Advertisement
ಬುಧವಾರ ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಹೊನ್ನಾವರದ ಪರೇಶ ಮೇಸ್ತ ಸಾವಿನ ಹೆಸರು ಬಳಸಿ ಅಂದಿನ ಚುನಾವಣೆ ಗೆದ್ದ ಬಿಜೆಪಿ ಶಾಸಕರಿಗೆ ನೈತಿಕತೆ ಇಲ್ಲ. ಶಿರಸಿ ಗಲಭೆಯಲ್ಲಿ ಇಂದಿನ ವಿಧಾನ ಸಭಾ ಅಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಪಾಲ್ಗೊಂಡಿದ್ದು, ಸಿಬಿಐ ವರದಿ ಬಂದ ಬಳಿಕ ಪ್ರತಿಕ್ರಿಯೆ ಕೊಟ್ಟು ರಾಜೀನಾಮೆ ನೀಡಬೇಕಿದೆ ಎಂದರು.
Related Articles
Advertisement
ರಾಜ್ಯದಲ್ಲಿ ಸರಕಾರವೇ ಇಲ್ಲ. ಗುತ್ತಿಗೆದಾರರಿಗೆ ಹಣದ ಬಟವಡೆ ಇಲ್ಲ. ಶೇ.40ರ ಕಮಿಷನ್ ಸಹಕಾರ ಎಂದೇ ಹೆಸರು ಬಿದ್ದಿದೆ ಎಂದೂ ವಾಗ್ದಾಳಿ ನಡೆಸಿದ ಅವರು ಪರೇಶ ಮೇಸ್ತ ಸಾವಿನ ಪ್ರಕರಣದ ಸಿಬಿಐ ವರದಿ ಕೋರ್ಟ್ ಗೆ ನೀಡಿದ ಬಳಿಕ ಜಿಲ್ಲೆಯಲ್ಲೂ ಗೊಂದಲ ಸೃಷ್ಟಿ ಆಗಿದೆ ಎಂದರು.
ರಾಜಕೀಯ ಸ್ವಾರ್ಥಕ್ಕೆ ಕೋಮು ಗಲಭೆ ಸಂದರ್ಭ ಸೃಷ್ಟಿಸಿದ್ದು ಅಕ್ಷಮ್ಯ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾಗ್ರಹದ ಮೇರೆಗೆ ಪ್ರಕರಣ ಸಿಬಿಐಗೆ ವಹಿಸಿದ್ದಾರೆ. ಈಗಿನ ಬಿಜೆಪಿ ಸರಕಾರದ ಸಿಬಿಐ ವರದಿ ನೀಡಿದೆ ಎಂದ ಅವರು, ಜಿಲ್ಲೆಯಲ್ಲಿನ ಭಯದ ವಾತಾವರಣ ಕಳೆಯಬೇಕಿದೆ. ಇದಕ್ಕಾಗಿ ಹೊನ್ನಾವರದಲ್ಲಿ ಅ.7 ರಂದು 11 ಗಂಟೆಗೆ ನಡೆಯುವ ಜಾಗೃತಿ ಅಭಿಯಾನದಲ್ಲಿ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇಳೆ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ್ ದೊಡ್ಮನಿ ಇತರರು ಇದ್ದರು.