Advertisement

ಅಲೆಮಾರಿ, ಬುಡಕಟ್ಟು ಸಮುದಾಯ ಸಬಲವಾಗಲಿ

04:34 PM Oct 20, 2020 | Suhan S |

ಪಾವಗಡ: ಅಲೆಮಾರಿ ಬುಡಕಟ್ಟು ಜನರನ್ನು  ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಅಲೆಮಾರಿ ಬುಡಕಟ್ಟು ಮಹಾಸಭಾ ಸ್ಥಾಪನೆಯಾಗಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್‌ಕೊತ್ತಗೆರೆ ತಿಳಿಸಿದರು.

Advertisement

ಅಖೀಲ ಕರ್ನಾಟಕ ಕುಳುವ ಮಹಾಸಭಾದಿಂದ ಪಟ್ಟಣದ ನೂತನ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ, ಕೊರಚ, ಕುಂಚಿ ಕೊರವ,ಎರಕುಲಸಮುದಾಯಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯಾದ್ಯಂತ ಮುಂಬರುವ ಜಿಲ್ಲಾ, ತಾಲೂಕು, ಗ್ರಾಪಂಗಳ ಚುನಾವಣೆಗಳ ಮೀಸಲು ಕ್ಷೇತ್ರಗಳಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ಮೇರೆಗೆ ಟಿಕೆಟ್‌ನೀಡಬೇಕು. ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪಂಗಡದ ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಶಿಳ್ಳೆಕ್ಯಾತ ,ಸುಡುಗಾಡು -ಸಿದ್ದ, ಕೊರಮ-ಕೊರಚ (ಕುಳುವ),ಬುಡ್ಡ ಜಂಗಮ ,ಹಕ್ಕಿಪಿಕ್ಕಿ, ಮೇದ,ದೊಂಬರ, ಚನ್ನ ದಾಸರು, ಮಾಂಗ್‌ ಗಾರುಡಿ , ದಕ್ಕಲಿಗ, ಸಿಂಧೋಳ್ಳು, ಹರಣಿಶಿಕಾರಿ ಹೀಗೆ ಒಟ್ಟು74 ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆಂದರು.

ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಖಜಾಂಚಿ ಆದರ್ಶ ಯಲ್ಲಪ್ಪ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಳಕೆಯಾಗದೇ ಉಳಿದಿರುವ 19 ಸಾವಿರ ಕೋಟಿ ಹಣವನ್ನು ಇತರೆ ಇಲಾಖೆಗೆವರ್ಗಾಯಿಸಿದ್ದು ಈ ಹಣದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಬಹುದಾಗಿತ್ತು ಎಂದು ಹೇಳಿದರು.

ಕರ್ನಾಟಕ ಸಿಳ್ಳೇಕ್ಯಾತನ್‌ ಜನಾಂಗ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜುನಾಥ್‌ ದಾಯತ್ಕರ್‌, ರಾಜ್ಯ ಸರ್ಕಾರ ಅಲೆಮಾರಿ, ಅರೆ ಅಲೆಮಾರಿಹಾಗೂ ಬುಡಕಟ್ಟು ಜನರ ಏಳ್ಗೆಗೆ ಅಭಿವೃದ್ಧಿ ಕೋಶವೊಂದನ್ನು ಸ್ಥಾಪಿಸಿದೆ.ಈಮೂಲಕ ಮನೆ,ನಿವೇಶನ, ಸಾಲ ಸೌಲಭ್ಯ, ಸ್ವಯಂ ಉದೋÂಗ ಇತರೆ ಮೂಲ ಸವಲತ್ತುಗಳು ದೊರೆಯಲಿವೆ ಎಂದರು.

ಅಖೀಲ ಕರ್ನಾಟಕ ಕುಳುವ ಮಹಾಸಂಘ ರಾಜ್ಯಾಧ್ಯಕ್ಷರಾದ ಎಂ.ಆನಂದಪ್ಪ, ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಭೀಮಪುತ್ರಿ ನಾಗಮ್ಮ, ಸುಗುಣ ಅಶ್ವತ್ಥ, ಆನಂದ್‌ ಕುಮಾರ್‌ ಏಕಲವ್ಯ, ಹಂದಿಜೋಗಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾದ ವೆಂಕಟರಮಣಯ್ಯ, ಅಖೀಲ  ಕರ್ನಾಟಕ ಚನ್ನದಾಸ (ಪ.ಜಾ)ಸಂಘದ ರಾಜ್ಯ ಉಪಾಧ್ಯಕ್ಷರಾದ ಬಸವರಾಜುನಾರಯಕರ್‌, ಕುಳುವ ಸಮಾಜ ರಾಜ್ಯ ಮುಖಂಡರಾದ ಶ್ರೀನಿವಾಸು ಆಡುಗೋಡು, ರವಿಕುಮಾರ್‌ ಮಾತನಾಡಿದರು.

Advertisement

ನೂತನ ಪದಾಧಿಕಾಗಳು: ಅಖೀಲ ಕರ್ನಾಟಕ ಕುಳುವ ಮಹಾಸಂಘದ ಪಾವಗಡ ತಾಲೂಕುಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುತ್ಯಾಲಪ್ಪ, ಅಧ್ಯಕ್ಷರಾಗಿ ವಿದ್ಯುತ್‌ ಇಲಾಖೆ ಕೆ.ಗಂಗಪ್ಪ, ಕಾರ್ಯದರ್ಶಿಯಾಗಿ ಡಾನ್‌ ವೀರಭದ್ರಪ್ಪ, ಕಾರ್ಯಾಧ್ಯಕ್ಷರಾಗಿ ಹನುಮಂತರಾಯಪ್ಪ, ಖಜಾಂಚಿಯಾಗಿ ನಾಗರಾಜು, ಜಂಟಿ ಖಜಾಂಚಿಯಾಗಿ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷರಾಗಿ ನಾಗರಾಜು, ಬಿ.ಪಾಂಡಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್‌, ಮಂಜುನಾಥ್‌ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next