ಚಿತ್ತಾಪುರ: ರೈತರು ಗೋ ಆಧಾರಿತ ಸಾವಯವ, ಸಮಗ್ರ ಕೃಷಿಗೆ ಮುಂದಾಗಬೇಕು ಎಂದು ವಿಕಾಸ ಅಕಾಡೆಮಿ ಕೃಷಿ ಮುಖ್ಯಸ್ಥ ವಿ. ಶಾಂತರೆಡ್ಡಿ ಹೇಳಿದರು.
ತಾಲೂಕಿನ ಸಾತನೂರ ಗ್ರಾಮದ ಚಂದ್ರಕಾಂತ ಬಾಚನ್ ತೋಟದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ, ಕಲಬುರಗಿ ವಿಕಾಸ ಅಕಾಡೆಮಿ, ಬೆಂಗಳೂರಿನ ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗೋ ಆಧಾರಿತ ಸಾವಯವ, ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋ ಆಧಾರಿತ ಕೃಷಿ ಕೈಗೊಳ್ಳುವುದರಿಂದ ಸಾವಯವ ಕೃಷಿ ಮಾಡಬಹುದು. ಆರ್ಥಿಕಮಟ್ಟ ಸುಧಾರಿಸುತ್ತದೆ ಎಂದರಲ್ಲದೇ ಪ್ರಾಯೋಗಿಕವಾಗಿ ಗೋ ಕೃಪಾಮೃತ ತಯಾರಿಸಿ ತೋರಿಸಿದರು. ಕೃಷಿ ವಿಜ್ಞಾನ ಕೇಂದ್ರದ ಡಾ| ಮಂಜುನಾಥ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಯೂಸೋಫ ಅಲಿ, ಗ್ರಾಪಂ ಅಧ್ಯಕ್ಷ ಮಹಿಪಾಲ ಮೂಲಿಮನಿ ಮಾತನಾಡಿದರು.
ರೇಖಾ ತಳವಾರ, ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆಯ ವಲಯ ಅಧಿಕಾರಿ ಬಸವರಾಜ ನಾಯಿಕೋಡಿ ಸಂಘಮಿತ್ರ ಬ್ಯಾಂಕಿನ ಸೌಲಭ್ಯ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಸಾವಯವ ಹಾಗೂ ಸಮಗ್ರ ಕೃಷಿ ಮಾಡುತ್ತಿರುವ ಚಂದ್ರಕಾಂತ ಬಾಚನ್ ದಂಪತಿಯನ್ನು ಸನ್ಮಾನಿಸಲಾಯಿತು.
ಸಿದ್ರಾಮಪ್ಪ ಪೊಲೀಸ್ ಪಾಟೀಲ, ಬಸುಗೌಡ ದಂಡಗುಂಡ, ಮಹ್ಮದ್ ನಾಯಿಕೋಡಿ, ವಿಶ್ವನಾಥ ನೆನಕ್ಕಿ, ಬಸಯ್ಯ ಸ್ವಾಮಿ, ಶಂಭುಲಿಂಗ ಕರದಾಳ, ಶಿವಲಿಂಗಯ್ಯ ಸ್ವಾಮಿ ಕರದಾಳ, ಅಯ್ಯಪ್ಪ ಬೊಮ್ಮನಹಳ್ಳಿ, ಭೀಮರಾಯ ಕರದಾಳ, ಅನ್ನಪೂರ್ಣ ಹಾಗೂ ರಾವೂರ, ಕರದಾಳ, ಅಳ್ಳೋಳ್ಳಿ, ಬೊಮ್ಮನಹಳ್ಳಿ, ಹೊಸ್ಸೂರ, ಭಂಕಲಗಿ, ದಂಡಗುಂಡ, ಸಂಕನೂರ ಗ್ರಾಮದ ರೈತರು ಇದ್ದರು. ನಾಗಯ್ಯಸ್ವಾಮಿ ಅಲ್ಲೂರ ಸ್ವಾಗತಿಸಿದರು, ಅಕ್ಕಮಹಾದೇವಿ ದೇಸಾಯಿ ನಿರೂಪಿಸಿದರು, ಮನೋಹರ ಹಡಪದ ವಂದಿಸಿದರು.