ಕಾಂಗ್ರೆಸ್‌ನ ಶಶಿತರೂರ್, ಪವನ್ ಖೇರಾ, ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಹಾಗೂ ಕೆಲವು ಪತ್ರಕರ್ತರು ಮಂಗಳವಾರ ತಮ್ಮ ಫೋನ್ ಅನ್ನು ಸರಕಾರ ಪ್ರಾಯೋಜಿತವಾಗಿ ಹ್ಯಾಕ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿ ಆ್ಯಪಲ್ ಸಂಸ್ಥೆ ಈ ನಾಯಕರಿಗೆ ಕಳುಹಿಸಿದ್ದ ಇಮೇಲ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡು, ಸರಕಾರವೇ ಹ್ಯಾಕ್ ಮಾಡುತ್ತಿದೆ ಎಂಬ ಆಪಾ ದನೆ ಮಾಡಿದ್ದರು. ಈ ಸಂಬಂಧ ಆ್ಯಪಲ್ ಸಂಸ್ಥೆ ಸುದೀರ್ಘವಾಗಿ ಪತ್ರಮು ಖೇನ ಯಾವ ರೀತಿಯಲ್ಲಿ ಫೋನ್ ಹ್ಯಾಕ್ ಆಗಬಹುದು, ಇದಕ್ಕೆ ವ್ಯವಸ್ಥಿತವಾಗಿ ಹಣಕಾ ಸಿನ ನೆರವು ನೀಡಲಾಗುತ್ತಿದೆ. ಹೀಗಾಗಿ ನೀವು ನಿಮ್ಮ ಫೋನ್‌ನಲ್ಲಿನ ಭದ್ರತಾ ಫೀಚರ್ ಅನ್ನು ಸರಿಪಡಿಸಿಕೊಳ್ಳಿ ಮತ್ತು ಐಓಎಸ್ ಅಪ್‌ಡೇಟ್ ಮಾಡಿ ಕೊಳ್ಳಿ ಎಂಬ ಸಲಹೆಯನ್ನೂ ನೀಡಿತ್ತು. ಹೊಸ ಅಪ್‌ಡೇಟ್‌ನಲ್ಲಿ ಹ್ಯಾಕರ್‌ಗಳು ಸುಲಭ ವಾಗಿ ಫೋನ್‌ನೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದೂ ಹೇಳಿತ್ತು.
ಆ್ಯಪಲ್ ಸಂಸ್ಥೆಯ ಈ ಎಚ್ಚರಿಕೆ ಮತ್ತು ವಿಪಕ್ಷಗಳ ಆರೋಪವು ದೇಶಾದ್ಯಂತ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಕೇಂದ್ರ ಸರಕಾರವೇ ವಿಪಕ್ಷ ನಾಯಕರ ಫೋನ್‌ಗಳಗೆ ಇಣುಕಿ ನೋಡುತ್ತಿದೆ ಎಂದು ಆರೋಪಿ ಸಲಾಗಿತ್ತು. ಇದಾದ ಬಳಿಕ ಕೇಂದ್ರ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಸ್ಪಷ್ಟನೆಯನ್ನು ನೀಡಿ, ಆ್ಯಪಲ್ ಸಂಸ್ಥೆಯು 150 ದೇಶಗಳಲ್ಲಿ ಈ ರೀತಿಯ ಸಂದೇಶ ಕಳುಹಿಸಿದೆ. ಇದು ಮುಂಜಾಗ್ರತೆಯ ಸಂದೇಶವೇ ಹೊರತು, ನಾವು ಹ್ಯಾಕ್ ಮಾಡುತ್ತಿದ್ದೇವೆ ಎಂದಲ್ಲ. ಈ ಸಂಬಂಧ ಆ್ಯಪಲ್‌ನಿಂದ ಸ್ಪಷ್ಟನೆ ಕೇಳಿದ್ದೇವೆ, ತನಿಖೆ ನಡೆಸಲೂ ಮುಂದಾಗಿದ್ದೇವೆ ಎಂದು ಹೇಳಿದ್ದರು.
ಈ ಬೆಳವಣಿಗೆಗಳ ಆ್ಯಪಲ್ ಸಂಸ್ಥೆಯೂ ಸ್ಪಷ್ಟನೆ ನೀಡಿ, ಇಂಥ ಸಂದೇಶಗಳನ್ನು ನಾವು ಆಗಾಗ ಕಳುಹಿಸುತ್ತಿರುತ್ತೇವೆ, ಇಂಥವರಿಗೇ ಸಂದೇಶ ಕಳುಹಿಸಬೇಕು ಎಂದು ಆಯ್ಕೆ ಮಾಡುವುದಿಲ್ಲ. ಇದು ರ್‍ಯಾಂಡಮ್ ಆಗಿ ಹೋಗುತ್ತದೆ ಎಂದಿತ್ತು. ಆದರೆ ಯಾರು ಎಷ್ಟೇ ಸ್ಪಷ್ಟನೆ ನೀಡಿದರೂ, ಇಂಥ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಲು ಯಾರೊಬ್ಬರು ಸಿದ್ಧರಿರುವುದಿಲ್ಲ. ಇದಕ್ಕೆ ಕಾರಣ ಗಳೂ ಇದ್ದು, ಇತಿಹಾಸವೂ ಇವುಗಳಿಗೆ ಪುಷ್ಠಿ ನೀಡುತ್ತದೆ. ಮೊದಲಿ ನಿಂದಲೂ ಆಳುವ ಸರಕಾರಗಳು ವಿಪಕ್ಷಗಳ ಮತ್ತು ಪತ್ರಕರ್ತರ ಬಗ್ಗೆ ಒಂದು ನಿಗಾ ಇಟ್ಟಿರುತ್ತದೆ ಎಂಬ ಆರೋಪಗಳು ಇದ್ದೇ ಇವೆ. ಇದು ಇಂಥದ್ದೇ ಸರಕಾರ ವಾಗ ಬೇಕು ಎಂದೇನಿಲ್ಲ. ಬಹುತೇಕ ಎಲ್ಲ ಪಕ್ಷಗಳ ಸರಕಾರಗಳಲ್ಲೂ ಇಂಥ ಆರೋಪ ಗಳನ್ನು ಕೇಳುತ್ತಲೇ ಇರುತ್ತೇವೆ. ಹೀಗಾಗಿ ಆ್ಯಪಲ್ ಸಂಸ್ಥೆ ನೀಡಿದ ಎಚ್ಚರಿಕೆ ಸಂದೇಶವು ವಿಪಕ್ಷ ನಾಯಕರಲ್ಲಿ ಸಂದೇಹ ಮೂಡಿಸಿರುವುದಂತೂ ನಿಜ.
ಹೀಗಾಗಿ ಕೇಂದ್ರ ಸರಕಾರವು ತಡ ಮಾಡದೇ ಈ ಬಗ್ಗೆ ಉನ್ನತ ಮಟ್ಟದಲ್ಲೇ ತನಿಖೆ ನಡೆಸಬೇಕು. ಈಗ ತನ್ನ ಮೇಲೆ ಬಂದಿರುವ ಹ್ಯಾಕ್ ಆರೋಪವನ್ನು ಹೊಗಲಾಡಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಆ್ಯಪಲ್ ಸಂಸ್ಥೆಯಿಂದಲೂ ಪೂರಕವಾದ ಸ್ಪಷ್ಟನೆ ಕೇಳಬೇಕು. ಇಲ್ಲದಿದ್ದರೆ ಸರಕಾರಗಳು ವಿರೋಧಿಗಳ ಫೋನ್ ಹ್ಯಾಕ್ ಮಾಡುತ್ತವೆ ಎಂಬ ಆರೋಪ ಸತ್ಯವಾಗುವ ಸಂಭವ ಹೆಚ್ಚಾಗಿಯೇ ಇರುತ್ತದೆ. ಇದು ಒಂದು ರೀತಿಯಲ್ಲಿ ಹಗ್ಗದ ಮೇಲಿನ ನಡಿಗೆ ರೀತಿಯಲ್ಲಿದ್ದು, ಬಹುಬೇಗನೆ ಸತ್ಯ ಗೊತ್ತಾಗುವಂತೆ ಮಾಡುವ ಕರ್ತವ್ಯ ಸರಕಾರದ್ದಾಗಿದೆ.