Advertisement
ಅಮೂಲ್ಯ ರತ್ನಗಳು ಉದಿಸಲಿವಿದ್ಯಾರ್ಥಿಗಳಿಗೆ ಸಣ್ಣ ಸೂತ್ರ ಅಥವಾ ಉದಾಹರಣೆಗಳ ಮೂಲಕ ಶಾಲೆಯಲ್ಲಿ ಪಠ್ಯವನ್ನು ಅರ್ಥೈಸುವ ರೀತಿಯಲ್ಲಿ ಸಣ್ಣ ಅಂಶಗಳ ಮೂಲಕವೇ ಬ್ರಹ್ಮಾಂಡ ಜ್ಞಾನ ಲಭಿಸುವ ಸೂತ್ರಗಳಿಗೆ ವಿದ್ಯಾ ಕೇಂದ್ರಗಳಲ್ಲಿ ಆದ್ಯತೆ ನೀಡಬೇಕು. ಶ್ರೇಷ್ಠ ಜ್ಞಾನವನ್ನು ಸಂಗ್ರಹಿಸಿಡುವ ಕೇಂದ್ರ ವಿಶ್ವವಿದ್ಯಾನಿಲಯ. ಇಲ್ಲಿ ಮಾಹಿತಿ ಜತೆಗೆ ಜ್ಞಾನವೂ ಸಿಗುತ್ತದೆ. ವಿ.ವಿ. ಕಾಲೇಜುಗಳು ಬಾಹ್ಯ ಸೌಕರ್ಯಗಳ ಜತೆಗೆ ಜ್ಞಾನ ಭಂಡಾರವಾದಾಗ ಅಮೂಲ್ಯ ರತ್ನಗಳು ಸೃಷ್ಟಿಯಾಗುತ್ತವೆ ಎಂದವರು ಹೇಳಿದರು.
ಕೇಂದ್ರದ ಮಾಜಿ ಸಚಿವ ಹಾಗೂ ವಿ.ವಿ. ಕಾಲೇಜು ಹಳೆ ವಿದ್ಯಾರ್ಥಿ ಡಾ| ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರೇಷ್ಠ ಶಿಕ್ಷಣದ ತಳಹದಿಯ ಮೇಲೆ ಮಂಗಳೂರು ವಿ.ವಿ. ಕಾಲೇಜು ನಿಂತಿದೆ. ಇಲ್ಲಿರುವ ಅತ್ಯುತ್ತಮ ಗ್ರಂಥಾಲಯ ದೇಶದ ಬೇರೆ ಯಾವ ಕಾಲೇಜಿನಲ್ಲಿಯೂ ಇಲ್ಲ. ಅದು ಡಿಜಿಟಲೀಕರಣವಾಗಬೇಕು ಎಂದರು.
Related Articles
Advertisement
ಪ್ರಾಂಶುಪಾಲ ಡಾ| ಉದಯ… ಕುಮಾರ್ ಎಂ.ಎ. ಸ್ವಾಗತಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ| ಜಯವಂತ ನಾಯಕ್ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಲತಾ ಎ. ಪಂಡಿತ್, ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕುಮಾರ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಸ್ತು ಪ್ರದರ್ಶನದ ಸೊಬಗುಕಾಲೇಜಿನ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರವೀಂದ್ರ ಕಲಾ ಭವನದಲ್ಲಿ ತುಳುನಾಡಿನ ಗತಕಾಲದ ವೈಭವವನ್ನು ಪ್ರಸ್ತುತಪಡಿಸುವ ಪುರಾತನ ವಸ್ತು ಸಂಗ್ರಹದ ಪ್ರದರ್ಶನ, ವಿದ್ಯಾರ್ಥಿಗಳ ಕೈಚಳಕದ ವಿಜ್ಞಾನ ಮಾದರಿಗಳು, ಚಿತ್ರಕಲೆ, ಹಳೆ ನಾಣ್ಯ-ನೋಟುಗಳು, ಅಂಚೆ ಚೀಟಿ ಪ್ರದರ್ಶನ ಗಮನಸೆಳೆಯುತ್ತಿದೆ. ಗುರುವಾರ ಆರಂಭವಾದ ವಸ್ತು ಪ್ರದರ್ಶನ ಮೂರು ದಿನ ನಡೆಯಲಿದೆ. ಸ್ಮರಣ ಸಂಚಿಕೆ “ವಿಶ್ವ ಪಥ’ ಹಾಗೂ ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ವಿ.ವಿ. ಕಾಲೇಜನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ.