ಸಿದ್ದಾಪುರ: ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಹಾಗೂ ಕೋಟೇಶ್ವರ ಡಾ| ಎನ್.ಆರ್. ಆಚಾರ್ಯ ಮೆಮೋರಿಯಲ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ತಿಂಗಳ ಪ್ರಥಮ ರವಿವಾರ ಮಾನಸಿಕ ಆರೋಗ್ಯ ತಪಾಸಣೆ, ಕಿವಿ, ಮೂಗು, ಗಂಟಲು ಹಾಗೂ ಸಾಮಾನ್ಯ ತಪಾಸಣಾ ಉಚಿತ ಶಿಬಿರಗಳ ಮೂಲಕ ಅಸಕ್ತ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಫೌಂಡೇಶನ್‌ನ ಅಧ್ಯಕ್ಷ ಬಿ. ಸತೀಶ್ ಕಿಣಿ ಬೆಳ್ವೆ ಅವರು ಹೇಳಿದರು.
ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಕಚೇರಿಯಲ್ಲಿ ಜು. 2ರಂದು ನಡೆದ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಿವಿ, ಮೂಗು, ಗಂಟಲು ಹಾಗೂ ಸಾಮಾನ್ಯ ತಪಾಸಣೆಯ 14ನೇ ಉಚಿತ ಶಿಬಿರದಲ್ಲಿ ಮಾತನಾಡಿದರು.
ಫೌಂಡೇಶನ್ ಬೆಳ್ವೆಯಲ್ಲಿ ಪ್ರತಿ ತಿಂಗಳ ಪ್ರಥಮ ರವಿವಾರ ನಿರಂತರವಾಗಿ 14ನೇ ಬಾರಿ ವೈದ್ಯಕೀಯ ಉಚಿತ ಶಿಬಿರ ನಡೆಸಿಕೊಂಡು ಬರುತ್ತಿದೆ. ಈ ಶಿಬಿರದ ಮೂಲಕ ಸಾವಿರಾರು ಮಂದಿ ವೈದ್ಯಕೀಯ ಸೇವೆಯ ಸೌಲಭ್ಯವನ್ನು ಪಡೆದಿದ್ದಾರೆ. ವೈದ್ಯಕೀಯ ಉಚಿತ ಸೇವೆಗಳಿಂದ ಜನತೆಗೆ ಅನುಕೂಲವಾಗಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ನೀಡಲು ಬದ್ಧರಾಗಿದ್ದೇವೆ. ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ್‌ನ ಟ್ರಸ್ಟಿಗಳಾದ ಬಿ. ಉಮೇಶ್ ಕಿಣಿ, ಬಿ. ಹರೀಶ ಕಿಣಿ, ಬಿ. ಗೋಪಾಲಕೃಷ್ಣ ಕಿಣಿ, ಗೋಕುಲ್ ಕಿಣಿ ಹಾಗೂ ಪದಾಧಿಕಾರಿಗಳು, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಸೂರೊYàಳಿ, ಬೆಳ್ವೆ ಗ್ರಾ. ಪಂ. ಸದಸ್ಯ ಕೃಷ್ಣ ನಾಯ್ಕ ಬೆಳ್ವೆ, ಸ್ಥಳೀಯರಾದ ಮುಸ್ತಾಕ್ ಅಹಮ್ಮದ್, ಉಮೇಶ್ ಶೆಟ್ಟಿ ಶಿರೂರು, ಮಂಜುನಾಥ ಶೆಟ್ಟಿ ಯಳಂತೂರು, ರಾಘವೇಂದ್ರ ಗೋಳಿಯಂಗಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಾನಸಿಕ ರೋಗ ತಜ್ಞರಾದ ಡಾ| ಮಹಿಮಾ ಆಚಾರ್ಯ ಹಾಗೂ ಡಾ| ರವೀಂದ್ರ, ಕಿವಿ, ಮೂಗು, ಗಂಟಲು ಹಾಗೂ ಸೈನಸ್ ತಜ್ಞ ಡಾ| ಶ್ರೀಕಾಂತ ಆಚಾರ್ಯ, ಅರ್ಯುವೇದ ಹಾಗೂ ಯೋಗ ಮತ್ತು ಪಂಚಕರ್ಮ ತಜ್ಞೆ ಡಾ| ಮೀರಾ, ಸಾಮಾನ್ಯ ವೈದ್ಯಕೀಯ ತಪಾಸಣಾ ವಿಭಾಗದಲ್ಲಿ ಡಾ| ಸುದೀಪ್ ಶಿಬಿರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದರು.