ರಾಯಚೂರು: ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ ಐದು ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲೆಸೆದರು.
ಮಿಟ್ಟಿ ಮಲ್ಕಾಪುರ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಕೆ ಶಿವಕುಮಾರ್ ಮತ್ತು ಸುಳ್ಳಿನ ರಾಮಯ್ಯನವರಿಗೆ ಹೇಳುತ್ತೇನೆ. ಈ ಚುನಾವಣೆ ನಂತರ ಜೆಡಿಎಸ್ ದೇಶದಲ್ಲಿ ಬೆಳಗಲಿದೆ. ಜನ ತಿರುಗಿ ನೋಡುವಂತೆ ಮಾಡುವೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡಿ ಇರುವ ಸೀಟು ಕಳೆದುಕೊಳ್ಳುತ್ತೀರಿ. ನನ್ನ ಟೀಕೆ ಮಾಡಿದಷ್ಟು ನಿಮಗೆ ಹಾನಿ. 123 ಸ್ಥಾನದ ಗುರಿ ಮುಟ್ಟುವೆ. ರಾಯಚೂರಿನಲ್ಲಿ ಐದರಿಂದ ಆರು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯರಿಗೆ ಇದು ಕೊನೆ ಚುನಾವಣೆ ಎಂಬ ಅವರ ಮಗನ ಹೇಳಿಕೆ ಸರಿಯಿದೆ. ಕೋಲಾರದಲ್ಲಿ ನಿಂತರೆ ಇದೇ ಕೊನೆ ಚುನಾವಣೆಯಾಗಲಿದೆ. ಕಾಂಗ್ರೆಸ್ ಬಿಜೆಪಿಯವರು ಮೊದಲ ಪಟ್ಟಿ ಬಿಡುಗಡೆ ಮುನ್ನವೇ ನಾನು ನಮ್ಮ ಪಕ್ಷದಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವೆ ಎಂದರು.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್-ಮಿರಾಜ್ ಯುದ್ಧ ವಿಮಾನಗಳ ಮುಖಾಮುಖಿ ಢಿಕ್ಕಿ!; ಭಗ್ನಾವಶೇಷ ಪತ್ತೆ
Related Articles
ಕಾಂಗ್ರೆಸ್ ನವರ ಪ್ರಜಾಧ್ವನಿಯಲ್ಲಿ ಕುಮಾರಸ್ವಾಮಿ ಭಜನೆ ಮಾಡುತ್ತಿದ್ದು, ಅದು ಕುಮಾರಧ್ವನಿಯಾಗಿದೆ. ಸಾಲಮನ್ನಾ ಮಾಡಿದ್ದನ್ನು ರೈತರು ಈಗ ನೆನೆಯುತ್ತಿದ್ದಾರೆ. ಜೆಡಿಎಸ್ ಬಂದರೆ ತಾವು ಉಳಿಯುತ್ತೇವೆ ಎಂಬುವುದು ರೈತರಿಗೆ ಗೊತ್ತಾಗಿದೆ ಎಂದರು.
ಅಮಿತ್ ಶಾ ಕೆಎಲ್ ಇ ಸೊಸೈಟಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ರಾಜ್ಯಕ್ಕೆ ಯಾವುದೇ ಕೊಡುಗೆ ತಂದಿಲ್ಲ. ಮಹದಾಯಿ ಯೋಜನೆ ಏನಾಗಿದೆ. ಟೆಂಡರ್ ಕರೆಯುವುದಾಗಿ ಹೇಳಿದ್ದರು. ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ ಎಂದರು.