Advertisement

ಸಿದ್ದು ಮೊದಲು ತಮ್ಮ ಮನೆ ತೊಳೆದುಕೊಳ್ಳಲಿ

11:14 PM Sep 10, 2019 | Team Udayavani |

ಕೊಪ್ಪಳ: ಕಾಂಗ್ರೆಸ್‌ನಲ್ಲಿಯೇ ಇನ್ನೂ ಶಾಸಕಾಂಗದ ನಾಯಕನನ್ನು ಆಯ್ಕೆ ಮಾಡಿಲ್ಲ. ಕಳೆದ ಒಂದು ತಿಂಗಳಿಂದ ಕೇಳುತ್ತಿದ್ದೇವೆ. ಸಮಿತಿ ರಚನೆ ಮಾಡಬೇಕಿದೆ, ನಾಯಕನ ಹೆಸರು ಕೊಡಿ ಎಂದರೆ ಇನ್ನೂ ಸ್ಪಂದಿಸಿಲ್ಲ. ಇಂತವರು ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮೊದಲು ಅವರ ಮನೆ ತೊಳೆದುಕೊಳ್ಳಲಿ ಆನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಸಂಸದೀಯ ಮತ್ತು ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನವೀನ್‌ ಕುಮಾರ್‌ ಕಟೀಲ್‌ಗೆ ರಾಜ್ಯದ ಕನಿಷ್ಠ ಜ್ಞಾನವಿಲ್ಲ. ಅಂತವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲೇ ಒಬ್ಬ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ತಿಂಗಳಿಂದ ಕಾಂಗ್ರೆಸ್‌ ಶಾಸಕಾಂಗದ ನಾಯಕನ ಹೆಸರು ಕೊಡಿ ನಾವು ಸಮಿತಿ ರಚನೆ ಮಾಡಬೇಕೆಂದು ಕೇಳುತ್ತಿ ದ್ದೇವೆ. ಆದರೂ ಸ್ಪಂದಿಸಿಲ್ಲ.

ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದರು. ಸಣ್ಣ ನೀರಾವರಿ ಇಲಾಖೆಯಿಂದ ಹಲವು ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಎಲ್ಲೆಡೆ ಆ ಸ್ಥಳಗಳ ಪರಿಶೀಲನೆ ನಡೆ ಸುತ್ತಿದ್ದೇವೆ. ನೆರೆ ಹಾನಿ ಬಂದು ನೀರು ಹೆಚ್ಚು ಹರಿದಾಗ ಆ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸದ ಕುರಿತು ಚಿಂತನೆ ನಡೆ ಸುತ್ತಿದ್ದೇವೆ. ಪ್ರವಾಹದ ನೀರನ್ನು ಯಾವ ಭಾಗದಲ್ಲಿ ಸಂಗ್ರಹ ಮಾಡಬೇಕೆಂದು ಚಿಂತನೆ ನಡೆಸಿದ್ದು, ಈ ವರ್ಷ ನಮಗೆ ಕೃಷ್ಣಾದಿಂದ 800 ಟಿಎಂಸಿ ಅಡಿ ನೀರು ವ್ಯರ್ಥವಾಗಿದೆ. ಇಂತ ಸಂದರ್ಭದಲ್ಲಿ ಆ ನೀರನ್ನು ಸಂಗ್ರಹಿಸಲು ಹಣಕಾಸಿನ ಸ್ಥಿತಿಗತಿ ನೋಡಿ ಯೋಜನೆ ಸಿದ್ಧಪಡಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next