ಪಿರಿಯಾಪಟ್ಟಣ: ಸಂಘ ಸಂಸ್ಥೆಗಳು ಬಡವರು ಮತ್ತು ದುರ್ಬಲ ವರ್ಗದವರಿಗೆ ನೆರವಾಗುವ ಮೂಲಕ ನೊಂದವರ ಕಣ್ಣಿರು ಒರೆಸುವ ಕೆಲಸ ಮಾಡಬೇಕು ಎಂದು ಟಿಬೇಟಿಯನ್ ಸಮುದಾಯದ ಮುಖಂಡ ತಂಡೂಪ ಹೇಳಿದರು. ತಾಲೂಕಿನ ಆಯರಬೀಡು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸಿದ್ಧಾರ್ಥ್ ಸೇವಾ ಟ್ರಸ್ಟ್ ವತಿಯಿಂದ ಬುಡಕಟ್ಟು ಸಮುದಾಯದ ಮಕ್ಕಳಿಗೆ ಉಚಿತ ಬಟ್ಟೆ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದರು.
ಸೇವೆ ಮಾಡಬೇಕು: ಸೇವೆ ಎಂಬುದು ಯಾವುದೇ ಒಂದು ಧಮರ್‌ಕ್ಕೆ ಸೀಮಿತವಾದುದಲ್ಲ, ಜಾತಿ, ಧಮರ್‌ದ ಭೇದ ಮರೆತು ನೊಂದರವ ನೆರವಿಗೆ ಧಾವಿಸುವುದು ಸಂಘ ಸಂಸ್ಥೆಗಳ ಗುಣವಾಗಬೇಕು. ನೊಂದ ಜನರ ಅವಶ್ಯಕತೆಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡಬೇಕು. ಸಮುದಾಯದ ಜವಾಬ್ದಾರಿಯನ್ನು ಸಂಘ ಸಂಸ್ಥೆಗಳು ನಿರ್ವಹಿಸುವಂತಾಗಬೇಕು, ಈ ನಿಟ್ಟಿನಲ್ಲಿ ಸಿದ್ಧಾರ್ಥ್ ಸೇವಾ ಟ್ರಸ್ಟ್ ನ ಕಾಯರ್ ಶ್ಲಾಘನೀಯ ಎಂದರು.
ಸಿದ್ಧಾರ್ಥ್ ಟ್ರಸ್ಟ್ ಸೇವೆ ಶ್ಲಾಘನೀಯ: ತಾಪಂ ಮಾಜಿ ಅಧ್ಯಕ್ಷ ಎಸ್.ರಾಮು ಮಾತನಾಡಿ, ಸಮಾಜದಲ್ಲಿನ ಅಸಾಯಕ ಹಾಗೂ ನೊಂದವರ ಕಣ್ಣಿರು ಒರೆಸುತ್ತೇವೆ ಎಂದು ಹೇಳಿ ಸರ್ಕಾರದ ಅನುದಾನವನ್ನು ತಮ್ಮ ಸ್ವಾಥರ್ ಸಾಧನೆ ಮೆರೆಯುವ ಕಾಲಘಟ್ಟದಲ್ಲಿ, ಕಾಡಂಚಿನಲ್ಲಿ ಅಳಿವಿನ ಹಂತದಲ್ಲಿರುವ ಅದರಲ್ಲೂ ಬುಡಕಟ್ಟು ಸಮುದಾಯದ ಮಕ್ಕಳೇ ಹೆಚ್ಚಾಗಿರುವ ಶಾಲೆಯನ್ನು ಗುರುತಿಸಿ ಅವರ ಬಾಳಿಗೆ ಹಾಗೂ ಶಿಕ್ಷಣಕ್ಕೆ ನೆರವಾಗಲು ಪಣತೊಟ್ಟಿರುವ ಸಿದ್ಧಾರ್ಥ್ ಸೇವಾ ಟ್ರಸ್ಟ್ ಸೇವೆ ಶ್ಲಾಘನೀಯ ಎಂದು ಹೇಳಿದರು.
ಮೂಲಭೂತ ಸೌಲಭ್ಯ: ಸೇವೆ ಮಾಡಿ ಅರಿವಿಲ್ಲದಂತೆ ಶ್ರೀಮಂತಿಕೆ ನಿಮ್ಮ ಹಿಂದೆ ಬರುತ್ತದೆ ಎಂಬ ಕಿವಿ ಮಾತು ಹೇಳಿ, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಸಮುದಾಯವರೇ ಹೆಚ್ಚಾಗಿರುವ ಆಯರಬಿಡು ಗ್ರಾಮಕ್ಕೆ ನೂತನವಾಗಿ ರಸ್ತೆ ಮತ್ತು ಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆ. ಈ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಶ್ರಮವಹಿಸಿ ಎಂದರು. ಮಾಡಿದರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ. ಇಂಥ ಅಭಿಮಾನ ಪಡುವ ಕೆಲಸಗಳಿಗೆ ಸದಾ ಸಿದ್ಧ ನಮ್ಮ ಬೆಂಬಲವಿರುವುದಾಗಿ ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ ಮಾತನಾಡಿ, ಬುಡಕಟ್ಟು ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸಾವಿರಾರು ಕೋಟಿ ಹಣ ಮೀಸಲಿಟ್ಟಿದ್ದು, ಬುಡಕಟ್ಟು ಸಮುದಾಯದ ಜನರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದೊಯ್ಯವುದನ್ನು ಬಿಟ್ಟು ಅವರಿಗೆ ಅಗತ್ಯ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಟಿಬೇಟಿಯನ್ ಸಮುದಾಯದ ಧಮರ್‌ಗುರುಗಳಾ ಸೂಪಾ, ಡಕ್ಬಾ, ಗ್ರಾಪಂ ಮಾಜಿ ಅಧ್ಯಕ್ಷ ನವಿಲೂರು ಚನ್ನಪ್ಪ, ಸದಸ್ಯ ರಾಜೇಂದ್ರ, ನಿವೃತ್ತ ಶಿಕ್ಷಕಿ ಜಯಮ್ಮ, ಸಿಆರ್‌ಪಿ ಸುರೇಶ್, ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಶಿಕ್ಷಕಿಯರಾದ ಶಬೀನಾ, ಭಾಗ್ಯ ಲಕ್ಷ್ಮೀ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್, ಎಚ್.ಡಿ.ಕೋಟೆ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ಸಿದ್ಧಾರ್ಥ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಕಾಂತರಾಜು, ಉಪಾಧ್ಯಕ್ಷ ಆರ್.ಮಹದೇವ್, ಕಾಯರ್‌ದಶಿರ್ ಎಸ್.ಸುಧಾ, ನಿದೆರ್‌ಶಕ ರಾದ ಅಬ್ಬೂರ್ ಶಂಕರ್, ಮಹೇಶ್ ಕುಮಾರ್, ದಾಸಯ್ಯ, ಆಲನಹಳ್ಳಿ ಅಶೋಕ್, ಭೈರವ, ಚಲುವರಾಜು, ಗೊರಳ್ಳಿ ರಾಜಣ್ಣ ಮುಖಂಡ ನಾಗೇಶ್ ಇದ್ದರು.