Advertisement

ಕೋವಿಡ್‌ ತಡೆಗೆ ಖಾಸಗಿ ವೈದ್ಯರು ಸಹಕರಿಸಲಿ

05:25 PM Jun 20, 2020 | Suhan S |

ಧಾರವಾಡ: ಕೆಮ್ಮು, ನೆಗಡಿ, ತೀವ್ರ ಜ್ವರದ ಲಕ್ಷಣ(ಐಎಲ್‌ಐ) ಇರುವವರ ಕುರಿತು ಕೆಪಿಎಂಇ ಅಡಿ ನೋಂದಣಿಯಾಗಿರುವ ವೈದ್ಯರು ತ್ವರಿತವಾಗಿ ಸಕಾಲಕ್ಕೆ ಮಾಹಿತಿ ನೀಡಿದರೆ ಸರ್ಕಾರ ವೈದ್ಯರ ಸಲಹೆ ಆಧರಿಸಿ ಅಂತಹ ವ್ಯಕ್ತಿಗಳನ್ನು ಕೋವಿಡ್‌ ತಪಾಸಣೆಗೆ ಒಳಪಡಿಸುತ್ತದೆ. ಹೀಗಾಗಿ ಕೋವಿಡ್‌ ತಡೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ಸಹಕಾರ ಅತ್ಯಗತ್ಯ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳ ವೈದ್ಯರಿಗೆ ಕೆಪಿಎಂಇ ಪೋರ್ಟಲ್‌ ಅಪ್‌ಡೇಟ್‌ ಮಾಡುವ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಕೆಮ್ಮು, ನೆಗಡಿ, ತೀವ್ರ ಜ್ವರ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಇರುವ ಲಕ್ಷಣಗಳ ವ್ಯಕ್ತಿಗಳು ಖಾಸಗಿ ವೈದ್ಯರ ಬಳಿ ಚಿಕಿತ್ಸೆಗೆ ಬಂದರೆ ತಕ್ಷಣ ಅವರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮೊದಲಾದ ಮಾಹಿತಿಗಳನ್ನು ಸರ್ಕಾರಕ್ಕೆ ಒದಗಿಸುವುದು ವೈದ್ಯರ ಜವಾಬ್ದಾರಿಯಾಗಿದೆ. ಆಡಳಿತ ವ್ಯವಸ್ಥೆಯು ನಿಖರ ಮಾಹಿತಿಗೆ ವೈದ್ಯರನ್ನೇ ಅವಲಂಬಿಸಿರುತ್ತದೆ. ಜಿಲ್ಲೆಯಲ್ಲಿ ಬಹುತೇಕ ಆಸ್ಪತ್ರೆಗಳು ಮಾಹಿತಿ ನೀಡುತ್ತಿವೆ. ಪ್ರತಿನಿತ್ಯ ಅಪ್‌ಡೇಟ್‌ ವರದಿ ನೀಡದ ಆಸ್ಪತ್ರೆಗಳ ಪಟ್ಟಿ ಲಭ್ಯವಿದೆ. ಅಂತಹ ಆಸ್ಪತ್ರೆಗಳು ಕೂಡಲೇ ಸಕ್ರಿಯವಾಗಿ ಪ್ರತಿದಿನ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಚರ್ಮರೋಗ, ಮನೋರೋಗ ಮತ್ತಿತರ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕೆಮ್ಮು, ನೆಗಡಿ, ಜ್ವರದ ಚಿಕಿತ್ಸೆಗೆ ಜನರು ಬರುವುದಿಲ್ಲವಾದರೂ, ಬಂದಿರುವ ಜನರಲ್ಲಿ ರೋಗ ಲಕ್ಷಣಗಳಿದ್ದರೆ ಹತ್ತಿರದ ಫೀವರ್‌ ಕ್ಲಿನಿಕ್‌ಗಳಿಗೆ ಕಳುಹಿಸಬೇಕು. ಅವರ ಹೆಸರು, ವಿಳಾಸದ ಮಾಹಿತಿಯನ್ನು 1077 ಸಹಾಯವಾಣಿಗೆ ನೀಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ್‌ ಮಾತನಾಡಿ, ಅವಳಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ μàವರ್‌ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಅರ್ಹ ಪ್ರಕರಣಗಳನ್ನು ಅಲ್ಲಿಗೆ ಶಿಫಾರಸು ಮಾಡಬೇಕು ಎಂದು ಹೇಳಿದರು.

ಕೋವಿಡ್‌ ಕಾರಣದಿಂದ ಪ್ರತಿನಿತ್ಯ ಆಸ್ಪತ್ರೆಗೆ ಬರುವವರ ಪ್ರಮಾಣದಲ್ಲಿ ಶೇ.70 ಇಳಿಕೆಯಾಗಿದೆ. ಒಂದೇ ತರಹದ ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಐಎಲ್‌ಐ ಪ್ರಕರಣಗಳು ಬರುವುದು ವಿರಳ. ಚಿಕಿತ್ಸೆಗೆ ಬರುವವರಲ್ಲಿ ಬಹುತೇಕರು ತಮ್ಮ ಪ್ರಯಾಣ ಹಿನ್ನೆಲೆ ಮುಚ್ಚಿಡುತ್ತಾರೆ ಎಂದು ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ಸುಜಾತಾ ಹಸವಿಮಠ, ಡಾ| ಲಕ್ಷ್ಮೀಕಾಂತ ಲೋಕರೆ, ಡಾ| ಶಶಿ ಪಾಟೀಲ, ಡಾ| ತನುಜಾ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next