Advertisement

ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಾಮಗಾರಿ ವಿಸ್ತರಣೆಯಾಗಲಿ

09:50 PM Oct 19, 2019 | Team Udayavani |

ನಗರದ ಪಾಂಡೇಶ್ವರ ರೈಲ್ವೇ ಹಳಿಯ ಎರಡೂ ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣಗೊಂಡು ಚತುಷ್ಪಥವಾಗಿದ್ದರೂ, ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಕಿರಿದಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿದಿನ ಕಷ್ಟಪಡುತ್ತಿದ್ದಾರೆ. ಮಹಾನಗರ ಪಾಲಿಕೆ ಮತ್ತು ರೈಲ್ವೇ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

Advertisement

ಪಾಂಡೇಶ್ವರದಲ್ಲಿ ಅನೇಕ ಬಾರಿ ಗೂಡ್ಸ್‌ ರೈಲುಗಳು/ಎಂಜಿನ್‌ಗಳು ಈ ಹಳಿಯಲ್ಲಿ ಬಂದರ್‌ನ ಗೂಡ್ಸ್‌ಶೆಡ್‌ಗೆ ಓಡಾಡುತ್ತಿವೆ. ದಿನದಲ್ಲಿ ಕನಿಷ್ಠವೆಂದರೂ ಮೂರು-ನಾಲ್ಕು ಬಾರಿ ಗೂಡ್ಸ್‌ ರೈಲುಗಳು ಸಂಚರಿಸುತ್ತವೆ. ರೈಲು ಸಂಚರಿಸುವ ವೇಳೆ ರಸ್ತೆ ಸಂಚಾರ ನಿಲ್ಲಿಸಲು ಕಬ್ಬಿಣದ ಗೇಟ್‌ ಇಲ್ಲಿ ಮುಚ್ಚಲಾಗುತ್ತದೆ.

ಕೆಲವೊಂದು ಬಾರಿ ಗೂಡ್ಸ್‌ರೈಲು ಆಗಮಿಸಿದಾಗ ರೈಲ್ವೇ ಗೇಟ್‌ ಹಾಕುವ ಕಾರಣದಿಂದ ಕನಿಷ್ಠ 15ರಿಂದ 20 ನಿಮಿಷ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಇದೇ ವೇಳೆ ಕೆಲವು ದ್ವಿಚಕ್ರ ಸವಾರರು ರೈಲ್ವೇ ಗೇಟ್‌ನ ಕೆಳಗಡೆಯಿಂದ ತೂರಿ ಕ್ರಾಸಿಂಗ್‌ ಮಾಡುವ ದುಸ್ಸಾಹಸ ಮಾಡುತ್ತಿದ್ದಾರೆ.

ಪಂಪ್‌ವೆಲ್‌-ತೊಕ್ಕೋಟ್ಟು ಹೆದ್ದಾರಿ ಸಂಪರ್ಕಿಸಲು ಮಂಗಳೂರಿನಿಂದ ಒಳರಸ್ತೆಯಾಗಿ ಬಹುತೇಕ ವಾಹನ ಸವಾರರು ಇದೇ ರಸ್ತೆಯನ್ನು ಸಂಚರಿಸುತ್ತದೆ. ಹೀಗಾಗಿ ಹಲವು ವಾಹನಗಳು ಇಲ್ಲಿ ನಿತ್ಯ ಸಂಚಾರ ನಡೆಸುತ್ತಿದೆ. ಇಲ್ಲಿ ರೈಲ್ವೇ ಹಳಿ ಇರುವ ಕಾರಣದಿಂದ ಮಂಗಳೂರು ಪಾಲಿಕೆಯಿಂದ ರಸ್ತೆ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next