Advertisement

ಸಂಕಷ ಸಮಯ ಸಂಘ-ಸಂಸ್ಥೆ ಗಳು ನೆರವಾಗಲಿ: ಎಂ. ಕೃಷ್ಣ ಎನ್‌. ಶೆಟ್ಟಿ

10:17 AM Aug 17, 2021 | Team Udayavani |

ಕಾಂದಿವಲಿ, ಆ. 16. ಸಮಸ್ಯೆಗಳು ಎದುರಾದಾಗ ಕರ್ತವ್ಯದ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಸಹಾಯಹಸ್ತ ಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು. ಚಾರ್ಕೋಪ್‌ ಕನ್ನಡಿಗರ ಬಳಗ ಅದಿದೇವತೆ ವಿದ್ಯಾಮಾತೆ ಶಾರದೆಯ ಆರಾಧನಾ ಸಂಸ್ಥೆಯಾಗಿದ್ದು, ಆ ಮೂಲಕ ಪ್ರಸಕ್ತ ವರ್ಷದಲ್ಲಿಯೂ ಕೋವಿಡ್‌ ಸಂಕಷ್ಟ ದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಬರಬಾರದೆಂಬ ದೃಷ್ಟಿಯಿಂದ ಬಳಗದ ವತಿ ಯಿಂದ ಕೊಡಮಾಡಿದ ಈ ಸಹಾಯವನ್ನು ಶಾರದಮಾತೆಯ ವಿದ್ಯಾದಾನದ ಪ್ರಸಾದವೆಂದು ಸ್ವೀಕರಿಸಬೇಕು ಎಂದು ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ತಿಳಿಸಿದರು.

Advertisement

ಆ. 14ರಂದು ಚಾರ್ಕೋಪ್‌ ಕನ್ನಡಿಗರ ಬಳಗದ ವತಿಯಿಂದ ಸಂಸ್ಥೆಯ ಕನ್ನಡ ಭವನ ಕಿರು ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಧನಸಹಾಯ ವಿತರಿಸಿ ಮಾತನಾಡಿ, ಬಳಗವು ನೀಡಿದ ಈ ಸಹಾಯವು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವಾಗಿರದೆ, ಸಂಕಷ್ಟ ಸಮಯದಲ್ಲಿ ವಿದ್ಯಾರ್ಥಿಗಳ ಶಾಲಾ ಖರ್ಚು-ವೆಚ್ಚವನ್ನು ನಿಭಾಯಿಸುವ ಉದ್ದೇಶದಿಂದ ವಿತರಿಸಲಾಗಿದೆ. ಶಾರದಾ ಮಾತೆಯ ಅನುಗ್ರಹದಿಂದ ನಿಮ್ಮ ಶಿಕ್ಷಣವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಂಘದ ವಿಶ್ವಸ್ತ ಜಯ ಸಿ. ಶೆಟ್ಟಿ ಮಾತನಾಡಿ, ಚಾರ್‌ಕೋಪ್‌ ಕನ್ನಡಿಗರ ಬಳಗವು ಚಾರ್ಕೋಪ್‌, ಕಾಂದಿವಲಿ ಪರಿಸರದಲ್ಲಿ ಸದಾ ಕನ್ನಡ ಕಾರ್ಯಕ್ರಮ ಹಾಗೂ ಸಾಮಾಜಿಕ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಯಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ ಸಮಸ್ಯೆ ಯಿಂದ ಬಳಗದ ಕಾರ್ಯಕ್ರಮವು ನಿಂತ ನೀರಾಗಿರಲಿಲ್ಲ. ಸಂಕಷ್ಟದಲ್ಲಿದ್ದ ಎಲ್ಲ ಸಮಾಜ ಬಾಂಧವರಿಗೆ ಸಹಕರಿಸಿದ್ದೇವೆ.

ಆದರೂ ಬಳಗವು ಹನಿಗೂಡಿದರೆ ಹಳ್ಳ ಎಂಬ ಮಾತಿನ ಹಿನ್ನೆಲೆಯಲ್ಲಿ ಪರಿಸರದ ಹಲವು ವಿದ್ಯಾರ್ಥಿಗಳಿಗೆ ಕೈಲಾದಷ್ಟು ಶೈಕ್ಷಣಿಕ ಸಹಾಯ ಮಾಡುತ್ತಿದೆ. ಇದರ ಪ್ರಯೋಜನ ಮುಂದಿನ ಪೀಳಿಗೆಗೆ ದೊರೆಯಬೇಕೆಂಬ ಉದ್ದೇಶ ಬಳಗದ್ದಾಗಿದೆ. ಜಗನ್ಮಾತೆ ಶಾರದೆ ಎಲ್ಲರನ್ನು ಕಾಪಾಡಲಿ ಎಂದು ಹಾರೈಸಿದರು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ಇಂದು ಸಂಘ-ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೆ.

ನಿರಂತರ ಕಾರ್ಯಕ್ರಮ ನೀಡುತ್ತಾ ಬಳಗವು ಚಾರ್ಕೋಪ್‌ ಪರಿಸರದ ಎಲ್ಲ ವರ್ಗಗಳ ತುಳು-ಕನ್ನಡಿಗರ ವೇದಿಕೆ ಯಾಗಿದೆ. ಪರಿಸರದ ದಾನಿಗಳು, ಹಿತೈಷಿ ಗಳಿಂದ ಪಡೆದ ಧನ ಸಹಾಯದಿಂದ ಕಾರ್ಯಕ್ರಮವನ್ನು ನಡೆಸುತ್ತಿದ್ದೇವು. ಈಗ ಸಮಿತಿಯು ಯಾರಲ್ಲಿಯೂ ದೇಣಿಗೆ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಸಂಕಷ್ಟ ಎದುರಾದರೂ ಬಳಗದ ವತಿಯಿಂದ ಅಳಿಲ ಸೇವೆಯಾಗಿ ನಮ್ಮವರಿಗೆ ಶಾರದಾ ಮಾತೆಯ ಅನುಗ್ರಹದ ಪ್ರಸಾದದ ರೂಪದಲ್ಲಿ ಈ ಧನಸಹಾಯವನ್ನು
ನೀಡಿದ್ದೇವೆ. ಈ ಸಹಾಯ ವಿದ್ಯಾರ್ಥಿಗಳ ಜೀವನದಲ್ಲಿ ನೆನಪಾಗಿ ಉಳಿಯುವಂತಾಗಲಿ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಚೆಕ್‌ ರೂಪದಲ್ಲಿ ಧನಸಹಾಯ ವಿತರಿಸಲಾಯಿತು. ಬಳಗದ ಗೌರವ ಕೋಶಾಧಿಕಾರಿ ಗೌರಿ ಡಿ. ಪಣಿಯಾಡಿ, ಜತೆ ಕೋಶಾಧಿಕಾರಿ ರಮೇಶ್‌ ಕೋಟ್ಯಾನ್‌, ಜತೆ ಕೋಶಾಧಿಕಾರಿ ವಸಂತಿ ಯು. ಸಾಲ್ಯಾನ್‌, ವಾರ್ಷಿಕೋತ್ಸವ ಮತ್ತು ಪೂಜಾ ಉಪಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಚೇವಾರ್‌, ಸಮಿತಿಯ ಸದಸ್ಯರಾದ ವನಜಾ ಡಿ. ಶೆಟ್ಟಿ, ಮಹೇಂದ್ರ ಕಾಂಚನ್‌ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

*ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next