Advertisement

“ಲೋಕಾಯುಕ್ತದಲ್ಲಿ ಎಸಿಬಿ ಇರಲಿ’

01:11 AM Nov 24, 2019 | mahesh |

ಮಂಗಳೂರು: ಭ್ರಷ್ಟಾಚಾರ ನಿಯಂತ್ರಣ ಮತ್ತು ದುರಾಡಳಿತಕ್ಕೆ ಕಡಿವಾಣ ಹಾಕುವುದಕ್ಕಾಗಿ ಲೋಕಾಯುಕ್ತಕ್ಕೆ ಎಸಿಬಿ ವ್ಯವಸ್ಥೆ ಅಗತ್ಯ ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳೂರಿನಲ್ಲಿ ತನ್ನನ್ನು ಭೇಟಿ ಯಾದ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎಸಿಬಿ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಲೋಕಾ ಯುಕ್ತನಾಗಿ ನನ್ನ 2 ವರ್ಷ 8 ತಿಂಗಳ ಅನುಭವದಲ್ಲಿ ಹೇಳುವುದಾದರೆ ಎಸಿಬಿ ಲೋಕಾಯುಕ್ತಕ್ಕೆ ಪೂರಕ. ಇದರರ್ಥ ಎಸಿಬಿ ಇಲ್ಲದಿದ್ದರೆ ಲೋಕಾಯುಕ್ತ ದುರ್ಬಲ ಎಂದಲ್ಲ. ಎಸಿಬಿ ಇದ್ದರೆ ಭ್ರಷ್ಟಾಚಾರದ ವಿರುದ್ಧ ತ್ವರಿತವಾಗಿ ಕ್ರಮಗಳನ್ನು ಜರಗಿಸಲು ಇನ್ನಷ್ಟು ಸಹಾಯವಾಗುತ್ತದೆ ಎಂದರು.

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ದೊರಕಿಸುವುದು ಲೋಕಾಯುಕ್ತದ ಆದ್ಯತೆ. ಇದರಲ್ಲಿ ಅಧಿಕಾರಿಗಳು ವಿಫಲವಾದರೆ ಅದು ದುರಾಡಳಿತವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜನರಲ್ಲಿ ಹೆಚ್ಚಿನ ಜಾಗೃತಿಯಾಗಬೇಕು. ಜನರೂ ಆಮಿಷ ಒಡ್ಡಬಾರದು ಎಂದರು.

ಲೋಕಾಯುಕ್ತದಲ್ಲಿ ಖಾಲಿ ಇದ್ದ 9 ಹುದ್ದೆಗಳಲ್ಲಿ 5 ಹುದ್ದೆಗಳನ್ನು ಭರ್ತಿಗೊಳಿಸಲಾಗಿದೆ. ಇನ್ನುಳಿದ 4 ಹುದ್ದೆಗಳ ಭರ್ತಿಗೆ ಕೋರಿಕೆ ಸಲ್ಲಿಸ ಲಾಗಿದೆ. ಲೋಕಾಯುಕ್ತದಲ್ಲಿ ಇನ್ನೂ ಹಳೆಯ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಶೀಘ್ರ ಇತ್ಯರ್ಥಗೊಳ್ಳುವ ನಿಟ್ಟಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಯಾಗು ವುದು ಅವಶ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next