ಉಪ್ಪುಂದ: ಇಂದಿನ ದಿನಗಳಲ್ಲಿ ಮಾತೃ ಭಾಷೆಯ ಸೊಗಡನ್ನು ಪಸರಿಸಲು ವಿದ್ಯಾರ್ಥಿ ಸಮೂಹ ಶ್ರಮಿಸುವುದು ಅಗತ್ಯವಾಗಿದ್ದು, ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರು ಒಟ್ಟಾಗಿ ಕೈ ಜೋಡಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ-2018ರ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕೆರ್ಗಾಲು ಗ್ರಾ.ಪಂ. ಅಧ್ಯಕ್ಷೆ ಸೋಮು ರಾಷ್ಟ್ರ ಧ್ವಜಾ ರೋಹಣ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಸಮ್ಮೇಳನಾಧ್ಯಕ್ಷ ಡಾ| ಶಾಂತಾರಾಮ, ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತಾಲೂಕು ಕಸಾಪ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್, ಕಂಬದಕೋಣೆ ಸ.ಪ.ಪೂ. ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಕುಲ್ ಜಿ. ಶೆಟ್ಟಿ, ಕೆರ್ಗಾಲು ಗ್ರಾ.ಪಂ. ಉಪಾಧ್ಯಕ್ಷ ಸುಂದರ ಕೊಠಾರಿ, ಪುಂಡಲಿಕ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕಂಬದಕೋಣೆ ಸ.ಪ.ಪೂ. ಕಾಲೇಜು ಶಿಕ್ಷಕ ರವೀಂದ್ರ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಅತಿ ಪ್ರಾಚೀನ ತಾಳೆಗರಿಯೆ?
ಕನ್ನಡ ನಾಡು ನುಡಿಯನ್ನು ಉಳಿಸಲು ಯುವ ಮನಸ್ಸುಗಳು ಕಾರ್ಯಪ್ರವರ್ತರಾಗಬೇಕು.
ನೀಲಾವರ ಸುರೇಂದ್ರ ಅಡಿಗ, ಕಸಾಪ ಜಿಲ್ಲಾಧ್ಯಕ್ಷ