Advertisement

“ಮಕ್ಕಳಿಗೆ ಜೀವನ ಸಂಸ್ಕಾರ ತಿಳಿಸುವ ಕಾರ್ಯವಾಗಲಿ ’

09:46 PM Apr 24, 2019 | Sriram |

ಕಟೀಲು: ಶ್ರದ್ಧೆ,ಭಕ್ತಿ,ಆಚರಣೆಗಳ ಮೂಲಕ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸುವ ಕಾರ್ಯಕ್ಕೆ ಹೆತ್ತವರು ಪ್ರೋತ್ಸಾಹ ನೀಡಬೇಕೆಂದು ಸಂಜೀವನಿ ಟ್ರಸ್ಟ್‌ನ ಡಾ| ಸುರೇಶ್‌ ರಾವ್‌ ಹೇಳಿದರು.

Advertisement

ಅವರು ಎ. 24 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಯೋಗದಲ್ಲಿ ಸಂಜೀವನಿ ಟ್ರಸ್ಟ್‌, ಕಟೀಲು ನಂದಿನೀ ಬ್ರಾಹ್ಮಣ ಸಭಾದ ಸಹಕಾರದಲ್ಲಿ 21ದಿನಗಳ ವಸಂತವೇದ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಕಟೀಲು ದೇಗುಲದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ,ಯಕ್ಷಧರ್ಮಬೋಧಿನೀ ಚಾರಿಟೆಬಲ್‌ನ ರಾಘವೇಂದ್ರ ಆಚಾರ್ಯ ಬಜಪೆ,ನಂದಿನೀ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ| ಶಶಿಕುಮಾರ್‌,ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯ ಡಾ| ಪದ್ಮನಾಭ ಮರಾಠೆ, ಡಾ| ನಾಗರಾಜ, ಶಿಕ್ಷಕರಾದ ಚಂದ್ರಶೇಖರ್‌, ಶ್ರೀವತ್ಸ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next