Advertisement

ಶಿಕ್ಷಣ ಸಂಸ್ಥೆಗಳು ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಲಿ

08:49 PM Jul 13, 2021 | Girisha |

ವಿಜಯಪುರ: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಆರೋಗ್ಯ ಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿಯೂ ಆಗಿರುವ ಮಾಜಿ ಸಚಿವ ಡಾ| ಎಂ.ಬಿ. ಪಾಟೀಲ ಕಿವಿಮಾತು ಹೇಳಿದರು.

Advertisement

ನಗರದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯದ ನೂತನ ಉಪ ಕುಲಪತಿಯಾಗಿ ಡಾ|ಆರ್‌. ಎಸ್‌.ಮುಧೋಳ ಅ ಧಿಕಾರ ಸ್ವೀಕಾರ ಸಂದರ್ಭದಲ್ಲಿ ಅವರು ಮಾತನಾಡಿದರು. ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯ ಮಾಡಿದ ಸಾಧನೆ ದೇಶದ ಗಮನ ಸೆಳೆದಿದೆ. ಮಹಾನಗರಗಳಿಂದ ಎಲ್ಲ ಸಂಪರ್ಕ ವಂಚಿತ ಪ್ರದೇಶದಲ್ಲಿರುವ ವಿಜಯಪುರದ ನಮ್ಮ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಈ ಎಲ್ಲ ಸವಾಲುಗಳನ್ನು ಮೀರಿ, ಜಾಗತೀಕ ಮಟ್ಟದಲ್ಲಿ ನಾವು ಮುನ್ನಡೆಯಬೇಕಿದೆ ಎಂದರು. ನೂತನ ಉಪ ಕುಲಪತಿಗಳಾಗಿ ಪೂರ್ಣಾವಧಿ ಗೆ ಅ ಧಿಕಾರ ವಹಿಸಿಕೊಂಡ ಡಾ|ಆರ್‌.ಎಸ್‌.ಮುಧೋಳ ಮಾತನಾಡಿ, ಸಂಸ್ಥೆಯ ಹಿರಿಯರು, ಹಿಂದಿನ ಕುಲಪತಿಗಳ ಆಶಯದಂತೆ ಬಿಎಲ್‌ಡಿಇ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಉನ್ನತ ವಿಶ್ವವಿದ್ಯಾಲಯವಾಗಿ ರೂಪಿಸಲು ಎಲ್ಲರ ಸಹಕಾರ ಆಗತ್ಯವಿದೆ. ನಿಮ್ಮೆಲ್ಲರ ಸಹಕಾರಿಂದ ಸಂಸ್ಥೆಯ ಅಭ್ಯುದಯಕ್ಕೆ ಶ್ರಮಿಸುತ್ತೇನೆ.

ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ನಾವು ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ರೂಪಿಸಿಕೊಳ್ಳಬೇಕು. ಜಾಗತೀಕವಾಗಿ ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಆಗು-ಹೋಗುಗಳನ್ನು ಗಮನದಲ್ಲಿರಿಸಿ, ಅದಕ್ಕೆ ತಕ್ಕಂತೆ ನಾವು ನೀತಿ ನಿರೂಪಣೆಗಳನ್ನು ರೂಢಿಸಿಕೊಳ್ಳಬೇಕು ಎಂದರು. ಬಿಎಲ್‌ಡಿಇ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ಆಡಳಿತಾಧಿ ಕಾರಿ ಡಾ|ಆರ್‌.ವಿ.ಕುಲಕರ್ಣಿ, ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ| ಅರವಿಂದ ಪಾಟೀಲ, ಆಸ್ಪತ್ರೆ ಅ ಧೀಕ್ಷಕ ಡಾ|ರಾಜೇಶ ಹೊನ್ನುಟಗಿ, ಪ್ರಾಧ್ಯಾಪಕ ಡಾ|ಕುಶಾಲ ದಾಸ, ಡಾ|ಅರುಣ ಇನಾಮದಾರ, ರಿಜಿಸ್ಟಾರ್‌ ಡಾ| ಜೆ.ಜಿ.ಅಂಬೇಕರ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next