Advertisement
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಬೆಂಗಳೂರಿನ ಪ್ರಾದೇಶಿಕ ಕಚೇರಿ ವತಿಯಿಂದ ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
7 ದಿನದೊಳಗೆ ಪೂರ್ಣಗೊಳಿಸಬೇಕು. ನಂತರದ ಅವಧಿಗೆ ಯಾವುದೇ ಶುಲ್ಕ ವಿಧಿಸುವ ಹಾಗಿಲ್ಲ. ಸೇವೆ ಒದಗಿಸುವವರು ಗ್ರಾಹಕರ ಸ್ಪಷ್ಟ ಅನುಮತಿಯಿಲ್ಲದೆ ಮೊಬೈಲ್ ಡೇಟಾ ಸೇವೆಯನ್ನು ಸಕ್ರಿಯಗೊಳಿಸುವಂತಿಲ್ಲ. ಗ್ರಾಹಕರು ಶುಲ್ಕ ರಹಿತ ಸಂಖ್ಯೆ 1925ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವ ಮೂಲಕ ಡೇಟಾ ಸೇವೆಯನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು ಎಂದು ವಿವರಿಸಿದರು.
ಮೊಬೈಲ್ ಪೋರ್ಟಬಿಲಿಟಿ ಗ್ರಾಹಕರಿಗೆ ಅಸ್ತಿತ್ವದಲ್ಲಿ ಇರುವ ತಮ್ಮ ಸಂಖ್ಯೆಯನ್ನು ಉಳಿಸಿಕೊಂಡು ಇನ್ನೊಂದು ಸೇವಾ ಸಂಸ್ಥೆಗೆ ಚಲಿಸುವ ಅವಕಾಶ ಒದಗಿಸುತ್ತದೆ. ಮೊಬೈಲ್ ಸಂಪರ್ಕವನ್ನು ಹೊಂದಿದ 90 ದಿನಗಳ ಬಳಿಕವಷ್ಟೇ, ಚಂದಾದಾರರಿಗೆ ಪೋರ್ಟಿಂಗ್ ಮನವಿ ಸಲ್ಲಿಸಲು ಅರ್ಹತೆ ದೊರೆಯುತ್ತದೆ ಎಂದು ತಿಳಿಸಿದರು.
ಅನಪೇಕ್ಷಿತ ಸಂದೇಶಗಳ ಮೇಲೆ ನಿಷೇಧ: ವಾಣಿಜ್ಯಾತ್ಮಕ ಸಂದೇಶಗಳು/ಟೆಲಿಮಾರ್ಕೆಟಿಂಗ್ ಕರೆಗಳನ್ನು ತಡೆಹಿಡಿಯಲು ಗ್ರಾಹಕರು ತಮ್ಮ ಆದ್ಯತೆಯನ್ನು ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆ 1909ಗೆ ಕರೆ ಮಾಡಬಹುದು ಅಥವಾ ಎಸ್‌ಎಂಎಸ್ ಕಳುಹಿಸಬಹುದು. ನೋಂದಣಿಯಾದ ಮೇಲೂ ಸಂದೇಶ ಬಂದಲ್ಲಿ, 3 ದಿನಗೊಳಗಾಗಿ 1909ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವುದರ ಮೂಲಕ ಸರ್ವಿಸ್ ಪ್ರೊವೈಡರ್‌ಗೆ ದೂರನ್ನು ಸಲ್ಲಿಸಬಹುದು ಎಂದು ಹೇಳಿದರು. ಮೊಬೈಲ್ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಟ್ರಾಯ್ ಮೂರು ಹೊಸ ಅಪ್ಲಿಕೇಷನ್ (ಮೈಕಾಲ್, ಮೈಸ್ಪೀಡ್ ಮತ್ತು ಡಿ.ಎನ್.ಡಿ)ಗಳನ್ನು ಮತ್ತು ವೆಬ್ ಪೊರ್ಟಲ್ ಅನ್ನು ಪ್ರಾರಂಭಿಸಿದೆ. ಹೊಸ ಬ್ರಾಡ್‌ಕಾಸ್ಟಿಂಗ್ ರೆಗ್ಯುಲೇಷನ್ ಪ್ರಕಾರ ಕೇಬಲ್ ಟಿ.ವಿ ಯವರು ಮಾಸಿಕ 130 ರೂ.ಗೆ 100 ಉಚಿತ ಚಾನಲ್ ಗಳನ್ನು ಕೊಡಬೇಕು ಎಂದು ಮಾಹಿತಿ ನೀಡಿದರು.
ಟ್ರಾಯ್ ಹಿರಿಯ ಸಂಶೋಧನಾ ಅಧಿಕಾರಿ ಲತಾ ಎಚ್.ಸಿ. ಉಪಸ್ಥಿತರಿದ್ದರು. ಅಧಿಕಾರಿಗಳು, ಗ್ರಾಹಕರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಗ್ರಾಹಕ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.