ಚನ್ನಗಿರಿ: ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯೊಂದಿಗೆ ಪರಸ್ಪರ ಪ್ರೀತಿ-ನಂಬಿಕೆ ಇಟ್ಟುಕೊಂಡು ಸಾಗಬೇಕು. ಆಗ ಮಾತ್ರ ಜೀವನ ಎಂಬ ಹೋರಾಟದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮೌದ್ಗಲ್ ಸಮುದಾಯ ಭವನದಲ್ಲಿ ಸುವರ್ಣ ಕರ್ನಾಟಕ ಜನಜಾಗƒತಿ ಕಲಾ ಸಂಘದಿಂದ ಅಂಬೇಡ್ಕರ್ ಅವರ 65ನೇ ಪರಿನಿಬ್ಟಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಎರಡನೇ ವರ್ಷದ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಎಷ್ಟೋ ಜನರು ಅದ್ಧೂರಿ ವಿವಾಹಗಳನ್ನು ಮಾಡಿ ಜೀವನಪೂರ್ತಿ ಸಾಲ ತೀರಿಸಲು ಹೋರಾಟ ಮಾಡುವುದನ್ನು ಕಾಣುತ್ತೇವೆ.
ಸರಳ ವಿವಾಹಗಳಿಂದ ಖರ್ಚು ಕಡಿಮೆಯಾಗಿ ಸಮಾನತೆ ಸಂದೇಶ ಸಾರಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ.ಆಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ನವ ಜೋಡಿಗಳು ಉತ್ತಮ ಜೀವನ ಕಟ್ಟಿಕೊಂಡು ಮುನ್ನಡೆಯಬೇಕು. ಯಾವುದೇ ಸಂದರ್ಭದಲ್ಲೂ ಧೃತಿಗೆಡಬಾರದು ಎಂದರು.
ಬಡತನದಿಂದ ಕುಟುಂಬ ನಿರ್ವಹಣೆ ದುಸ್ತರವಾಗಿರುವ ಇಂದಿನ ಸಂದರ್ಭದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪಾಲಿಗೆ ವರದಾನ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವವರು ಶಿಸ್ತು, ಸಂಯಮದಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು. 18ಜೋಡಿದಾಂಪತ್ಯ ಜೀವನ ಪ್ರವೆಶಿಸಿದರು. ಪುರಸಭೆ ಅಧ್ಯಕ್ಷೆ ಲಕ್ಷಿ ¾àದೇವಮ್ಮ, ಮಾದಿಗ ಸಮಾಜದ ಅಧ್ಯಕ್ಷ ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ. ಯೋಗೇಶ್, ಕಾಂಗ್ರೆಸ್ ಯುವ ಮುಖಂಡ ವಡ್ನಾಳ್ ಜಗದೀಶ್, ಪುರಸಭೆ ಸದಸ್ಯ ಚಿಕ್ಕಣ್ಣ ಮತ್ತಿತರರು ಇದ್ದರು.