Advertisement

ಅಪರಾಧ ನಿಯಂತ್ರಣಕ್ಕೆ ಜನರು ಸಹಕರಿಸಲಿ

01:24 PM Dec 20, 2021 | Team Udayavani |

ಕಮಲನಗರ: ಪ್ರತಿಯೊಬ್ಬರು ಕಾನೂನು ಅರಿಯುವುದರ ಜತೆಗೆ ಪಾಲನೆಗೆ ಮುಂದಾಗಬೇಕು. ಇದರಲ್ಲಿ ಸಮಾಜದ ಶಾಂತಿ, ನೆಮ್ಮದಿ ಬದುಕು ಅಡಗಿದೆ ಎಂದು ಪಿಎಸ್‌ಐ ನಂದಿನಿ ಎಸ್‌. ಹೇಳಿದರು.

Advertisement

ತಾಲೂಕಿನ ಬೇಳಕೋಣಿ(ಭೋ) ಗ್ರಾಮದ ಶಿವಾಜಿ ಪ್ರೌಢಶಾಲೆಯಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ಅಪರಾಧ ತಡೆ ಮಾಸಾಚರಣೆ, ಇಆರ್‌ಎಸ್‌ಎಸ್‌ 112 ತುರ್ತು ಸೇವೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಕಾನೂನು ನಿಯಮಗಳನ್ನು ತಿಳಿದುಕೊಂಡಾಗ ಅಪರಾಧ ತಡೆ ಸಾಧ್ಯ. ಕ್ರೈಂ ರೇಟ್‌ ನಿಯಂತ್ರಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ನಾವು ವಾಹನಗಳನ್ನು ನಿಯಂತ್ರಿಸಬೇಕೇ ಹೊರತು ವಾಹನಗಳು ನಮ್ಮನ್ನು ನಿಯಂತ್ರಿಸಬಾರದು. ಮಕ್ಕಳಲ್ಲಿ ಹಾಗೂ ನಾಗರಿಕರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದರು. ಶಿಕ್ಷಕರು, ಮಕ್ಕಳು, ಗ್ರಾಮದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next