ಔರಂಗಾಬಾದ್ : ನಾಯಿಗಳು ಬೊಗಳಿದರೆ ಸಿಂಹಗಳು ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುತ್ತವೆ. ಅವರ ಬಲೆಗೆ ಬೀಳಬೇಡಿ.ಅವರು ಏನೇ ಹೇಳಿದರೂ ನಗುತ್ತಾ ನಿಮ್ಮ ಕೆಲಸವನ್ನು ಮಾಡುತ್ತಾ ಇರಿ ಎಂದು ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ರಾಜ್ ಠಾಕ್ರೆ ವಿರುದ್ಧ ಕಿಡಿ ಕಾರಿದ್ದಾರೆ.
ಔರಂಗಾಬಾದ್‌ನಲ್ಲಿ ಪಕ್ಷದ ಕಾರ್ಯಕರತರನ್ನುದ್ದೇಶಿಸಿ ಮಾತನಾಡಿದ ಅಕ್ಬರುದ್ದೀನ್, ನಾನು ಯಾರ ಕುರಿತೂ (ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ) ಕೆಟ್ಟದಾಗಿ ಹೇಳಲು ಬಂದಿಲ್ಲ. ಮಾನ್ಯತೆಗೂ ಅರ್ಹರಲ್ಲದವರಿಗೆ ನಾವೇಕೆ ಉತ್ತರ ಕೊಡಬೇಕು? ತಮ್ಮ ಸ್ವಂತ ಮನೆಯಿಂದ ಹೊರಹಾಕಲ್ಪಟ್ಟ ಜನರ ಬಗ್ಗೆ ಹೇಳಲು ಏನಿದೆ? ನಮಗೆ ಭಯವಿಲ್ಲ ಎಂದರು.
ಇದನ್ನೂ ಓದಿ : ಉಗ್ರರಿಂದ ಕಾಶ್ಮೀರಿ ಪಂಡಿತರ ಹತ್ಯೆ; ಹೆದ್ದಾರಿ ತಡೆದು ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ
ಆಜಾನ್ ವಿರೋಧಿ ಹೋರಾಟ ನಡೆಸುತ್ತಿರುವ ರಾಜ್ ಠಾಕ್ರೆ ವಿರುದ್ಧ ಓವೈಸಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
Related Articles
ಅಕ್ಬರುದ್ದೀನ್ ಓವೈಸಿ ಗುರುವಾರ ಔರಂಗಾಬಾದ್ ಜಿಲ್ಲೆಯ ಖುಲ್ದಾಬಾದ್ ಪ್ರದೇಶದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.