Advertisement

ಕೃಷಿ ಸಂಶೋಧನೆ ಫಲ ರೈತನಿಗೆ ದೊರೆಯಲಿ

06:45 PM Jul 19, 2021 | Team Udayavani |

ಕಲಬುರಗಿ: ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ನಿರಂತರವಾಗಿ ನಡೆಯಬೇಕಲ್ಲದೇ ಸಂಶೋಧನೆ ಫಲ ಪ್ರಯೋಗಾಲಯದಲ್ಲಿ ಉಳಿಯದೇ ರೈತರು ಮತ್ತು ಅವರ ಭೂಮಿಗೆ ದೊರೆಯುವಂತಾಗಲು ವಿಜ್ಞಾನಿಗಳು, ಕೃಷಿ ತಜ್ಞರು ಇನ್ನಷ್ಟು ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ ಹೇಳಿದರು.

Advertisement

ನಗರ ಹೊರವಲಯದ ಆಳಂದ ಚೆಕ್‌ ಪೋಸ್ಟ್‌ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ಐಸಿಎಆರ್‌ -ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ-2020 ಮತ್ತು ಹಾಲಸುಲ್ತಾನಪುರದ ಪ್ರಗತಿಪರ ಹಾಗೂ ಕ್ರಿಯಾಶೀಲ ಕೃಷಿಕ ಶರಣಬಸಪ್ಪ ಪಾಟೀಲ ಅವರಿಗೆ ಐಸಿಎಆರ್‌-ಜಗಜೀವನರಾಂ ಆವಿಷ್ಕಾರ ಕೃಷಿ ಪುರಸ್ಕಾರ-2020 ಲಭಿಸಿದ್ದರ ಪ್ರಯುಕ್ತ ಕೆವಿಕೆ ಸಭಾಂಗಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ, ಕೆಎಚ್‌ಬಿ ಗ್ರೀನ್‌ ಪಾರ್ಕ್‌ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ರೈತರು ಹೊಸ ಮಾದರಿ ಬೇಸಾಯ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬೇಕು. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರ ಮಾರ್ಗದರ್ಶನ, ಸಲಹೆ ಪಡೆಯಿರಿ ಎಂದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಕೆವಿಕೆ ಮುಖ್ಯಸ್ಥ ಡಾ| ರಾಜು ಜಿ.ತೆಗ್ಗಳ್ಳಿ, ನಮ್ಮ ಭಾಗದ ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಕೃಷಿ ಸಂಶೋಧನಾ ಕೇಂದ್ರ ಸದಾ ಸನ್ನದ್ಧವಾಗಿದೆ. ಕೇಂದ್ರದ ಸಿಬ್ಬಂದಿಯ ಸಾಮೂಹಿಕ ಶ್ರಮ ಮತ್ತು ಇಡೀ ರೈತ ಸಮೂಹಕ್ಕೆ ದೊರೆತ ಪ್ರಶಸ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಗಿರೀಶ ಕಡ್ಲೆವಾಡ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್‌.ಬಿ.ಪಾಟೀಲ, ಕೆಎಚ್‌ಬಿ ಗ್ರೀನ್‌ ಪಾರ್ಕ್‌ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಸೂರ್ಯಕಾಂತ ಸಾವಳಗಿ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಹೆಳವರ ಯಾಳಗಿ, ಬಸವರಾಜ ಎಸ್‌. ಪುರಾಣೆ, ವಿಜಯಕುಮಾರ ಮಾಸ್ಟರ್‌, ಎಸ್‌. ಎಸ್‌.ಪಾಟೀಲ ಬಡದಾಳ ಹಾಗೂ ಉಭಯ ಸಂಸ್ಥೆ ಪದಾಧಿ ಕಾರಿಗಳು, ಕೆವಿಕೆ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next