Advertisement

ಧರಂ ರಾಜಕೀಯ ಜೀವನ ಪುಸ್ತಕ ರೂಪ ಪಡೆಯಲಿ

12:40 PM Jul 29, 2017 | |

ಧಾರವಾಡ: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ 40 ವರ್ಷದ ರಾಜಕೀಯ ಜೀವನ ಪುಸ್ತಕ ರೂಪದಲ್ಲಿ ಹೊರಬರಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ ಹೇಳಿದರು. 

Advertisement

ನಗರದ ಕವಿಸಂನಲ್ಲಿ ಗುರುವಾರ ಸಂಜೆ ಅನೀಶ ಚಿಂಚೋರೆ ಗೆಳೆಯರ ಬಳಗ ಹಾಗೂ ಅನೀಶ ಚಿಂಚೋರೆ ಮೆಮೋರಿಯಲ್‌ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಿಎಂ ಧರ್ಮಸಿಂಗ್‌ ಹಾಗೂ ಎನ್‌ಎಸ್‌ಯುಐ ಧಾರವಾಡ ಜಿಲ್ಲಾ ಮಾಜಿ ಅಧ್ಯಕ್ಷ ಅನೀಶ ಚಿಂಚೋರೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

ಧರ್ಮಸಿಂಗ್‌ ಅವರು ಎಲ್ಲ ಜಾತಿ, ಜನಾಂಗಕ್ಕೂ ಸಮಾನ ಅವಕಾಶ ಕಲ್ಪಿಸಿದ್ದರು. ಅವರೇ ನನಗೆ ಟಿಕೆಟ್‌ ನೀಡಿ ಶಾಸಕನಾಗಲು ಪ್ರೇರಣೆ ನೀಡಿದ್ದರು. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ ಅವರ ಸ್ನೇಹ ಇತರರಿಗೆ ಮಾದರಿಯಾಗಿತ್ತು ಎಂದರು. ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಧರ್ಮಸಿಂಗ್‌ ಅವರು ಯುವ ರಾಜಕಾರಣಿಗಳಿಗೆ ಆದರ್ಶ ಪ್ರಾಯರಾಗಿದ್ದರು.

ಅವರ ಒಡನಾಟವೇ ನಮ್ಮನ್ನು ಇಂದು ಸರ್ವಜನಾಂಗವನ್ನು ಮುನ್ನಡೆಸಿಕೊಂಡು ಹೋಗುವ ಹಾಗೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಶಕ್ತಿ ನೀಡಿದೆ. ಅಲ್ಲದೆ, ಧಾರವಾಡಕ್ಕೆ ಹೈಕೋರ್ಟ್‌ ಸಂಚಾರಿ ಪೀಠ ದೊರೆತದ್ದು ಅವರು ಸಿಎಂ ಆಗಿದ್ದ ಕಾಲದಲ್ಲಿ. ಅವರ ಈ ಕೊಡುಗೆಯನ್ನು ಉ.ಕ. ಜನತೆ ಎಂದಿಗೂ ಮರೆಯುವುದಿಲ್ಲ ಎಂದರು. 

ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ವಿ. ಮಾಡಳ್ಳಿ, ಕೆಪಿಸಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಭಾಗದ ಎಚ್‌.ಎಫ್‌. ಜಕ್ಕಪ್ಪನವರ, ಹಿರಿಯ ಪತ್ರಕರ್ತ ರಂಜಾನ್‌ ದರ್ಗಾ ಮಾತನಾಡಿದರು. ಇದಕ್ಕೂ ಮುನ್ನ ಧರ್ಮಸಿಂಗ್‌ ಮತ್ತು ಅನೀಶ ಚಿಂಚೋರೆ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. 

Advertisement

ಮಹಿಳಾ ಘಟಕದ ಮಹಾನಗರ ಜಿಲ್ಲಾಧ್ಯಕ್ಷೆ ಜಿ. ದೇವಕಿ ಯೋಗಾನಂದ, ಕರ್ನಾಟಕ ಮುಕ್ತ ವಿವಿ ಸಿಂಡಿಕೇಟ್‌ ಸದಸ್ಯ ಹಜರತ್‌ ಅಲಿ ಗೊರವನಕೊಳ್ಳ, ಗೋಟಗೋಡಿ ಜಾನಪದ ವಿವಿ ಕುಲಸಚಿವ ವಿ.ಸಿ. ಚಂದ್ರಶೇಖರ, ಧಾರವಾಡ ಎಪಿಎಂಸಿ ಅಧ್ಯಕ್ಷ ಬಸಣ್ಣ ಪ್ಯಾಟಿ, ಅಂಜುಮನ್‌ ಸಂಸ್ಥೆ ಮಾಜಿ ಅಧ್ಯಕ್ಷ ಐ.ಎಂ. ಜವಳಿ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ, ಎಪಿಎಂಸಿ ಸದಸ್ಯ ಮಹಾವೀರ ಜೈನರ,

-ಎನ್‌ಎಸ್‌ಯುಐ ರಾಷ್ಟ್ರೀಯ ಮಾಜಿ ಪ್ರತಿನಿಧಿ ರಜತ್‌ ಉಳ್ಳಾಗಡ್ಡಿಮಠ, ಮಹಾನಗರ ಜಿಲ್ಲಾಧ್ಯಕ್ಷ ಶಿವಕುಮಾರ ರಾಯನಗೌಡರ, ಯುವ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನೋದ ಅಸೂಟಿ, ಡಿಎಫ್‌ಒ ಏಡ್ವಿನ್‌ ಡಿಸೋಜಾ, ಪ್ರಕಾಶ ಘಾಟಗೆ ಇತರರಿದ್ದರು. ಪ್ರಭಾ ಚಂದ್ರಶೆಟ್ಟಿ ಪ್ರಾರ್ಥಿಸಿದರು. ಆನಂದ ಜಾಧವ ನಿರೂಪಿಸಿದರು. ಹೇಮಂತ ಗುರ್ಲಹೊಸುರ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next