Advertisement

ಪ್ರತಿ ಗ್ರಾಮಕ್ಕೂ ಸೌಲಭ್ಯ ದೊರೆಯಲಿ: ಹಿಟ್ನಾಳ

12:36 PM Aug 14, 2020 | Suhan S |

ಕೊಪ್ಪಳ: ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಪ್ರತಿ ಗ್ರಾಮಕ್ಕೂ ಮೂಲಭೂತ ಸೌಲಭ್ಯ ದೊರೆಯಬೇಕು. ಅಂದಾಗ ಮಾತ್ರ ಅವರ ಕನಸು ನನಸಾಗಲಿದೆ. ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ನಡೆದಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 70 ಲಕ್ಷದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಪ್ರತಿ ಗ್ರಾಮಗಳು ಮೂಲ ಭೂತ ಸೌಕರ್ಯ ಹೊಂದಬೇಕು. ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರಸ್ತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯಗಳ ಸೌಲಭ್ಯಗಳನ್ನು ಕಲ್ಪಿಸಿದಾಗ ಗ್ರಾಮಗಳು ಅಭಿವೃದ್ಧಿಯತ ಸಾಗುತ್ತವೆ. ಈಗಾಗಲೆ ಕ್ಷೇತ್ರ ಪ್ರತಿ ಗ್ರಾಮಗಳಿಗೆ ಜನಸಂಖ್ಯೆ ಅನುಗುಣವಾಗಿ ಅನುದಾನ ಮಂಜೂರು ಮಾಡಿಸಿ ಅವಶ್ಯವಿರುವ ಮೂಲಭೂತ ಸೌಕರ್ಯಗಳ ಜೊತೆ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದೆ. ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮದ ಜನತೆ ಗುಣಮಟ್ಟದ ಕಾಮಗಾರಿಗೆ ಕೈಜೋಡಿಸಿ ಗುತ್ತಿಗೆದಾರರಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣಕ್ಕೆ ಸಹಕರಿಸಿದಾಗ ಮಾತ್ರ ಸರ್ಕಾರ ಕೊಡುವ ಅನುದಾನಕ್ಕೆ ಮಹತ್ವ ಬರುತ್ತದೆ ಎಂದರು.

ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ನಗರಸಭೆ ಸದಸ್ಯ ಅಕ್ಬರ ಪಾಷಾ ಪಲ್ಟನ್‌, ಮುಂಖಡರಾದ ಕುಬೇರ ಮಜ್ಜಿಗೆ, ಅಣ್ಣಪ್ಪ ಪೂಜಾರ, ಶಿವರಾಮಪ್ಪ ಗಬ್ಬೂರು, ಹನುಮಂತ ಕುರಿ, ರಮೇಶ ಹಳ್ಳಿ, ಅಮಾಜಪ್ಪ ಕುರಿ, ಮಂಜುನಾಥಗೌಡ, ವಕ್ತಾರ ಕುರಗೋಡ ರವಿ ಯಾದವ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next