಳಿಗೆ 5 ಲಕ್ಷ ರೂ. ವೆಚ್ಚದಲ್ಲಿ ತಿಂಗಳಿಗೆ ಸರಿದೂಗುವ ದನಸಿ ಪದಾರ್ಥ ವಿತರಿಸಲಾಗಿದೆ ಎಂದರು. ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ಕರತರಂಗಿ, ಪರಿಸರ ಅಭಿವೃದಿಟಛಿ ಸಮಿತಿ ಅಧ್ಯಕ್ಷ ಬಾಲುನಾಯ್ಕ, ಕಾರ್ಯದರ್ಶಿ ಬಿ.ಟಿ. ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜೆಯ್ ದೇವ್, ಮಾಜಿ ಗ್ರಾಪಂ ಅಧ್ಯಕ್ಷ ರವಿ, ಸದಸ್ಯ ಶಿವಕುಮಾರ್ ಇದ್ದರು.