Advertisement
ತಿಕೋಟಾ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ತಾಪಂ ಕಚೇರಿ ಉದ್ಘಾಟನೆ ಹಾಗೂ ದಿವ್ಯಾಂಗರಿಗೆ ಕಂಪ್ಯೂಟರ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ಫಲಾನುಭವಿಗಳಿಗೆ ಬರುವ ವಿವಿಧ ಯೋಜನೆಗಳಾಗಲಿ, ಅನುದಾನವಾಗಲಿ ನಿಜವಾದ ಫಲಾನುಭವಿಗಳಿಗೆ ದೊರಕಲಿ ಆ ಮುಖಾಂತರ ಎಲ್ಲ ಜನರ ಅಭಿವೃದ್ಧಿ ಆಗಲಿದೆ ಎಂದರು.
Related Articles
Advertisement
ಪ್ರಾಸ್ತಾವಿಕ ಮಾತನಾಡಿ ತಾಪಂ ಇಒ ಎಚ್.ಡಿ. ರಾಜೇಶ, ತಾಪಂ ಕಾರ್ಯಾಲಯಕ್ಕೆ ಸ್ಥಳಾವಕಾಶ ಇಲ್ಲದ ಸಂದರ್ಭದಲ್ಲಿ ಶಾಸಕರನ್ನು ಸಂಪರ್ಕಿಸಿದಾಗ ಮಾರ್ಗದರ್ಶನ ಹಾಗೂ ಸಹಕಾರದಿಂದ ಹಾಜಿ ಮಸ್ತಾನ್ ದರ್ಗಾದ ಯಾತ್ರಿ ನಿವಾಸವನ್ನು ನಮ್ಮ ಕಾರ್ಯಾಲಯಕ್ಕೆ ನೀಡಿದ್ದಾರೆ. ಜೊತೆಗೆ ಎಲ್ಲ ಗ್ರಾಪಂಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಕಾರ್ಯಾಲಯದ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಿಸಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಭಾಗೀರಥಿ ತೇಲಿ, ಜೀವಪ್ಪ ಕುರ್ಪಿ, ಪ್ರಭಾವತಿ ನಾಟೀಕಾರ, ಆರ್.ವಿ. ಮಾಸರೆಡ್ಡಿ, ಎಸ್.ಎಸ್.ಅಳ್ಳಗಿ, ವಿ.ಎಸ್. ಪುಟ್ಟಿ, ಕಲ್ಲಪ್ಪ ನಂದರಗಿ, ಪ್ರಕಾಶ ಮಸಳಿ, ಅಪರ್ಣಾ ಬದಾಮಿ, ಚೇತನ ರಾಠೊಡ, ವಿಜಯ ಯರಗಟ್ಟಿ, ಶಿವರಾಜ್ ಬಿರಾದಾರ, ಸಿದ್ರಾಯ ದಾಶ್ಯಾಳ, ಸಂತೋಷ ಗೊಜ್ಜಿ, ಮಹಾಶಾಂತ ಬಂದಿ ಇದ್ದರು. ಶಿವಾನಂದ ಹಂಜಗಿ ನಿರೂಪಿಸಿದರು.