ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಶಾಲಾ ಶಿಕ್ಷಕರು ಈ ಲೇಖನ ಸರಣಿಯಲ್ಲಿ ಬೆಳಕು ಚೆಲ್ಲಲಿದ್ದಾರೆ.
ಕನ್ನಡ ಅಭಿಮಾನ ನಿತ್ಯೋತ್ಸವವಾಗಲಿ
“ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ, ಜಲವೆಂದರೆ ಬರಿ ನೀರಲ್ಲ ಅದು ಪಾವನ ತೀರ್ಥ’ ಎಂಬ ಕೆ.ಎಸ್.ನಿಸಾರ್ ಅಹಮದ್ ಅವರ ಮಾತಿನಂತೆ ಕನ್ನಡ ಬರಿ ನುಡಿಯಲ್ಲ ಅದು ನಮ್ಮ ಉಸಿರು, ಆತ್ಮ. ಜನಪದ ಗೀತೆ ಯೊಂದು ಹೀಗಿದೆ, ಯಾರು ಆದರೂ ಹೆತ್ತ ತಾಯಿಯಂತೆ ಆದರೂ ಸಾವಿರ ಸೌದೆ ಒಲೆಯಲ್ಲಿ ಉರಿದಾರೂ ದೀವಿಗೆಯಂಥ ಬೆಳಕುಂಟೆ? ಎಂಬಂತೆ ಹಲವಾರು ಸಂಬಂಧಿಕರಿದ್ದರೂ ಹೆತ್ತ ತಾಯಿ ಕೊಡುವ ಪ್ರೀತಿಯನ್ನು ಯಾರೂ ತೋರಿಸಲು ಸಾಧ್ಯವಿಲ್ಲ. ಹೆತ್ತ ತಾಯಿಯೇ ಮಾತೃಭಾಷೆ.
ಮಾತೃಭಾಷೆಯೊಂದಿಗಿನ ನಮ್ಮ ಬಾಂಧವ್ಯವನ್ನು ಬೇರೆ ಭಾಷೆ ತುಂಬಲು ಸಾಧ್ಯವಿಲ್ಲ. ಇಂದು ಕಲಿಯುತ್ತಿರುವ ಮಕ್ಕಳು ಕನ್ನಡದ ಬರವಣಿಗೆ ಹಾಗೂ ಉಚ್ಚಾರದಲ್ಲಿ ಮಾಡುವ ದೋಷಗಳನ್ನು ಗಮನಿಸುವಾಗ ಕನ್ನಡದ ಉಳಿವು ಹೇಗೆ ಎಂಬ ಆತಂಕ ಮೂಡುತ್ತದೆ. ವಿನೋಭಾ ಭಾವೆಯವರು ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿ¨ªಾರೆ. ಈ ಸುಂದರ ಲಿಪಿಯನ್ನು ಹೊಂದಿರುವ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಐವತ್ತು ಸಂವತ್ಸರ ಪೂರೈಸಿದೆ. ಆದರೆ ಅನ್ಯ ಭಾಷೆಗಳ ಪ್ರಭಾವಕ್ಕೆ ಸಿಲುಕಿ ಕನ್ನಡ ಮರೆಯಾಗುವುದೇನೋ ಎಂಬ ಆತಂಕವೂ ಇದೆ. ಭಾವನೆಯನ್ನು ವ್ಯಕ್ತ ಪಡಿಸಲು ಭಾಷೆ ಒಂದು ಮಾಧ್ಯಮ. ಅದು ಕನ್ನಡವೇ ಆಗಬೇಕೆಂಬ ಅಚಲ ಭಕ್ತಿ ನಮ್ಮಲ್ಲಿರಬೇಕು. ಕವಿ ಜಿ.ಪಿ.ರಾಜರತ್ನಂ ಅವರು ಹೇಳಿರುವಂತೆ “ನರಕಕಿಳಿÕ ನಾಲಗೆ ಸೀಳಿ ಬಾಯಿ ಒಲ್ಸಾಕಿದ್ರುನೂ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ’ ಎಂಬ ಕನ್ನಡ ಅಭಿ ಮಾನ ನಮ್ಮದಾಗಬೇಕು. ಈ ಅಭಿಮಾನ ನಿತ್ಯೋತ್ಸವವಾಗಬೇಕು.
ಜ್ಯೋತಿ, ಕನ್ನಡ ಭಾಷಾ ಶಿಕ್ಷಕಿ, ಬೋರ್ಡ್ ಹೈಸ್ಕೂಲ್ ಉಡುಪಿ