Advertisement

ಶಿಕ್ಷಕರು ಮಾದರಿ ಪ್ರಜೆಗಳನ್ನು ರೂಪಿಸಲಿ

02:43 PM Sep 06, 2017 | Team Udayavani |

ಯಾದಗಿರಿ: ಶಿಕ್ಷಕರು ಕೇವಲ ಪಠ್ಯದ ವಿಷಯಕ್ಕೆ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಿ ಮಾದರಿ ಪ್ರಜೆಗಳನ್ನಾಗಿಸಬೇಕು ಎಂದು ಹಿರಿಯ ಮಕ್ಕಳ ಸಾಹಿತಿ ಕರದಳ್ಳಿ ಹೇಳಿದರು.

Advertisement

ಸುರಪುರ ತಾಲೂಕಿನ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ| ರಾಧಾಕೃಷ್ಣ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅಚರಿಸುತ್ತಲಿದ್ದು, ಅವರ ಚಿಂತನೆ ಹಾಗೂ ವಿಚಾರಗಳು ಇಂದಿನ ಶಿಕ್ಷಕ ಸಮುದಾಯ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದಲ್ಲಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕ ಹುದ್ದೆ ಅತ್ಯಂತ ಮಹತ್ವ ಹಾಗೂ ಪವಿತ್ರವಾದುದು, ದೇಶದ ಹಲವು ಹುದ್ದೆಗಳಲ್ಲಿ ಶಿಕ್ಷಣ ಹುದ್ದೆ ಗೌರವ ಮತ್ತು ಮಹತ್ತರವಾದ ಹುದ್ದೆಯಾಗಿದೆ ಎಂದರು. ನಿವೃತ್ತ ಪ್ರಾಚಾರ್ಯ ಬಸವರಾಜಪ್ಪ ನಿಷ್ಠಿ ದೇಶಮುಖ ಉದ್ಘಾಟಿಸಿ ಮಾತನಾಡಿ, ಹಿಂದೆ ಏಕಲವ್ಯ ಮತ್ತು ದ್ರೋಣಚಾರ್ಯ ಹಾಗೂ ಸಂತ ಶಿಶುನಾಳ ಶರೀಫ್‌ ಗುರು ಗೋವಿಂದ ಭಟ್ಟರ ಗುರು ಶಿಷ್ಯ ಸಂಬಂಧ ಇಂದು ಕಾಣಲು ಸಿಗುವುದಿಲ್ಲ ಎಂದು ಹೇಳಿದರು.

ನಗನೂರಿನ ಸುಗೂರೇಶ್ವರ ಮಹಾಮಠದ ಶ್ರೀ ಸುಗೂರೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ 8 ಕಾಲೇಜಿನ ಉಪನ್ಯಾಸಕರಾದ ವಿರೇಶ ಹಳಿಮನಿ, ಶಾಂತು ನಾಯಕ, ಮಂಜುನಾಥ ಹಿರೇಮಠ, ವಿರೇಶ ಕುಮಾರ, ರುದ್ರಪ್ಪ ಕೆಂಭಾವಿ, ಬಲಭೀಮ ಪಾಟೀಲ್‌, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾಗ್ಯಶ್ರೀ ಪ್ರಾರ್ಥಿಸಿದರು. ರೂಪ ನಿರೂಪಿಸಿ, ಸುನೀಲ್‌ ಸ್ವಾಗತಿಸಿ, ಸಂತೋಷ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next