Advertisement

ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನ ಮುಂದಾಗಲಿ: ರಕ್ಷಣಾ ಸಚಿವ

10:08 AM Jan 29, 2020 | sudhir |

ನವದೆಹಲಿ: ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಾತುಗಳ ಬದಲಾಗಿ, ಕಠಿಣ ಕ್ರಮವನ್ನೇ ಕೈಗೊಳ್ಳಲಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಮಂಗಳವಾರ ನವದೆಹಲಿಯಲ್ಲಿ 12ನೇ ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಯೋತ್ಪಾದಕರು ಮತ್ತು ಅವರ ತತ್ವಗಳಿಗೆ ಬೆಂಬಲ ನೀಡುವವರು, ಅವರಿಗೆ ವಿತ್ತೀಯ ನೆರವು ನೀಡುವವರಿಗೆ ಬ್ರೇಕ್‌ ಹಾಕಬೇಕಾಗಿದೆ ಎಂದಿದ್ದಾರೆ.

ನೆರೆಯ ರಾಷ್ಟ್ರಗಳ ಜತೆಗೆ ಸೌಹಾರ್ದಯುತ ಬಾಂಧವ್ಯ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಒಂದು ದೇಶ ಮಾತ್ರ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ.

ಮುಂಬೈ, ಪಠಾಣ್‌ಕೋಟ್‌, ಉರಿ, ಪುಲ್ವಾಮಾದಂಥ ಉಗ್ರ ದಾಳಿಯ ಪ್ರಕರಣಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯಲ್ಲಿ ನೆರೆಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ವಿದೇಶಾಂಗ ನೀತಿಯಲ್ಲಿ ಆದ್ಯತೆ ನೀಡಲಾಗಿದೆ ಎಂದೂ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next