Advertisement
ಬವಳಾಡಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಇದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮೆಸ್ಕಾಂನ ಮಾಹಿತಿಗಳು ಗುತ್ತಿಗೆದಾರರಿಗೆ ಬಿಟ್ಟರೆ ಜನರಿಗೆ ತಿಳಿಯುತ್ತಿಲ್ಲ. ಮೆಸ್ಕಾಂನ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ಇಲ್ಲ. ಜನರಿಗೆ ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮಸ್ಥ ವೆಂಕಟ ರಾವ್ ಮಾತನಾಡಿ, ಎಫ್‌ಎಸಿ ಶುಲ್ಕ ತೆಗೆದುಕೊಳ್ಳು ವಂತಿಲ್ಲವಾದರೂ ವಿದ್ಯುತ್ ಬಿಲ್‌ನಲ್ಲಿ ವಿಧಿಸಲಾಗುತ್ತಿದೆ ಏಕೆ ಎಂದು ಪ್ರಶಿಸಿದರು. ರವಿ ದೇವಾಡಿಗ ಮಾತನಾಡಿ, ಮರಗಳನ್ನು ಕಡಿದು ರಸ್ತೆ ಮೇಲೆಯೇ ಬಿಟ್ಟು ಹೋಗುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಡಿದ ಮರದ ಗಲ್ಲುಗಳನ್ನು ಬದಿಗೆ ಹಾಕುವಂತೆ ತಿಳಿಸಿದರು.
Related Articles
Advertisement
ಬಾವಿ ನಿರ್ಮಾಣದಿಂದ ಸಮಸ್ಯೆ ಬಗೆಹರಿಯದುಜಯರಾಮ ಶೆಟ್ಟಿ ಮತ್ತು ರಾಜೇಂದ್ರ ಮಾತನಾಡಿ 3 ಮತ್ತು 4ನೇ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ ಸಾಕಷ್ಟು ಸರಕಾರಿ ಬಾವಿಗಳಿವೆ. ಇವುಗಳ ನೀರಿನ ಸದ್ಬಳಕೆಯ ಕುರಿತು ಯೋಜನೆ ರೂಪಿಸಿ, ನೀರಿನ ಸಮಸ್ಯೆ ಪರಿಹರಿಸಬೇಕು. ಹೊರತು ಅನಗತ್ಯ ರಾಜಕೀಯ ಗೊಂದಲಗಳನ್ನು ಉಂಟು ಮಾಡಬಾರದು ಎಂದರು. ಬಿಜೂರು ಶಾಲಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ವಿತರಣೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಜಯರಾಮ ಶೆಟ್ಟಿ ಆಗ್ರಹಿಸಿದರು. ತ್ಯಾಜ್ಯ ಸಮಸ್ಯೆ, ಚರಂಡಿ, ಗಂಟಿ ಹೊಳೆ ಸೇತುವೆಯ ಬದಿ ಕುಸಿದು ಸಂಚಾರಕ್ಕೆ ತೊಂದರೆ, ರಸ್ತೆ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯೆ ಜಗದೀಶ ದೇವಾಡಿಗ, ಗ್ರಾ.ಪಂ. ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಸದಸ್ಯರು, ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಪಿಡಿಒ ಸತೀಶ ತೊಳಾರ ಪಂ. ಸಿಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗೋಮಾಳ ನಿರ್ಮಿಸಿ
ಬಿಜೂರು ಗ್ರಾಮದಲ್ಲಿರುವ ಗೋಮಾಳವನ್ನು ಗುರುತಿಸುವಂತೆ ಪ್ರತಿ ಗ್ರಾಮ ಸಭೆಯಲ್ಲಿ ಆಗ್ರಹಿಸುತ್ತಿದ್ದೇವೆ. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬೀಡಾಡಿ ಜಾನುವಾರುಗಳ ಹಾವಳಿಯಿಂದಾಗಿ ರೈತರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ರೈತ ಬೆಳೆದ ಫಸಲುಗಳನ್ನು ತಿಂದು ಹಾಕುತ್ತಿರುವ ಬೀಡಾಡಿ ಜಾನುವಾರುಗಳನ್ನು ನಿಯಂತ್ರಿಸಬೇಕು. ಗೋಮಾಳ ಜಾಗವನ್ನು ಗುರುತಿಸಿದರೆ ಇದು ಸಾಧ್ಯವಾಗುತ್ತದೆ. ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.