Advertisement
ಚಲನಚಿತ್ರ ರಂಗಕ್ಕೆ ನಿಮ್ಮ ಎಂಟ್ರಿ ಹೇಗಾಯ್ತು?ಚಿತ್ರರಂಗದಲ್ಲಿ ನನಗೆ ಗಾಡ್‌ಫಾದರ್ ಯಾರೂ ಇರಲಿಲ್ಲ. ಯಾವುದೇ ನಟನೆಯ ಕೋರ್ಸ್ ಕೂಡ ಮಾಡಿಲ್ಲ. ನಾನು ಚೆನ್ನೈನಲ್ಲಿ ಪದವಿ ಕಲಿಯುತ್ತಿರುವ ವೇಳೆ ತಮಿಳು ಚಲ ನಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. “ಸ್ವಿಮ್ಮಿಂಗ್ ಫೂಲ್’ ಎಂಬ ಚಲನಚಿತ್ರಕ್ಕೆ ನಾಯಕ ನಟನಾಗಿ ಎಂಟ್ರಿ ಮಾಡಿದೆ. “ಜಾಕಿ ಜಾನ್’ ಎಂಬ ಚಿತ್ರದ ಮುಖೇನ ಕನ್ನಡ ಭಾಷೆಗೆ ಪಾದಾರ್ಪಣೆ ಮಾಡಿದೆ. 40 ವರ್ಷಗಳಲ್ಲಿ 9 ಭಾಷೆಯ 450ಕ್ಕೂ ಮಿಕ್ಕಿ ಚಲನಚಿತ್ರಗಳಲ್ಲಿ ನಟಿಸುವ ಭಾಗ್ಯ ದೊರಕಿದೆ.
ನಾನು ಈಗಾಗಲೇ ಸುಮಾರು 9 ಭಾಷೆಗಳಲ್ಲಿ ನಾನು ನಟಿಸಿದ್ದು, ಇದಕ್ಕೆ ನನ್ನ ಊರಿನ ದೈವ-ದೇವರ ಆಶೀರ್ವಾದವೇ ಕಾರಣ. ತೆಲುಗು ಚಿತ್ರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುವುದು ಸುಲ ಭವಲ್ಲ. ಅಭಿಮಾನಿಗಳು ನನ್ನ ನಟನೆಯನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ನಾನು ಚಿರರುಣಿ. ಕರಾವಳಿಯ ಹೊಸ ಪ್ರತಿಭೆಗಳಿಗೆ ನಿಮ್ಮ ಸಲಹೆ?
ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಮಯ ಪಾಲನೆ ಅತೀ ಮುಖ್ಯ. ಜತೆಗೆ ಅವರ ನಡವಳಿಕೆ ಕೂಡ ಉತ್ತಮ ವಾಗಿರಬೇಕು. ನಿರ್ದೇಶಕ, ನಿರ್ಮಾಪಕರ ಮಾತಿಗೆ ಬೆಲೆ ಕೊಟ್ಟು ಕೆಲಸ ಮಾಡಬೇಕು. ಚಿತ್ರೀಕರಣಕ್ಕೂ ಮುನ್ನ ಅಭ್ಯಾಸ ಅತೀ ಮುಖ್ಯ.
Related Articles
ಕನ್ನಡದಲ್ಲಿ “ಪ್ರೇಮಪೂಜ್ಯಂ’ ಎಂಬ ಚಲನಚಿತ್ರ ಚಿತ್ರೀಕರಣ ನಡೆಯುತ್ತಿದೆ. ತಮಿಳು-ಕನ್ನಡ ಭಾಷೆಯಲ್ಲಿ ತೆರೆಕಾಣ ಲಿರುವ ಹೊಸ ಚಿತ್ರವೊಂದರಲ್ಲೂ ನಟಿಸು ತ್ತಿದ್ದು ಇದೇ ತಿಂಗಳು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಉಳಿದಂತೆ ತಮಿಳು, ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದೇನೆ.
Advertisement
ತುಳು ಚಲನಚಿತ್ರ ಕ್ಷೇತ್ರ ಬೆಳೆಯುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?ತುಳು ಚಿತ್ರರಂಗದ ವ್ಯಾಪ್ತಿ ಮತ್ತಷ್ಟು ಪಸರಿಸಬೇಕು. ಇದಕ್ಕೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಬೇಕು. ತುಳು ಚಿತ್ರಕ್ಕೆ ಬೇರೆ ಜಿಲ್ಲೆಗಳಲ್ಲಿ ಚಿತ್ರ ಮಂದಿರದ ಸಮಸ್ಯೆ ಇದೆ. ತುಳು ಚಲನಚಿತ್ರಕ್ಕೆ ಬೇರೆ ಭಾಷೆಯ ನಟರನ್ನು ಪರಿಚಯಿಸಬೇಕು. ಆಗ ಡಬ್ಬಿಂಗ್ ಕಲಾವಿದರಿಗೆ ಕೆಲಸ ಸಿಗುತ್ತದೆ. ಗುಣ ಮಟ್ಟದ ಚಿತ್ರ ಬಂದರೆ ಅಭಿಮಾನಿಗಳು ಕೈಬಿಡುವುದಿಲ್ಲ. ತುಳು ಚಿತ್ರರಂಗದಲ್ಲಿ ನೀವು ನಟಿಸುವ ಬಗ್ಗೆ?
ಖಂಡಿತವಾಗಿಯೂ ಆಸೆ ಇದೆ. ಫೈಟ್ ಸೀನ್, ಹಾಡು ಒಳಗೊಂಡ ಕಥೆಯಲ್ಲಿ ಗಟ್ಟಿತನ ಇದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಕೆಲವು ಆಫರ್ ಬಂದಿತ್ತು. ಆದರೆ ಕೆಲವು ಕಾರಣದಿಂದ ನಟಿಸಲು ಸಾಧ್ಯವಾಗಲಿಲ್ಲ. ತುಳು ಚಿತ್ರದ ನಿರ್ದೇಶನ, ನಿರ್ಮಾಣ ಮಾಡುವ ಯೋಚನೆ ಇದೆ. ಈ ಚಿತ್ರದಲ್ಲಿ ತುಳು, ತಮಿಳು, ಕನ್ನಡ, ತೆಲುಗು, ಮಲಯಾಳ ಕಲಾವಿದರು ನಟಿಸುತ್ತಾರೆ. ಬೇರೆ ಭಾಷೆಗೆ ಅದು ಡಬ್ ಆಗಬೇಕು ಎಂಬ ಕನಸಿದೆ. ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬಕ್ಕೆ 175 ಎಕರೆ ಭೂಮಿ !
ಹೈದರಾಬಾದ್ ನಗರದಿಂದ ಹೊರವಲಯದಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ 175 ಎಕರೆ ಜಾಗ ತೆಗೆದುಕೊಂಡಿದ್ದೆ. ಇದನ್ನು ಕಾರ್ಗಿಲ್ ವಾರ್ ಹೀರೋಸ್‌ಗಳಿಗೆ ನೀಡಿದ್ದೇನೆ. ಇದರಲ್ಲಿ ಹುತಾತ್ಮ ಯೋಧರ ಕುಟುಂಬ ಮನೆ ಕಟ್ಟಬಹುದು. ಸದ್ಯ ಈ ಜಾಗದಲ್ಲಿ ಕೆಲವೊಂದು ತೊಡಕುಗಳಿದ್ದು, ಡಿಸೆಂಬರ್ ಅಂತ್ಯದ ವೇಳೆ ಪ್ರಧಾನಿ ಮುಖೇನ ಜಾಗ ಹಸ್ತಾಂತರಿಸುತ್ತೇನೆ. ದೇಶಕ್ಕೆ ಇದು ನನ್ನ ಸೇವೆ. ಸೈನಿಕ ಕುಟುಂಬಕ್ಕೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು. - ನವೀನ್ ಭಟ್ ಇಳಂತಿಲ